
ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಎಂತಹ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಜೇಬಿನಿಂದ ಜಾರಿ ಬಿದ್ದ ಪುಟ್ಟ ವೈರ್‌ಲೆಸ್ ಇಯರ್‌ಬಡ್‌ಗಾಗಿ ವ್ಯಕ್ತಿ ಸುಮಾರು 10 ನಿಮಿಷಗಳ ಕಾಲ ಹುಡುಕಾಡಿದ್ದಾರೆ. ಅದು ಸಿಗದಿದ್ದಾಗ ಕೊನೆಗೆ ChatGPT ಸಹಾಯ ಪಡೆದು ಕೇವಲ ಐದು ನಿಮಿಷಗಳೊಳಗೆ ಇಯರ್‌ಬಡ್ ಪತ್ತೆಹಚ್ಚಿದ್ದಾರೆ.
ರೆಡ್ಡಿಟ್‌ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿರುವ ಇತ, ತಮ್ಮ ಬೋಸ್ (Bose) ಕಂಪನಿಯ ವೈರ್‌ಲೆಸ್ ಇಯರ್‌ಬಡ್‌ಗಳಲ್ಲಿ ಒಂದು ಹುಡಿಯಿಂದ ಜಾರಿ ಬಿದ್ದು, ಜಲ್ಲಿಕಲ್ಲುಗಳ ನಡುವೆ ಬಿದ್ದಿತ್ತು ಎಂದು ಹೇಳಿದ್ದಾರೆ. ಸುತ್ತಮುತ್ತ ಹುಡುಕಿದರೂ ಅದು ಸಿಗಲಿಲ್ಲ. ಬಿಳಿ ಬಣ್ಣದ ಸಣ್ಣ ಇಯರ್‌ಬಡ್ ಬಿಳಿ ಜಲ್ಲಿಕಲ್ಲುಗಳ ನಡುವೆ ಬಿದ್ದಿದ್ದರಿಂದ ಅದನ್ನು ಗುರುತಿಸುವುದೇ ಕಷ್ಟವಾಗಿತ್ತು.
ಸಾಮಾನ್ಯವಾಗಿ ಇಯರ್‌ಬಡ್ ಕಳೆದುಹೋದಾಗ ಮೊಬೈಲ್‌ನಿಂದ ಹಾಡು ಹಾಕಿ ಹುಡುಕುವ ಪ್ರಯತ್ನ ಮಾಡಬಹುದು. ಆದರೆ ಈ ಸಂದರ್ಭದಲ್ಲಿ ಅದು ಸಾಧ್ಯವಾಗಿರಲಿಲ್ಲ . ಈ ಇಯರ್‌ಬಡ್ ಕಿವಿಗೆ ಹಾಕಿದ ತಕ್ಷಣ ಆನ್ ಆಗುವುದರಿಂದ ಈ ಟ್ರೀಕ್ ಬಳಸಲು ಬರಲಿಲ್ಲ. ಸುಮಾರು 10 ನಿಮಿಷಗಳ ಹುಡುಕಾಟದ ಬಳಿಕ ಬೇರೆ ದಾರಿ ಕಾಣದೆ ಅವರು ChatGPT ಮೊರೆ ಹೋದರು. ತಾವು ತೆಗೆದಿದ್ದ ಸ್ಥಳದ ಫೋಟೋವನ್ನು ChatGPTಗೆ ಅಪ್‌ಲೋಡ್ ಮಾಡಿ, ಇಯರ್‌ಬಡ್ ಎಲ್ಲಿದೆ ಎಂದು ಗುರುತಿಸಲು ಸಹಾಯ ಕೇಳಿದರು.
ಫೋಟೋವನ್ನು ಪರಿಶೀಲಿಸಿದ ChatGPT, ಜಲ್ಲಿಕಲ್ಲುಗಳ ನಡುವೆ ಬಿದ್ದಿದ್ದ ಇಯರ್‌ಬಡ್ ಇರುವ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ತೋರಿಸಿತು. ಅದರ ಸೂಚನೆಯಂತೆ ಹುಡುಕಿದಾಗ ಇಯರ್‌ಬಡ್ ಸಿಕ್ಕಿದೆ ಎಂದು ಬಳಕೆದಾರರು ತಿಳಿಸಿದ್ದಾರೆ. “ಐದು ನಿಮಿಷವೂ ಬೇಕಾಗಲಿಲ್ಲ. ChatGPT ನಿಜವಾಗಿಯೂ ಅದನ್ನು ಪತ್ತೆಹಚ್ಚಿತು. ಅದರ ಸಹಾಯವಿಲ್ಲದೆ ನನಗೆ ಅದು ಸಿಗುತ್ತಿರಲಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ” ಎಂಬ ಅರ್ಥದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಫೋಟೋ ಅಪ್‌ಲೋಡ್ ಮಾಡುವುದರಿಂದ ಹಿಡಿದು ಇಯರ್‌ಬಡ್‌ನ್ನು ಮರಳಿ ಪಡೆದುಕೊಳ್ಳುವವರೆಗಿನ ಸಂಪೂರ್ಣ ಪ್ರಕ್ರಿಯೆ ಐದು ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಮುಗಿದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಈ ಘಟನೆ AI ತಂತ್ರಜ್ಞಾನವು ಕೇವಲ ಬರವಣಿಗೆ, ಮಾಹಿತಿ ಹುಡುಕಾಟ ಅಥವಾ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ತೋರಿಸಿದೆ. ಚಿತ್ರದಲ್ಲಿರುವ ಸಣ್ಣ ವಸ್ತುಗಳನ್ನು ಗುರುತಿಸುವಂತಹ ದೈನಂದಿನ ಕೆಲಸಗಳಲ್ಲಿಯೂ ಇದು ಸಹಾಯಕವಾಗಬಹುದು ಎಂಬ ಚರ್ಚೆಗೆ ಕಾರಣವಾಗಿದೆ.
ಆದರೆ ಇಂತಹ ಫಲಿತಾಂಶಗಳು ಫೋಟೋದ ಗುಣಮಟ್ಟ, ಬೆಳಕು, ವಸ್ತುವಿನ ಬಣ್ಣ ಮತ್ತು ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುತ್ತವೆ. ಪ್ರತಿಯೊಂದು ಸಂದರ್ಭದಲ್ಲೂ AI ನಿಖರವಾಗಿ ವಸ್ತುವನ್ನು ಪತ್ತೆಹಚ್ಚುತ್ತದೆ ಎಂಬ ಖಾತರಿ ಇಲ್ಲ. ಆದರೂ, ಕಳೆದುಹೋದ ಪುಟ್ಟ ಇಯರ್‌ಬಡ್‌ಗಾಗಿ ಹುಡುಕಾಡುತ್ತಿದ್ದ ವ್ಯಕ್ತಿಗೆ ChatGPT ನೆರವಾಗಿದ್ದು ಅಚ್ಚರಿಯ ಅನುಭವವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.