ಪ್ಲೇ ಸ್ಟೋರ್‌, ಆಪಲ್‌ ಸ್ಟೋರ್‌ನಿಂದ 'ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ' ಬ್ಯಾನ್

Published : Jul 29, 2022, 04:05 PM ISTUpdated : Aug 08, 2022, 02:49 PM IST
ಪ್ಲೇ ಸ್ಟೋರ್‌, ಆಪಲ್‌ ಸ್ಟೋರ್‌ನಿಂದ 'ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ' ಬ್ಯಾನ್

ಸಾರಾಂಶ

Battlegrounds Mobile India Blocked: ಗೇಮಿಂಗ್‌ ಆಪ್‌ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗುರುವಾರ ಸಂಜೆ ಭಾರತದಲ್ಲಿ ಇದ್ದಕ್ಕಿದ್ದಂತೆ ನಿರ್ಬಂಧಿಸಲಾಗಿದೆ

ನವದೆಹಲಿ (ಜು. 29): ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾದ, ಭಾರತದಲ್ಲಿ ಕ್ರಾಫ್ಟನ್‌ ಪಬ್‌ಜಿ  ಮೊಬೈಲ್ (PUBG) ಪರ್ಯಾಯ ಗೇಮಿಂಗ್‌ ಆಪ್‌ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI)ಗುರುವಾರ ಸಂಜೆ ಭಾರತದಲ್ಲಿ ಇದ್ದಕ್ಕಿದ್ದಂತೆ ನಿರ್ಬಂಧಿಸಲಾಗಿದೆ. ಬ್ಯಾಟಲ್ ರಾಯಲ್ ಗೇಮ್ ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವುದಿಲ್ಲ. ಕುತೂಹಲಕಾರಿಯಾಗಿ, ಕ್ರಾಫ್ಟನ್ ಅಭಿವೃದ್ಧಿಪಡಿಸಿದ ಮತ್ತೊಂದು ಆಟ,  ಪಬ್‌ಜಿ ನ್ಯೂ ಸ್ಟೇಟ್, ಇನ್ನೂ ಭಾರತದಲ್ಲಿ ಲಭ್ಯವಿದೆ.

ಆಪಲ್ ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಹಿರಂಗಪಡಿಸಿಲ್ಲ, ಆದರೆ ಇದನ್ನು "ಸರ್ಕಾರದ ಆದೇಶ" ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ಹೇಳಿದೆ. "ಆದೇಶದ ಸ್ವೀಕೃತಿಯ ನಂತರ, ಸ್ಥಾಪಿತ ಪ್ರಕ್ರಿಯೆಯನ್ನು ಅನುಸರಿಸಿ, ನಾವು ಡೆವಲಪರ್‌ಗೆ ಸೂಚಿಸಿದ್ದೇವೆ ಮತ್ತು ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ" ಎಂದು ಗೂಗಲ್ ವಕ್ತಾರರು  ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 

ಮಕ್ಕಳ ಆನ್‌ಲೈನ್‌ ಗೇಮಿಂಗ್ ಅಡಿಕ್ಷನ್ ಕಡಿಮೆ ಮಾಡೋದು ಹೇಗೆ?

BGMI ಡೆವಲಪರ್ ಪ್ರಸ್ತುತ ಪ್ಲೇ ಸ್ಟೋರ್‌ಗೆ ಆಟವನ್ನು ಮರಳಿ ತರಲು ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆಪ್ ಸ್ಟೋರ್ (ಗಳು) ನಿಂದ ಆಟವನ್ನು ತೆಗೆದುಹಾಕುವುದರ ಹಿಂದಿನ ಕಾರಣದ ಬಗ್ಗೆ ತಿಳಿದಿಲ್ಲ ಎಂದು ಕ್ರಾಫ್ಟನ್ ಹೇಳಿದೆ. "ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ BGMI ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ ಮತ್ತು ನಾವು ನಿರ್ದಿಷ್ಟ ಮಾಹಿತಿಯನ್ನು ಪಡೆದ ನಂತರ ನಿಮಗೆ ತಿಳಿಸುತ್ತೇವೆ" ಎಂದು ಕ್ರಾಫ್ಟನ್ ತಿಳಿಸಿದ. 

BGMI ಶಾಶ್ಚತವಾಗಿ ಬ್ಯಾನ್?: ಈಗ BGMI ಪ್ಲೇ ಸ್ಟೋರ್‌ಗೆ ಹಿಂತಿರುಗುತ್ತದೆಯೇ ಅಥವಾ ಅದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆಯೇ ಎಂಬುದು ಇನ್ನೂ ದೃಢವಾಗಿಲ್ಲ. ಸದ್ಯಕ್ಕೆ BGMI ಶಾಶ್ವತವಾಗಿ ನಿಷೇಧಿಸಲಾಗಿಲ್ಲ. ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್  ತೆಗೆದುಹಾಕುವುದರ ಹಿಂದಿನ ನಿಖರವಾದ ಕಾರಣ ನಮಗೆ ತಿಳಿದಿಲ್ಲವಾದರೂ, BGMI ದೇಶದ ಕೆಲವು ನಿಯಮಗಳು / ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರಿಂದ ಇದು ಸಂಭವಿಸಿದೆ ಎನ್ನಲಾಗಿದೆ. 

Asus ROG Phone 6, ROG Phone 6 Pro ಲಾಂಚ್, ಈ ಗೇಮಿಂಗ್ ಫೋನ್ ಬೆಲೆ ಎಷ್ಟು?

ಅಲ್ಲದೆ, ಗೂಗಲ್ ಅಪ್ಲಿಕೇಶನ್  ನಿರ್ಬಂಧಿಸಿರುವುದು ಇದೇ ಮೊದಲಲ್ಲ. ಅಂತಹ ಸಂದರ್ಭದಲ್ಲಿ, ಅಪ್ಲಿಕೇಶನ್ ಡೆವಲಪರ್‌ಗಳು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಕ್ರಾಫ್ಟನ್ ಬಹುಶಃ ಅದೇ ರೀತಿ ಮಾಡುತ್ತಿದೆ. ಕ್ರಾಫ್ಟನ್  ಪ್ರಶ್ನೆಗೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವರದಿಗಳು ತಿಳಿಸಿವೆ. 

ಪ್ರಸ್ತುತ, BGMI - PUBG ಮೊಬೈಲ್ ಪರ್ಯಾಯ   ಗೂಗಲ್‌ ಮತ್ತು ಆಪಲ್‌  ಆಪಲ್‌ ಸ್ಟೋರ್ ಎರಡರಲ್ಲೂ ಡೌನ್‌ಲೋಡ್ ಮಾಡಲು ಇನ್ನು ಮುಂದೆ ಲಭ್ಯವಿರುವುದಿಲ್ಲ. ಆದಾಗ್ಯೂ, ಈಗಾಗಲೇ ಆಟವನ್ನು ಡೌನ್‌ಲೋಡ್ ಮಾಡಿದ ಬಳಕೆದಾರರು ಆಟವನ್ನು ಆಡಬಹುದು. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌