
ಮುಂಬೈ(ಮೇ.13): ಏರ್'ಟೆಲ್ ನಿತ್ಯ ಒಂದು ವರ್ಷ 1 ಜಿಬಿ 4ಜಿ ಡಾಟಾ ಉಚಿತವಾಗಿ ನೀಡುವ ಆಫರ್ ಪ್ರಕಟಿಸಿದೆ. ಆದರೆ ಇದಕ್ಕಾಗಿ ನೀವು ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈ'ಲ್ ಅನ್ನು ಖರೀದಿಸಬೇಕು.
11,999 ಬೆಲೆಯ ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈ'ಲ್ ಅನ್ನು ಖರೀದಿಸಿದರೆ ನಿಮಗೆ ಏಢ ಸಿಮ್ ಜೊತೆಗೆ ಒಂದು ವರ್ಷ 1ಜಿಬಿ 4ಜಿ ಉಚಿತ ಡಾಟಾ ಸಿಗಲಿದೆ.ಇವೆರಡೂ ಕಂಪನಿಗಳು ಒಪ್ಪಂದ ಮಾಡಿಕೊಂಡಿರುವ ಕಾರಣ ಮೈಕ್ರೊ'ಮ್ಯಾಕ್ಸ್ ಮೊಬೈಲ್ ಕೊಂಡ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ.
ಈ ಆಫರ್ ಜೊತೆಗೆ ನಿತ್ಯ ಭಾರತದ ಯಾವುದೇ ಸ್ಥಳಕ್ಕೆ ಒಂದು ವರ್ಷದ ತನಕ 400 ನಿಮಿಷ (ವಾರದ ಮಿತಿ 1500 ನಿಮಿಷ) ಉಚಿತ ಕರೆ ದೊರೆಯಲಿದೆ. ಈ ಮೊಬೈಲ್ ರಿಟೇಲ್ ಮಳಿಗೆಗಳಲ್ಲಿ ಮಾತ್ರ ಲಭ್ಯವಾಗಲಿದೆ. ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈಲ್ 11 ಗಂಟೆಗಳವರೆಗೆ ಉಳಿಯುವ 3050 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ,3ಜಿ ರಾಮ್,16ಜಿಬಿ ಇಂಟರ'ನಲ್ ಸ್ಟೋರೇಜ್ ಹಾಗೂ 64 ಜಿಬಿ ಎಕ್ಸ್'ಪೆಂಡಬಲ್ ಮೆಮೊರಿ ಹಾಗೂ ಮೀಡಿಯಾ'ಟೆಕ್ ಕ್ವಾಡ್ ಕೋರ್ ಚಿಪ್'ಸೆಟ್ ಫೀಚರ್'ಗಳಿವೆ. ಮೊಬೈಲ್ 1 ಒಂದು ವರ್ಷದವರೆಗೆ ಸ್ಕ್ರೀನ್ ರೀಪ್ಲೇಸ್'ಮೆಂಟ್ ಹಾಗೂ 30 ದಿನಗಳವರೆಗೂ ಸ್ಮಾರ್ಟ್ ಫೋನ್ ಬದಲಾವಣೆಗೆ ಅವಕಾಶವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.