
ಕೆಲ ದಿನಗಳ ಹಿಂದಷ್ಟೇ ಜಿಯೋ ಗ್ರಾಹಕ ಸೇವಾ ವಿಭಾಗ ಟ್ವಿಟರ್'ನಲ್ಲಿ ಆಯ್ದ ಪಟ್ಟಣಗಳ ಕೆಲ ಇಲಾಖೆಗಳಲ್ಲಿ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್'ನ ಟೆಸ್ಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್ ಮಾಡಿತ್ತು. ತನ್ನ ಸೇವೆ ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಜಿಯೋ ಈ ಹೆಜ್ಜೆ ಇಟ್ಟಿದೆ. ಕಳೆದ ತ್ರೈಮಾಸಿಕದ ಆರ್ಥಿಕ ಪರಿಣಾಮಗಳನ್ನು8 ವಿವರಿಸುವ ಸಂದರ್ಭದಲ್ಲಿ 'ಬ್ರಾಡ್ ಬ್ಯಾಂಡ್ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ. ಆದರೆ ಇದನ್ನು ಜಾರಿಗೊಳಿಸುವ ಅವಧಿಯ ಕುರಿತಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ.
ಆದರೆ ಇದೀಗ ಜಿಯೋ ಬ್ರಾಡ್ ಬ್ಯಂಟ್ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಪುಣೆಯ ಗ್ರಾಹಕನೊಬ್ಬ ಜಿಯೋ ಬ್ರಾಡ್ ಬ್ಯಂಟ್ ಸೇವೆಯ ಕುರಿತಾಗಿ ಮಾಹಿತಿ ನೀಡುವಂತೆ ಕಂಪೆನಿಯ ಬಳಿ ಟ್ವಿಟರ್ ಮೂಲಕ ಮನವಿ ಮಾಡಿದ್ದ. ಈತನ ಮನವಿಗೆ ಪ್ರತಿಕ್ರಿಯಿಸಿರುವ ಕಂಪೆನಿ 'ಸದ್ಯ ಜಿಯೋ ಫೈಬರ್ ಪ್ರಿವ್ಯೂ ಆಫರ್ ಕೇವಲ ಮುಂಬಯಿ, ದೆಹಲಿ- NCR, ಅಹಮದಾಬಾದ್, ಜಾಮನಗರ, ಸೂರತ್ ಹಾಗೂ ವಡೋಧರಾದ ಆಯ್ದ ಪ್ರದೇಶಗಳಲ್ಲಷ್ಟೇ ಲಭ್ಯವಿದೆ. ಇನ್ನು ಜಾಮನಗರದಲ್ಲಿ ಈ ಸೇವೆ ಕೇವಲ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್'ನ ಸಿಬ್ಬಂದಿಗಷ್ಟೇ ನೀಡಲಾಗುತ್ತಿದೆ ಎಂದಿದ್ದಾರಂತೆ.
ಇದನ್ನು ಹೊರತುಪಡಿಸಿ ಜಿಯೋ ಫೈಬರ್ ಪ್ರಿವ್ಯೂ ಆಫರ್'ಗೆ ಸಂಬಧಿಸಿದಂತೆ ಜಿಯೋ ಜಾಹೀರಾತಿಗಾಗಿ ತಯಾರಿಸಿದ ಕೆಲ ಫೋಟೋಗಳೂ ಬಯಲಾಗಿವೆ. ಈ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ. ಇದರಲ್ಲಿರುವ ಮಾಹಿತಿ ಅನ್ವಯ ಜಿಯೋ ತನ್ನ ಗ್ರಾಹಕರಿಗೆ ಮೂರು ತಿಂಗಳುಗಳ ಕಾಲ, ತಿಂಗಳೊಂದಕ್ಕೆ 100 Mbps ಸ್ಪೀಡ್ ಹೊಂದಿರುವ 100 ಜಿಬಿ ಡೇಟಾ ಉಚಿತವಾಗಿ ನೀಡಲಿದೆ ಎಂದು ತಿಳಿದು ಬಂದಿದೆ. ಇನ್ನು 100 ಜಿಬಿ ಡೇಟಾ ಮುಗಿದ ಬಳಿಕ ಸ್ಪೀಡ್ ಕೇವಲ 1Mbps ಇರಲಿದೆ. ಇದೆಲ್ಲವೂ ಉಚಿತವಾಗಿಯೇ ಸಿಗಲಿದೆ ಆದರೆ ವೈ-ಫೈ ರೌಟರ್'ಗಾಗಿ 4,500 ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಆಗಿ ನೀಡಬೇಕಾಗುತ್ತದೆ.
ಈಗಾಗಲೇ ಈ ಸೇವೆಯನ್ನು ಪಡೆಯುತ್ತಿರುವ ಬಹುತೇಕ ಮಂದಿ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.