ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

By Web Desk  |  First Published Dec 1, 2018, 3:17 PM IST

98 ಲಕ್ಷ ಆಫ್-ಲೈನ್ ವ್ಯಾಪಾರಿಗಳಿಗೆ ಪ್ರಯೋಜನ ನೀಡುವ ಗುರಿ | ವ್ಯಾಪಾರಿಗಳ ವಹಿವಾಟು ಮಾಹಿತಿ ಸಂಗ್ರಹಿಸಲಿರುವ ಮರ್ಚಂಟ್ ಸ್ಕ್ಯಾನ್ | ವ್ಯಾಪಾರಿಗಳು ತಕ್ಷಣವೇ ವಹಿವಾಟು ನಡೆಸಲು ಅವಕಾಶ | ನಿರ್ದಿಷ್ಟ ಸಮಯದಲ್ಲಿ ಬೇಕಾದರೂ ವಹಿವಾಟು ನಡೆಸಬಹುದು |  ಪೇಟಿಎಂ ಮೂಲಕ ಪಾವತಿಸುವಂತೆ ಗ್ರಾಹಕರಿಗೆ ಶಿಫಾರಸು | ಪೇಟಿಎಂನ ಹೊಸ ಸೇವೆಯಿಂದ ವ್ಯಾಪಾರ-ವಹಿವಾಟು ಅಭಿವೃದ್ಧಿ


ಬೆಂಗಳೂರು: ವ್ಯಾಪಾರ ವಹಿವಾಟುದಾರರು ಕ್ಷಣಾರ್ಧದಲ್ಲಿ ಹಣಕಾಸು ವಹಿವಾಟು ನಡೆಸಲು ಅನುಕೂಲ ಕಲ್ಪಿಸುವಂತಹ ಇನ್ಸ್ಟಂಟ್ ಬ್ಯಾಂಕ್ ಸೆಟಲ್ಮೆಂಟ್ ಎಂಬ ಹೊಸ ಸೇವೆಯನ್ನು PayTM ಕಂಪನಿಯು  ಆರಂಭಿಸಿದೆ.

ಈ ಸೇವೆಯನ್ನು ಬಳಸಿಕೊಳ್ಳಲು ವ್ಯಾಪಾರಿಗಳು ಬಳಕೆದಾರ ಸ್ನೇಹಿಯಾಗಿರುವ `PayTM ಫಾರ್ ಬಿಝಿನೆಸ್’ ಆ್ಯಪ್ ಅನ್ನು ಡೌನ್-ಲೋಡ್ ಮಾಡಿಕೊಂಡರೆ ಸಾಕಾಗುತ್ತದೆ ಎಂದು ಪೇಟಿಎಂ ಕಂಪನಿಯ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ.

Tap to resize

Latest Videos

undefined

ಈ ಮೂಲಕ PayTM ಕಂಪನಿಯು ವ್ಯಾಪಾರ ವಹಿವಾಟುದಾರರು ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ತಂತ್ರಜ್ಞಾನಾಧಾರಿತ ಸೌಲಭ್ಯಗಳನ್ನು ಒದಗಿಸುವ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಈ ನೂತನ ಸೌಲಭ್ಯದಿಂದಾಗಿ ಗ್ರಾಹಕರು ಕೂಡ ತಮ್ಮ ಮೊಬೈಲ್ ನಲ್ಲೇ PayTM ಕ್ಯೂಆರ್ ಕೋಡ್ ಅನ್ನು ಸ್ಕ್ಯಾನಿಂಗ್ ಮಾಡಿಕೊಳ್ಳುವ ಮೂಲಕ ಪೇಟಿಎಂ ವ್ಯಾಲೆಟ್, ಭೀಮ್ ಯುಪಿಐ, ಇಲ್ಲವೇ ಬ್ಯಾಂಕ್ ಖಾತೆಗಳ ಮೂಲಕವಾದರೂ ವ್ಯಾಪಾರ ವಹಿವಾಟುದಾರರಿಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ASUSನಿಂದ TUF ಸರಣಿಯ ಎರಡು ನೂತನ ಲ್ಯಾಪ್‌ಟಾಪ್‌ಗಳ ಬಿಡುಗಡೆ

``ವ್ಯಾಪಾರು ವಹಿವಾಟು ನಡೆಸುವವರಿಗೆ ತಕ್ಷಣವೇ ಬ್ಯಾಂಕ್ ವ್ಯವಹಾರ ನಡೆಯುವುದು ಅಗತ್ಯವಾಗಿದೆ. ಇದರಿಂದಾಗಿ ಪ್ರತಿನಿತ್ಯ ಹಣದ ಹರಿವು ಸುಗಮವಾಗಿರುತ್ತದೆ. ಇದನ್ನು ಗಮನಿಸಿ ನಾವು 10 ಲಕ್ಷ ವ್ಯಾಪಾರಿಗಳೊಂದಿಗೆ ಇನ್ಸ್ಟಂಟ್ ಬ್ಯಾಂಕ್ ಸೆಟಲ್ಮೆಂಟ್ ಸೇವೆಯನ್ನು ಪರೀಕ್ಷಾರ್ಥವಾಗಿ ನಡೆಸಿದ್ದೆವು. ಅಲ್ಲಿ ಸಿಕ್ಕಿದ ಅಭೂತಪೂರ್ವ ಸ್ಪಂದನವನ್ನು ಗುರುತಿಸಿ, ಈ ಹೊಸ ಸೇವೆಯನ್ನು ಒದಗಿಸುತ್ತಿದ್ದೇವೆ. ವ್ಯಾಪಾರಿಗಳು ಕೂಡ ತಮ್ಮ ಗ್ರಾಹಕರಿಗೆ PayTM ಮೂಲಕವೇ ಹಣ ಪಾವತಿಸುವಂತೆ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ 98 ಲಕ್ಷ ಆಫ್-ಲೈನ್ ವ್ಯಾಪಾರಿಗಳಿಗೆ ಇದರ ಪ್ರಯೋಜನ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ,’’ ಎಂದು ವಸಿರೆಡ್ಡಿ ಹೇಳಿದ್ದಾರೆ.

``PayTM ಕಂಪನಿಯು ಈ ಹಿಂದೆ ವ್ಯಾಪಾರಿಗಳು ತಮ್ಮ ವಹಿವಾಟು ನಡೆಸಿದ ಮರುದಿನ ಬ್ಯಾಂಕ್ ವ್ಯವಹಾರಗಳನ್ನು ಸುಗಮವಾಗಿ ನಡೆಸುವಂತಹ ಸೌಲಭ್ಯವನ್ನು ನೀಡಿ, ದಾಖಲೆಯನ್ನು ನಿರ್ಮಿಸಿತ್ತು. ಈಗ, ಉದ್ಯಮದ ಬೆಳವಣಿಗೆಗೆ ಮತ್ತಷ್ಟು ನೆರವಾಗುವಂತಹ ಇನ್ಸ್ಟಂಟ್ ಬ್ಯಾಂಕ್ ಸೆಟಲ್ಮೆಂಟ್ ಸೇವೆಯನ್ನು ಆರಂಭಿಸುತ್ತಿದೆ. ಇದರಿಂದ ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸುವತ್ತ ಇನ್ನೊಂದು ದಾಪುಗಾಲನ್ನು ಇಟ್ಟಂತಾಗಿದೆ,’’ ಎಂದು ಅವರು ವಿವರಿಸಿದ್ದಾರೆ.

ಈ ಹೊಸ ಸೇವೆಯಲ್ಲಿ ವ್ಯಾಪಾರಿಗಳು ಆ ಕ್ಷಣದಲ್ಲೇ ಬ್ಯಾಂಕ್ ವ್ಯವಹಾರ ನಡೆಸಬಹುದು. ಜತೆಗೆ, ತಮಗೆ ಬೇಕಾದ ನಿರ್ದಿಷ್ಟ ಸಮಯವನ್ನು ಬೇಕಾದರೂ ಗೊತ್ತುಪಡಿಸಿಕೊಂಡು ವ್ಯವಹಾರ ನಡೆಸಬಹುದು ಎಂದು PayTM ಕಂಪನಿ ತಿಳಿಸಿದೆ.

click me!