ವಾಟ್ಸಪ್ ಮೆಸೆಜ್ ಸ್ವಂತದ್ದಾ, ಫಾರ್ವರ್ಡ್ ಮಾಡಿದ್ದಾ?: ಇಲ್ಲಿದೆ ಹೊಸ ಫೀಚರ್!

First Published Jul 11, 2018, 9:35 PM IST
Highlights

ವಾಟ್ಸಪ್ ನಿಂದ ಹೊಸ ಸುರಕ್ಷತಾ ಫೀಚರ್

ಮೆಸೆಜ್ ಮೂಲ ಕಂಡುಹಿಡಿಯುವುದು ಸರಳ

ಸಂದೇಶದ ಮೇಲೆ ಫಾರ್ವರ್ಡ್ ಐಕಾನ್ 
 

ವಾಟ್ಸಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ಕಾರಣಕ್ಕೆ ದಿನಕ್ಕೊಂದು ಹೊಸ ಫೀಚರ್‌ನ್ನು ವಾಟ್ಸಪ್ ಪರಿಚಯಿಸುತ್ತಿದೆ.

ತನ್ನ ಬಳಕೆದಾರರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಇತ್ತಿಚೀಗಷ್ಟೇ ವಾಟ್ಸಪ್‌ಗೆ ತಾಕೀತು ಮಾಡಿತ್ತು. ಅದರಂತೆ ವಿವಿಧ ಸುರಕ್ಷತಾ ಫೀಚರ್‌ಗಳನ್ನು ವಾಟ್ಸಪ್ ಹಂತ ಹಂತವಾಗಿ ಪರಿಚಯಿಸುತ್ತಿದೆ.

ಅದರಂತೆ ವಾಟ್ಸಪ್ ಇದೀಗ ಹೊಸದೊಂದು ಫೀಚರ್ ಪರಿಚಯಿಸಿದ್ದು, ನಿಮಗೆ ಬರುವ ಸಂದೇಶದ ಮೂಲವನ್ನು ಆ ಸಂದೇಶದಲ್ಲೇ ತಿಳಿಸುತ್ತದೆ. ಅಂದರೆ ನಿಮಗೆ ಬಂದ ಸಂದೇಶ ನಿರ್ದಿಷ್ಟ ವ್ಯಕ್ತಿಯೇ ಕಳುಹಿಸಿದ್ದೋ ಅಥವಾ ಬೇರೊಬ್ಬರು ಕಳುಹಿಸಿದ ಸಂದೇಶ ಫಾರ್ವರ್ಡ್ ಮಾಡಿದ್ದೋ ಎಂಬುದನ್ನು ಕಂಡುಹಿಡಿಯಬಹುದು.

ವಾಟ್ಸಪ್‌ನಲ್ಲಿ ಬರುವ ಮೆಸೆಜ್ ಮೇಲೆ ಒಂದು ವೇಳೆ ನಿರ್ದಿಷ್ಟ ಸಂದೇಶವೊಂದು ಫಾರ್ವರ್ಡ್ ಮಾಡಿದ್ದಾಗಿದ್ದರೆ ಮೆಸೆಜ್ ಮೇಲೆ ಫಾರ್ವರ್ಡ್ ಐಕಾನ್ ಕಾಣಿಸುತ್ತದೆ. ಈ ಮೂಲಕ ಸಂದೇಶದ ಮೂಲವನ್ನು ತುಂಬ ಸರಳವಾಗಿ ಪತ್ತೆ ಮಾಡಬಹುದಾಗಿದೆ. 

click me!