ಭಾರತದ ಮೊತ್ತ ಮೊದಲ ಎಸ್‌ಯುವಿ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಿದ್ಧತೆ? ಬೆಲೆ ಎಷ್ಟು?

First Published Jul 1, 2018, 7:23 PM IST
Highlights

ಭಾರತದ ಜನಪ್ರೀಯ ಕಾರು ತಯಾರಿಕಾ ಸಂಸ್ಥೆ ಹ್ಯುಂಡೈ ಇದೀಗ ಎಲೆಕ್ಟ್ರಿಕಲ್ ಎಸ್‌ಯುವಿ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದ ಮೊತ್ತದ ಮೊದಲ ಎಲೆಕ್ಟ್ರಿಕಲ್ ಎಸ್‌ಯುವಿ ಕಾರು ಹೇಗಿದೆ? ಇದರ ಬೆಲೆ ಏಷ್ಟು? ಇಲ್ಲಿದೆ ವಿವರ
 

ಬೆಂಗಳೂರು(ಜು.01): ಭಾರತದ ಮೊತ್ತದ ಮೊದಲ ಎಸ್‌ಯುವಿ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಹ್ಯುಂಡೈ ಕಾರು ಸಂಸ್ಥೆ ತಯಾರಿ ನಡೆಸಿದೆ. 2019ರ ಆರಂಭದಲ್ಲಿ ಭಾರತದ ಪ್ರಮುಖ 15 ನಗರಗಳ ಶೋರೂಂಗಳಲ್ಲಿ ಎಲೆಕ್ಟ್ರಿಕಲ್ ಎಸ್‌ಯುವಿ ಕಾರು ಗ್ರಾಹಕರ ಕೈಗೆ ಸಿಗಲಿದೆ.

ವಿಶೇಷ ಅಂದರೆ ಈ ಎಲೆಕ್ಟ್ರಿಕಲ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ. ಇದರ ಬೆಲೆ ಇನ್ನು ಅಂತಿಮವಾಗಿಲ್ಲ. ಆದರೆ 20 ರಿಂದ 25 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ 2 ವರ್ಷಗಳಲ್ಲಿ ಹ್ಯುಂಡೈ 8 ನೂತನ ಕಾರುಗಳನ್ನ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಅಂಗವಾಗಿ ಹ್ಯುಂಡೈ ಕೋನಾ ಎಲೆಕ್ಟ್ರಿಕಲ್ ಕಾರು ಬಿಡುಗಡೆಯಾಗಲಿದೆ.

ಕೋನಾ ಕಾರು ಫುಲ್ ಚಾರ್ಜ್‌ಗಾಗಿ 6 ಗಂಟೆಗಳು ಚಾರ್ಜ್ ಮಾಡಬೇಕು. ಆದರೆ ಭಾರತದಲ್ಲಿ ಚಾರ್ಜಿಂಗ್ ಸೆಂಟರ್‌ಗಳ ಕೊರತೆ ಇದೆ. ಆದರೆ ಭವಿಷ್ಯದಲ್ಲಿ ಎಲೆಕ್ಟ್ರಿಕಲ್ ಕಾರಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಹ್ಯುಂಡೈ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಈಗಲೇ ಸಜ್ಜಾಗಿದೆ.
 
 

click me!