ಶುಕ್ರನತ್ತ ಇಸ್ರೋ ಚಿತ್ತ: ಪ್ರಯೋಗ ಆಹ್ವಾನ ನೀಡಿದ ಸಂಸ್ಥೆ!

By Web DeskFirst Published Nov 10, 2018, 3:48 PM IST
Highlights

2023ಕ್ಕೆ ಶುಕ್ರನೆಡೆಗೆ ಬಾಹ್ಯಾಕಾಶ ನೌಕೆ ಕಳುಹಿಸುವ ಯೋಜನೆಗೆ ಇಸ್ರೋ ಮುಂದಡಿ! ಶುಕ್ರ ಗ್ರಹ ಅಧ್ಯಯನಕ್ಕೆ ಅಂತರಿಕ್ಷ ಆಧಾರಿತ ಅವಕಾಶಗಳ ಘೋಷಣೆ! ಬಾಹ್ಯಾಕಾಶ ಆಧಾರಿತ ಪ್ರಯೋಗಗಳಿಗೆ ಪ್ರಸ್ತಾವನೆಗಳನ್ನು ಕೋರಿದ ಇಸ್ರೋ

ಬೆಂಗಳೂರು(ನ.10): 2023ಕ್ಕೆ ಶುಕ್ರ ಗ್ರಹದತ್ತ ಬಾಹ್ಯಾಕಾಶ ನೌಕೆ ಕಳುಹಿಸುವ ಯೋಜನೆಗೆ ಇಸ್ರೋ ಮುಂದಡಿ ಇಟ್ಟಿದ್ದು, ವೈಜ್ಞಾನಿಕ ಸಿಡಿತಲೆಯನ್ನು ಹೊತ್ತೊಯ್ಯುವ ಪ್ರಯೋಗಕ್ಕೆ ಮುಂದಾಗಿದೆ.

ಶುಕ್ರ ಗ್ರಹ ಅಧ್ಯಯನಕ್ಕೆ ಅಂತರಿಕ್ಷ ಆಧಾರಿತ ಅವಕಾಶಗಳ ಘೋಷಣೆ ಇದಾಗಿದ್ದು, ಹಲವು ಅಂತರಿಕ್ಷ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಅಂತರಾಷ್ಟ್ರೀಯ ವಿಜ್ಞಾನಿಗಳನ್ನು ಮುಕ್ತವಾಗಿ ಆಹ್ವಾನಿಸಿದೆ.

ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿರುವ ಇಸ್ರೊ, ಶುಕ್ರ ಗ್ರಹದ ನಿರ್ದಿಷ್ಟ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲು ಬಾಹ್ಯಾಕಾಶ ಆಧಾರಿತ ಪ್ರಯೋಗಗಳಿಗೆ ಅಂತರಾಷ್ಟ್ರೀಯ ವೈಜ್ಞಾನಿಕ ಸಮುದಾಯದಿಂದ ಪ್ರಸ್ತಾವನೆಗಳನ್ನು ಕೋರಿದೆ.

ಶುಕ್ರ ಗ್ರಹದ ಮೇಲ್ಮೈ, ಉಪ ಮೇಲ್ಮೈ ವೈಶಿಷ್ಟ್ಯಗಳು ಮತ್ತು ಮರು-ಮೇಲ್ಮುಖ ಪ್ರಕ್ರಿಯೆಗಳ ಸಂಶೋಧನೆ ಮತ್ತು ಅದರ ವಾತಾವರಣದ ರಸಾಯನಶಾಸ್ತ್ರ, ಚಲನಶಾಸ್ತ್ರ ಮತ್ತು ಸಂಯೋಜನೆ ವ್ಯತ್ಯಾಸಗಳು ಹಾಗೂ ಸೌರ ವಿಕಿರಣ, ಸೌರ ಮಾರುತದೊಂದಿಗಿನ ಪರಸ್ಪರ ಕ್ರಿಯೆಗಳನ್ನು ಗುರುತಿಸಲಾಗಿದೆ ಎಂದು ಇಸ್ರೋ ಹೇಳಿದೆ.

2023ರಲ್ಲಿ ಶುಕ್ರನ ಕಡೆಗೆ ಕಳುಹಿಸುವ ಉದ್ದೇಶಿತ ಬಾಹ್ಯಾಕಾಶ ನೌಕೆ 100 ಕೆಜಿ ತೂಕವನ್ನು ಹೊಂದಿದ್ದು 500 ವ್ಯಾಟ್ ಇಂಧನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

click me!