ಮೈಸೂರು ಕಾರ್ಯಾಗಾರದಲ್ಲಿ ಮೆಮು ರೈಲಿನ ಅತಿವೇಗದ ಗಾಲಿ ತಯಾರಿ

By Kannadaprabha NewsFirst Published Sep 1, 2020, 9:03 AM IST
Highlights

 ಮೈಸೂರಿನ ಅಶೋಕಪುರಂ ನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ ಮೆಮು ರೈಲಿನ ಹೈಸ್ಪೀಡ್‌ ಗಾಲಿ ತಯಾರಿಸಲಾಗುತ್ತಿದೆ. ದೇಶದಲ್ಲಿ ಇದು ಮೊದಲ ಪ್ರಯತ್ನವಾಗಿದೆ.

 ಮೈಸೂರು (ಸೆ.01):  ಮೈಸೂರಿನ ಅಶೋಕಪುರಂ ನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ ಮೆಮು ರೈಲಿನ ಹೈಸ್ಪೀಡ್‌ ಗಾಲಿ ತಯಾರಿಸಲಾಗುತ್ತಿದೆ. ದೇಶದ ರೈಲ್ವೆ ಕಾರ್ಯಾಗಾರಗಳಲ್ಲೇ ಇದು ಮೊದಲ ಪ್ರಯತ್ನ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

160 ಕಿ.ಮೀ. ವೇಗ ಸಾಮರ್ಥ್ಯದ ಈ ಗಾಲಿಗಳನ್ನು ಭಾರತೀಯ ರೈಲ್ವೆ ನೈರುತ್ಯ ರೈಲ್ವೆ ವಿಭಾಗದ ಉಸ್ತುವಾರಿಯಲ್ಲಿ ಆರು ಜೊತೆ ಗಾಲಿ ಸಿದ್ಧವಾಗಿವೆ. ಈಗಾಗಲೇ ಭಾರತ್‌ ಅಥ್‌ರ್‍ ಮೂವರ್ಸ್‌ ಲಿಮಿಟೆಡ್‌ಗೆ (ಬೆಮಲ್) ರವಾನಿಸಲಾಗಿದೆ. ರೈಲ್ವೆ ಮಂಡಳಿ ಸಲ್ಲಿಸಿರುವ ಬೇಡಿಕೆ ಮೇರೆಗೆ ಬೆಮಲ್‌ ಅಭಿವೃದ್ಧಿ ಪಡಿಸುತ್ತಿರುವ ಎಂಟು ಬೋಗಿಗಳ ಮೆಮು ರೈಲಿಗೆ ಈ ಗಾಲಿ ಅಳವಡಿಸಲಾಗುತ್ತದೆ.

ರಾಜೇಂದ್ರ ಶ್ರೀಗಳ ಜಯಂತಿ : ಮೃಗಾಲಯಕ್ಕೆ 1 ಲಕ್ಷ ರು. ದೇಣಿಗೆ...

ಇದರಿಂದ ಅತಿ ವೇಗದ ರೈಲುಗಳನ್ನು ಓಡಿಸುವುದು ಇನ್ನಷ್ಟುಸುಲಭವಾಗಲಿದೆ. ಗಾಜಿಯಾಬಾದ್‌ ಮತ್ತು ನವದೆಹಲಿ ವಿಭಾಗದಲ್ಲಿ ಈ ರೈಲು ಸಂಚರಿಸಲಿದೆ. ಈ ಗಾಲಿಗಳನ್ನು ಬಳಸಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಮೆಮು ರೈಲು ಚಲಿಸಲು ಸಾಧ್ಯವಾಗುತ್ತದೆ. ಗಾಲಿಗಳ ತಯಾರಿಕೆಗಾಗಿ 2.4 ಕೋಟಿ ರು.ಗಳ ಮೊತ್ತದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಅಗತ್ಯವಾದ ಎಲ್ಲಾ ಸಾಮಗ್ರಿಗಳನ್ನು ಬೆಮಲ್‌ ಪೂರೈಸಲಿದೆ. 225 ಟ್ರೈಲರ್‌ ಕೋಚ್‌ ಬೋಗಿಗಳಿಗೆ 900 ಜೊತೆ ಟ್ರೈಲರ್‌ ಕೋಚ್‌ ಗಾಲಿಗಳು. 75 ಮೋಟಾರ್‌ ಕೋಚ್‌ ಬೋಗಿಗಳಿಗೆ 300 ಜೊತೆ ಮೋಟಾರ್‌ ಕೋಚ್‌ ಗಾಲಿಗಳಿಗೆ ಬೆಮಲ್‌ ಬೇಡಿಕೆ ಮಂಡಿಸಿದೆ.

click me!