ಭರ್ಜರಿ ಮಾನ್ಸೂನ್ ಹಂಗಾಮಾ ಪ್ರಕಟಿಸಿದ ಜಿಯೋ!

First Published Jul 18, 2018, 5:53 PM IST
Highlights
  • ಅಭಿವೃದ್ಧಿಪಡಿಸಲಾದ  ಜಿಯೋಫೋನ್ ಮಾರುಕಟ್ಟೆಗೆ!
  • ಮಾನ್ಸೂನ್ ಹಂಗಾಮಾ ಯೋಜನೆಯಲ್ಲಿ ವಿನಿಮಯ!
  • ಹೊಸ ಫೋನ್ ನಲ್ಲಿ ಏನೇನಿದೆ?

ಗ್ರಾಹಕರು ತಮ್ಮ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ಬೆಲೆಗೆ ಹೊಸ ಜಿಯೋಫೋನ್‌ನೊಡನೆ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡಳ್ಳುವ ಜಿಯೋಫೋನ್ ಮಾನ್ಸೂನ್ ಹಂಗಾಮ ಸ್ಕೀಮನ್ನು ಪರಿಚಯಿಸಿದೆ.

25 ಮಿಲಿಯನ್ ಭಾರತೀಯರು ಈಗಾಗಲೇ ಜಿಯೋಫೋನ್ ಬಳಸುತ್ತಿದ್ದು ಇನ್ನೂ ಹಲವು ಮಿಲಿಯನ್ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. ಈ ಮೂಲಕ ಜಿಯೋಫೋನ್‌ನ ಪ್ರಾರಂಭಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುತ್ತಿದೆ. 

ಜುಲೈ 20, 2018ರ ಸಂಜೆ 5:01ರಿಂದ ಪ್ರಾರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋಫೋನ್‌ನೊಡನೆ (ಸದ್ಯದ ಮಾದರಿ) ವಿನಿಮಯ ಮಾಡಿಕೊಳ್ಳಬಹುದು. ಇಷ್ಟು ಕಡಿಮೆ ಪ್ರಾರಂಭಿಕ ವೆಚ್ಚದಿಂದಾಗಿ ಹಲವಾರು ಬಳಕೆದಾರರು ಮೊತ್ತಮೊದಲ ಬಾರಿಗೆ ಡೇಟಾದ ಶಕ್ತಿ ಹಾಗೂ ಅಂತರಜಾಲದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. 

ಉತ್ತಮಪಡಿಸಲಾದ ಆ್ಯಪ್ ಇಕೋಸಿಸ್ಟಮ್:

 ಈವರೆಗೆ ಸ್ಮಾರ್ಟ್‌ಫೋನುಗಳಲ್ಲಿ ಮಾತ್ರವೇ ಲಭ್ಯವಿದ್ದ ಅನೇಕ ಆ್ಯಪ್ ಗಳನ್ನು ಉತ್ತಮಪಡಿಸಲಾದ ಆ್ಯಪ್ ಇಕೋಸಿಸ್ಟಮ್ ಮೂಲಕ ಜಿಯೋಫೋನ್ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ  ಆ್ಯಪ್ ಗಳನ್ನು ನೀಡುವ ಮೂಲಕ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಸೇವೆಗಳನ್ನು ಪಡೆದುಕೊಳ್ಳುವ ವಿಧಾನವನ್ನೇ ಬದಲಿಸಲು ಜಿಯೋಫೋನ್ ಸನ್ನದ್ಧವಾಗಿದೆ. ಈ ಆಪ್‌ಗಳು ಆಗಸ್ಟ್ 15, 2018ರಿಂದ ಪ್ರಾರಂಭಿಸಿ ಎಲ್ಲ ಜಿಯೋಫೋನ್ ಬಳಕೆದಾರರಿಗೂ ದೊರಕಲಿವೆ.

ಜಿಯೋಫೋನ್‌ನ ತೊಡಕಿಲ್ಲದ 4ಜಿ ಸಂಪರ್ಕ ಹಾಗೂ ಧ್ವನಿರೂಪದ ಆದೇಶ ನೀಡಬಹುದಾದ ವಿಶಿಷ್ಟ ವ್ಯವಸ್ಥೆಯ (ವಾಯ್ಸ್ ಕಮ್ಯಾಂಡ್) ಮೂಲಕ ಪ್ರಾರಂಭಿಕ ಬಳಕೆದಾರರೂ ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ ಆಪ್‌ಗಳನ್ನು ಸರಳ ಹಾಗೂ ಅನುಕೂಲಕರವಾಗಿ ಬಳಸಬಹುದಾಗಿದೆ. ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಗ್ರಾಹಕರಿಗೆ ವಾಯ್ಸ್ ಕಮ್ಯಾಂಡ್ ಸೌಲಭ್ಯ ನೆರವಾಗಲಿದೆ.

ಹೊಸ ಆಪ್ ಇಕೋಸಿಸ್ಟಮ್ ಮೂಲಕ ಜಿಯೋಫೋನ್ ತನ್ನ ಗ್ರಾಹಕರಿಗೆ ಹಲವಾರು ಹೊಸ ಸಾಧ್ಯತೆಗಳನ್ನು ರೂಪಿಸಿದೆ. ಈಗ ಪರಿಚಯಿಸಲಾಗುತ್ತಿರುವ ಹೊಸ ಆ್ಯಪ್ ಗಳು ಹಾಗೂ ಈಗಾಗಲೇ ಲಭ್ಯವಿರುವ ಇನ್ನಿತರ ಆಪ್‌ಗಳ ಮೂಲಕ, ತನ್ನ ಗ್ರಾಹಕರು ಹೊಸ ವಾಣಿಜ್ಯ ಹಾಗೂ ಉದ್ಯೋಗ ಅವಕಾಶಗಳನ್ನೂ ಶಿಕ್ಷಣ - ಮನರಂಜನೆ ಮತ್ತಿತರ ಸೇವೆಗಳನ್ನೂ ಪಡೆಯಲು ಜಿಯೋಫೋನ್ ನೆರವಾಗಲಿದೆ.

click me!