
ಲಂಡನ್(ಡಿ.21): ವಿಶ್ವದ ಅತ್ಯಂತ ಸಣ್ಣ ಮೊಬೈಲ್ ಫೋನ್'ಅನ್ನು ಲಂಡನ್ ಮೂಲದ ಕಂಪನಿ ಬಿಡುಗಡೆ ಮಾಡಿದೆ. ಜಂಕೋ ಟೊನಿ ಟಿ1 ಎಂಬ ಹೆಸರಿನ ಈ ಫೋನ್ ಉದ್ದ 0.49 ಇಂಚು ಮಾತ್ರವಿದೆ. ಜಂಕೋ ಫೋನಿನ ಒಟ್ಟಾರೆ ಸುತ್ತಳತೆ 46.7*21*12ಮಿಮಿ ಇದ್ದು, ತೂಕ 13 ಗ್ರಾಂ ಇದೆ. ನ್ಯಾನೋ ಸಿಮ್'ಗೆ ಮಾತ್ರ ಈ ಮೊಬೈಲ್ ಬೆಂಬಲ ನೀಡುತ್ತದೆ.
ಫೋನ್'ನಲ್ಲಿರುವ ಇತರ ಫೀಚರ್'ಗಳು
· ಫೋನ್ ಬುಕ್'ನಲ್ಲಿ 300 ಸಂಪರ್ಕ ಹೆಸರುಗಳನ್ನು ಮಾತ್ರ ಸ್ಟೋರೇಜ್ ಇಟ್ಟುಕೊಳ್ಳಬಹುದು
· 32 ಎಂಬಿ ರಾಮ್
· 50 ಎಸ್'ಎಂಎಸ್ ಸ್ಟೋರೇಜ್
· ಕಾಲ್ ಲಾಗ್'ನಲ್ಲಿ 50 ಒಳ ಹಾಗೂ ಹೊರ ಹೋಗುವ ಕರೆಗಳನ್ನು ಮಾತ್ರ ಅವಕಾಶ
· ಬ್ಲೂಟೂತ್, ಯುಎಸ್'ಬಿ ಹಾಗೂ 2ಜಿ ಇಂಟರ್'ನೆಟ್ ಸಂಪರ್ಕ, 3ಜಿ ಅಥವಾ 4ಜಿ ಬೆಂಬಲ ನೀಡುವುದಿಲ್ಲ
· 32*64 ಪಿಕ್ಸೆಲ್ ರೆಸಲ್ಯೂಶನ್, 200 ಎಂಎಹೆಚ್ ಬ್ಯಾಟರಿ
ಸದ್ಯ ಮಾರುಕಟ್ಟೆಯಲ್ಲಿ ಈ ಮೊಬೈಲ್ ಬೆಲೆ 30 ಯೂರೋಗಳಿದ್ದು, ಭಾರತದ ರೂಪಾಯಿಗಳಿಗೆ 2280 ರೂ. ಮೌಲ್ಯವಾಗುತ್ತದೆ. ಮುಂದಿನ ವರ್ಷದ 2018ರಲ್ಲಿ ವಿವಿಧ ದೇಶಗಳ ಮಾರುಕಟ್ಟೆಗೆ ಈ ಫೋನ್ ಬಿಡುಗಡೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.