ಜಿಯೋ ಫೋನ್ vs ಜಿಯೋ ಭಾರತ್: ಇವರೆಡರಲ್ಲಿ ಕಡಿಮೆ ಬೆಲೆ ಪ್ಲಾನ್ ಯಾವುದರಲ್ಲಿ ಸಿಗುತ್ತೆ?

By Mahmad Rafik  |  First Published Sep 10, 2024, 12:32 PM IST

ಜಿಯೋ ಫೋನ್ ಮತ್ತು ಜಿಯೋ ಭಾರತ್ ಫೋನ್‌ಗಳೆರಡೂ ಕೈಗೆಟುಕುವ ಬೆಲೆಯ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತವೆ. ಈ ಲೇಖನದಲ್ಲಿ ಎರಡು  ಪ್ಲಾನ್‌ಗಳನ್ನು ಹೋಲಿಸುತ್ತೇವೆ ಮತ್ತು ಯಾವುದು ಹೆಚ್ಚು ಮೌಲ್ಯವನ್ನು ನೀಡುತ್ತದೆ ಎಂಬುದನ್ನು ಕಂಡುಹಿಡಿಯುತ್ತೇವೆ.


ಮುಂಬೈ: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆಯಿಂದ ದುಬಾರಿ ಬೆಲೆಯ ರೀಚಾರ್ಜ್ ಪ್ಲಾನ್‌ಗಳನ್ನು  ನೀಡುತ್ತಿದೆ. ಗ್ರಾಹಕರು ತಮ್ಮ ಬಳಕೆ ಮತ್ತು ಜೇಬಿಗೆ ಹಿತಕರವಾದ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ರಿಲಯನ್ಸ್ ಹೊಸ ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡಿಕೊಂಡು ತನ್ನ ಬಳಕೆದಾರರಿಗೆ ಸಂದೇಶ ಕಳುಹಿಸುತ್ತಿರುತ್ತದೆ. ಇದರ ಜೊತೆಗೆ ತನ್ನದೇ ಕಂಪನಿಯ ಫೀಚರ್ ಫೋನ್ ಲಾಂಚ್ ಮಾಡಿದೆ. ಇದರಲ್ಲಿ ಜಿಯೋ ಫೋನ್ (Jio Phone) ಮತ್ತು ಜಿಯೋ ಭಾರತ ಫೋನ್ (Jio Bharat Phone) ಸೇರಿದೆ. 

ಒಂದು ವೇಳೆ ನೀವು ಜಿಯೋ ಫೋನ್ ಅಥವಾ ಜಿಯೋ ಭಾರತ ಫೋನ್ ಖರೀದಿಸುವ ಪ್ಲಾನ್ ಮಾಡುತ್ತಿದ್ದರೆ ಈ ಎರಡರ ನಡುವೆ ಯಾವುದರಲ್ಲಿ ಹೆಚ್ಚು ಬಜೆಟ್ ಫ್ರೆಂಡ್ಲಿ ರೀಚಾರ್ಜ್ ಪ್ಲಾನ್‌ಗಳಿವೆ ಎಂಬುದನ್ನು ತಿಳಿದುಕೊಳ್ಳಿ. ಇದರಲ್ಲಿ ಯಾವ ಪ್ಲಾನ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರು ಸಂಪೂರ್ಣ ಸ್ವತಂತ್ರರಾಗಿರುತ್ತಾರೆ. ಈ ಎರಡರ ನಡುವಿನ ಅಂತರ ಕೂದಲೆಳೆಯ ಅಂತರವಿದೆ. ಈ ಲೇಖನದಲ್ಲಿ ನಿಮಗೆ ಪ್ಲಾನ್‌ ಮತ್ತು ಬೆನೆಫಿಟ್‌ ತುಲನೆ ಮಾಡಲಾಗುತ್ತಿದ್ದು, ಈ ಮೂಲಕ ನೀವು ಯಾವ ಫೋನ್ ಖರೀದಿ ಮಾಡಬಹುದು ಎಂಬುದನ್ನು ಸರಳವಾಗಿ ನಿರ್ಧರಿಸಬಹುದು.

Tap to resize

Latest Videos

undefined

ಜಿಯೋದಿಂದ ಮಹತ್ವದ ಘೋಷಣೆ: 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್, ಬೆಲೆ ಜಸ್ಟ್ 1 ರೂಪಾಯಿ

Jio Phone vs Jio Bharat Recharge Plan
ಜಿಯೋ ಫೋನ್ ಮತ್ತು ಜಿಯೋ ಭಾರತ್ ಫೋನ್‌ನ 125 ರೂ ಹಾಗೂ 123 ರೂಪಾಯಿಯ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ.

Jio Phone Rs 125 Plan
ಜಿಯೋ ಫೋನ್ ಈ ಪ್ಲಾನ್ 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಡಿ ನಿಮಗೆ 0.5GB ಡೇಟಾ ಸಿಗಲಿದೆ. ಒಟ್ಟಾರೆ ನಿಮಗೆ 23 ದಿನಗಳಿಗೆ 11.5GB ಡೇಟಾ ಲಭ್ಯವಾಗುತ್ತದೆ. ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಉಚಿತ 300 ಎಸ್‌ಎಂಎಸ್ ಸಿಗಲಿದೆ. ಇಲ್ಲಿಗೆ ಈ ಆಫರ್ ಮುಗಿಯಲ್ಲ. ಉಳಿದ ಎಲ್ಲ ಪ್ಲಾನ್‌ಗಳಂತೆ ನಿಮಗೆ ಇಲ್ಲಿಯೂ  JioCinema, JioTV ಮತ್ತು JioCloud ಉಚಿತ ಸಬ್‌ಸ್ಕ್ರಿಪ್ಷನ್ ಸಿಗಲಿದೆ.

Jio Bharat Phone Rs 123 Plan
ಜಿಯೋ ಭಾರತ ಪ್ಲಾನ್ ವ್ಯಾಲಿಡಿಟಿ  28 ದಿನಗಳು. ಈ ಯೋಜನೆಯಲ್ಲಿ ಗ್ರಾಹಕರಿಗೆ 0.5GB ಹೈಸ್ಪೀಡ್ ಡೇಟಾ ಸಿಗಲಿದೆ. ಅನ್‌ಲಿಮಿಟೆಡ್ ಕಾಲ್ ಮತ್ತು ಉಚಿತ 300 ಎಸ್‌ಎಂಎಸ್, JioCinema, JioTV ಮತ್ತು JioCloud ಉಚಿತ ಸಬ್‌ಸ್ಕ್ರಿಪ್ಷನ್ ಸಿಗಲಿದೆ.

ಯಾವ ಪ್ಲಾನ್ ಬೆಸ್ಟ್?
ಈ ಎರಡೂ ಪ್ಲಾನ್‌ನಲ್ಲಿ ಕೇವಲ 2 ರೂಪಾಯಿಯ ಅಂತರವಿದೆ. ನೀವು 2 ರೂಪಾಯಿ ಹೆಚ್ಚುವರಿ ಪಾವತಿಸಿದರೆ 5 ದಿನ ವ್ಯಾಲಿಡಿಟಿ ಮತ್ತು 2.5GB ಡೇಟಾ ಸಹ ಹೆಚ್ಚುವರಿಯಾಗಿ ಸಿಗುತ್ತದೆ. ಇನ್ನುಳಿದಂತೆ ಕಾಲಿಂಗ್, ಎಸ್‌ಎಂಎಸ್ ಮತ್ತು ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಷನ್ ಎರಡೂ ಪ್ಲಾನ್‌ಗಳಲ್ಲಿ ಒಂದೇ ರೀತಿಯಾಗಿ ಸಿಗಲಿದೆ.

ಕೇವಲ 1 ರೂ ನಿಂದ Vi ಆಟಕ್ಕೆ ಬ್ರೇಕ್ ಹಾಕಿದ ಜಿಯೋ: ಕೈ-ಕೈ ಹಿಸುಕಿಕೊಂಡ ಏರ್‌ಟೆಲ್‌ ಗ್ರಾಹಕರು!

click me!