ಜಿಯೋ'ಗೆ ಕೌಂಟರ್ ಕೊಟ್ಟ ಏರ್'ಟೆಲ್: 250 ಜಿಬಿ ಉಚಿತ ಡಾಟಾ

By Suvarna Web DeskFirst Published May 13, 2017, 6:39 AM IST
Highlights

ಜಿಯೋಫೈಬರ್ ಹೆಸರಿನಲ್ಲಿ ಬ್ರಾಡ್'ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಜಿಯೋ ಈಗಾಗಲೇ ದೆಹಲಿ,ಮುಂಬೈ,ಜಾಮ್ನಾ'ನಗರ್,ಪುಣೆ ಹಾಗೂ ಚೆನ್ನೈ ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ 90 ದಿನಗಳ ಕಾಲ  100 ಎಂಬಿಪಿಎಸ್ ವೇಗದಲ್ಲಿ ಪ್ರತಿ ತಿಂಗಳು 100 ಜಿಬಿ ಉಚಿತ ಡಾಟಾ ನೀಡಿದೆ.

ಮುಂಬೈ(ಮೇ.13): ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಏರ್'ಟೆಲ್ ಇತ್ತೀಚಿಗಷ್ಟೆ ಹಲವು ಉಚಿತ ಸೇವೆಗಳೊಂದಿಗೆ ಅತೀ ಹೆಚ್ಚು ಗ್ರಾಹಕರನ್ನು ಪಡೆದುಕೊಂಡ ಜಿಯೋ ಸಂಸ್ಥೆಗೆ ಕೌಂಟರ್ ನೀಡಲು ಹೊರಟಿದೆ.

ರಿಲಾಯನ್ಸ್ ಸಂಸ್ಥೆ 6 ತಿಂಗಳಿಗೂ ಹೆಚ್ಚು ಕಾಲ ಉಚಿತ ಇಂಟರ್'ನೆಟ್ ಹಾಗೂ ಮುಂತಾದ ಸೌಲಭ್ಯಗಳನ್ನು ನೀಡಿತ್ತು. ಇತ್ತೀಚಿಗಷ್ಟೆ ಧನ್ ದನಾಧನ್, ಸಮ್ಮರ್ ಸರ್'ಪ್ರೈಸ್ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಆಫರ್'ಗಳನ್ನು ಮುಂದುವರಿಸಿದೆ.

ಜಿಯೋಫೈಬರ್ ಹೆಸರಿನಲ್ಲಿ ಬ್ರಾಡ್'ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಜಿಯೋ ಈಗಾಗಲೇ ದೆಹಲಿ,ಮುಂಬೈ,ಜಾಮ್ನಾ'ನಗರ್,ಪುಣೆ ಹಾಗೂ ಚೆನ್ನೈ ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ 90 ದಿನಗಳ ಕಾಲ  100 ಎಂಬಿಪಿಎಸ್ ವೇಗದಲ್ಲಿ ಪ್ರತಿ ತಿಂಗಳು 100 ಜಿಬಿ ಉಚಿತ ಡಾಟಾ ನೀಡಿದೆ.

250 ಜಿಬಿ ಉಚಿತ ಡಾಟಾ

ಜಿಯೋ'ಗೆ ಕೌಂಟರ್ ಕೊಟ್ಟಿರುವ ಏರ್'ಟೆಲ್ ತಿಂಗಳಿಗೆ 250 ಜಿಬಿ ಉಚಿತ ಡಾಟಾವನ್ನು ಬ್ರಾಡ್'ಬ್ಯಾಂಡ್ ಸೇವೆಯ ಮೂಲಕ ನೀಡಲು ಹೊರಟಿದೆ. 'ಏರ್'ಟೆಲ್ ಮೈ'ಹೋಮ್' ಆಫ'ರ್'ನಲ್ಲಿ ಈ ಸೇವೆ ಲಭ್ಯವಾಗಲಿದ್ದು, ಇದನ್ನು ಮೈ ಏರ್'ಟೆಲ್ ಆ್ಯ'ಪ್ ಮೂಲಕ ಲಭ್ಯವಾಗಿಸಿಕೊಳ್ಳಬಹುದು. ಜೊತೆಗೆ ಏರ್'ಟೆಲ್ ಬ್ರಾಡ್'ಬ್ಯಾಂಡ್ ಅಥವಾ ಏರ್'ಟೆಲ್ ಪೋಸ್ಟ್'ಪೇಯ್ಡ್ ಸಂಪರ್ಕದ ಮೂಲಕ ಇಲ್ಲವೆ ಏರ್'ಟೆಲ್ ಡಿಜಿಟಲ್ ಟಿವಿ ಸೇವೆಯ ಮೂಲಕ ನಿಯಮ ಷರತ್ತುಗಳಿಗೆ ಬದ್ಧವಾಗಿ ಪಡೆದುಕೊಳ್ಳಬಹುದು.

ಜೊತೆಗೆ ಏರ್'ಟೆಲ್ ಬ್ರಾಡ್'ಬ್ಯಾಂಡ್ ಸೇವೆಯನ್ನು ಜುಲೈ 1,2016ರ ಒಳಗೆ ಪಡೆದುಕೊಂಡವರು ಸಹ ಮೈ'ಹೋಮ್ ಆಫರ್ ಸೇವೆಯನ್ನು ಪಡೆಯಲು ಅರ್ಹ'ರಾಗುತ್ತಾರೆ. ಪ್ರತಿ ಪೋಸ್ಟ್'ಪೇಯ್ಡ್  ಹಾಗೂ ಏರ್'ಟೆಲ್ ಬ್ರಾಡ್'ಬ್ಯಾಂಡ್ ಸಂಪರ್ಕದ ಡಿಜಿಟಲ್ ಟಿವಿ ಸೇವೆ ಹೊಂದಿರುವವರಿಗೆ ಪ್ರತಿ ತಿಂಗಳು 5 ಜಿಬಿ ಹೆಚ್ಚುವರಿ ಉಚಿತ ಡಾಟಾ ಕೂಡ ಸಿಗಲಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಏರ್'ಟೆಲ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ

click me!