ಗುಡ್ ನ್ಯೂಸ್ : ಭಾರತದಲ್ಲಿ ಭಾರಿ ಅಗ್ಗದ ದರದಲ್ಲಿ ಆ್ಯಪಲ್‌ ಐಫೋನ್‌

By Web Desk  |  First Published Jul 13, 2019, 9:50 AM IST

ಐ ಫೋನ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್. ಶೀಘ್ರದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಐ ಫೋನ್ ಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.


ನವದೆಹಲಿ [ಜು.13]: ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಆ್ಯಪಲ್‌ ಐಫೋನ್‌ಗಳು ಆಗಸ್ಟ್‌ ವೇಳೆಗೆ ಭಾರತದಲ್ಲಿ ಅಗ್ಗದ ದರದಲ್ಲಿ ಸಿಗಲಿವೆ. 

‘ಮೇಡ್‌ ಇನ್‌ ಇಂಡಿಯಾ’ ಉತ್ಕೃಷ್ಟಮಟ್ಟದ ಐಫೋನ್‌ಗಳು ಇವಾಗಿದ್ದು, ಮುಂದಿನ ತಿಂಗಳು ಮಾರುಕಟ್ಟೆಪ್ರವೇಶಿಸಲಿದೆ. ಕಂಪನಿ ಈಗಾಗಲೇ ಇದಕ್ಕೆ ಸಿದ್ಧತೆ ಮಾಡಿಕೊಂಡಿದೆ. 

Tap to resize

Latest Videos

undefined

ಆ್ಯಪಲ್‌ ಕಂಪನಿ ಬಿಡಿ ಭಾಗಗಳ ಜೋಡಣೆಗಾಗಿ ಚೀನಾ ಮೂಲದ ಕಂಪನಿ ಫಾಕ್ಸ್‌ಕೋನ್‌ ಭಾರತೀಯ ಘಟಕದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲೇ ಅಸೆಂಬ್ಲಿಂಗ್‌ ಮಾಡುತ್ತಿದೆ. 

ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಐಫೋನ್‌ಗಳು ಅಗ್ಗದ ದರದಲ್ಲಿ ಸಿಗುವಂತೆ ಮಾಡುವ ಉದ್ದೇಶ ಹೊಂದಿದೆ. ಐಫೋನ್‌ ಎಕ್ಸ್‌ಆರ್‌ ಮತ್ತು ಎಕ್ಸ್‌ಎಸ್‌ ಡಿವೈಸ್‌ಗಳು ಆಗಸ್ಟ್‌ನಲ್ಲಿ ಮಾರುಕಟ್ಟೆಪ್ರವೇಶಿಸಲಿದ್ದು, ಪರವಾನಿಗೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

click me!