
ಬೆಂಗಳೂರು(ಸೆ.06): ಇಸ್ರೋದ ಚಂದ್ರಯಾನ-2 ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವ ಕಾಯುತ್ತಿದೆ. ನೌಕೆಯಲ್ಲಿನ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಮಧ್ಯರಾತ್ರಿ 1:10ರ ಸುಮಾರಿಗೆ ಇಳಿಯಲಿದೆ.
ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಮಧ್ಯೆ ಇಸ್ರೋದ ಐತಿಹಾಸಿಕ ಸಾಧನೆಯ ವೀಕ್ಷಣೆಗೆ ಹಲವು ದಾರಿಗಳಿದ್ದು, ಆಸಕ್ತರು ಹಲವು ಮಾರ್ಗಗಳ ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ವಿಡಿಯೋವನ್ನು ಲೈವ್ ನೋಡಬಹುದಾಗಿದೆ.
ವಿಕ್ರಂ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ವಿಡಿಯೋವನ್ನು ಮಧ್ಯರಾತ್ರಿ 1:10ರಿಂದ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುವುದು. ಅಲ್ಲದೇ
ಇಸ್ರೋದ ಅಧಿಕೃತ ಯೂ-ಟ್ಯೂಬ್’ನಲ್ಲೂ ಲೈವ್ ಪ್ರಸಾರವಾಗಲಿದೆ. ಇಷ್ಟೇ ಅಲ್ಲದೇ ಡಿಸ್ಕವರಿ ಹಾಗೂ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್’ಗಳೂ ಕೂಡ ಚಂದ್ರಯಾನ-2 ನೌಕೆಯ ನೇರ ಪ್ರಸಾರ ಮಾಡಲಿವೆ.
ಚಂದ್ರಯಾನ-2 ಚಂದ್ರ ಮೇಲೆ ತನ್ನ ಮೃದು ಹೆಜ್ಜೆ ಇಡುವುದನ್ನು 1:10 ಗಂಟೆಯಿಂದಲೇ ದೂರದರ್ಶದಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜತೆಗೆ ಇಸ್ರೋದ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಮತ್ತು ಫೆಸ್‌ಬುಕ್‌ನಲ್ಲಿ ಕೂಡ ನೇರ ಪ್ರಸಾರ ಆಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.