ಬೆಂಗಳೂರು- ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಮುಂಚೂಣಿ ಕಂಪನಿಯಾಗಿರುವ ASUS, ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮ ಅನುಭವ ನೀಡುವಂತಹ ಟಫ್ (TUF) ಸರಣಿಯಲ್ಲಿ ಎಫ್ಎಕ್ಸ್505 ಮತ್ತು ಎಫ್ಎಕ್ಸ್705 ಎಂಬ ಎರಡು ನೂತನ ಲ್ಯಾಪ್-ಟಾಪ್ ಗಳನ್ನು ಬಿಡುಗಡೆ ಮಾಡಿದೆ.

``ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತು ಬಳಕೆದಾರ-ಸ್ನೇಹಿ ಸೌಲಭ್ಯಗಳನ್ನು ಒಳಗೊಂಡಿರುವ ಈ ಲ್ಯಾಪ್-ಟಾಪ್ ಗಳು ಪರಿಪೂರ್ಣತೆಗೆ ಇನ್ನೊಂದು ಹೆಸರಾಗಿವೆ. ದಕ್ಷ ಪ್ರೊಸೆಸರ್ ಹೊಂದಿರುವ ಈ ಲ್ಯಾಪ್-ಟಾಪ್ ಗಳಲ್ಲಿ ಗೇಮಿಂಗ್ ಪ್ರಿಯರಿಗೆ ಒಳ್ಳೆಯ ಗುಣಮಟ್ಟದ ಗ್ರಾಫಿಕ್ಸ್ ಕೂಡ ಸಿಗಲಿದೆ. ಜತೆಗೆ, ಎಷ್ಟು ಹೊತ್ತು ಬಳಸಿದರೂ ಸಂಪರ್ಕವನ್ನು ಕಳೆದುಕೊಳ್ಳುವ ತೊಂದರೆ ಇರುವುದಿಲ್ಲ,’’ ಎಂದು ASUS ಕಂಪನಿಯ ಉನ್ನತಾಧಿಕಾರಿ ಆರ್ನಾಲ್ಡ್ ಸು ಹೇಳಿದ್ದಾರೆ.

``ಈ ಲ್ಯಾಪ್-ಟಾಪ್ ಗಳು 8ನೇ ತಲೆಮಾರಿನ ಇಂಟೆಲ್ ಕೋರ್ ಸಾಮರ್ಥ್ಯವನ್ನು ಹೊಂದಿವೆ. ಗೇಮಿಂಗ್ ಜತೆಗೆ ಈ ಲ್ಯಾಪ್-ಟಾಪ್ ಗಳಲ್ಲಿ ಬಹುಬಗೆಯ ಕೆಲಸಗಳನ್ನು ಕೂಡ ನಿರ್ವಹಿಸಬಹುದಾಗಿದೆ. ಈ ನೂತನ ಸರಣಿಯ ಲ್ಯಾಪ್-ಟಾಪ್ ಗಳು ನ್ಯಾನೋಎಡ್ಜ್ ಡಿಸ್-ಪ್ಲೇ ಹೊಂದಿದ್ದು, ಗೇಮಿಂಗ್ ಪ್ರಿಯರು ಬಯಸುವಂತಹ ವಾಸ್ಡ್ (WASD) ಕೀಲಿಮಣೆ ವಿನ್ಯಾಸ, ಕೀಕ್ಯಾಪ್ ಕರ್ವ್, ಓವರ್-ಸ್ಟ್ರೋಕ್ ತಂತ್ರಜ್ಞಾನ, ವೈರ್ಲೆಸ್ ನೆಟ್-ವರ್ಕ್ ಮುಂತಾದ ಅನುಕೂಲಗಳನ್ನು ಹೊಂದಿವೆ,’’ ಎಂದು ಆರ್ನಾಲ್ಡ್ ವಿವರಿಸಿದ್ದಾರೆ.

ಇದನ್ನೂ ಓದಿ: ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

``ಸಾಮಾನ್ಯವಾಗಿ ಹೆಚ್ಚಿನ ಲ್ಯಾಪ್-ಟಾಪ್ ಗಳು ಹೆಚ್ಚು ಹೊತ್ತು ಬಳಸಿದರೆ ಬಿಸಿಯಾಗುತ್ತವೆ.  ಆದರೆ ಎಫ್ಎಕ್ಸ್505 ಮತ್ತು ಎಫ್ಎಕ್ಸ್705 ಲ್ಯಾಪ್-ಟಾಪ್ ಗಳಲ್ಲಿ ಹೈಪರ್ ಕೂಲ್ ಥರ್ಮಲ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಿಂದಾಗಿ ಲ್ಯಾಪ್-ಟಾಪ್ ಗಳನ್ನು ದೀರ್ಘಕಾಲ ಬಳಸಿದರೂ ಅವು ತಂಪಾಗಿಯೇ ಇರುತ್ತವೆ. ಇದರೊಂದಿಗೆ, ಲ್ಯಾಪ್-ಟಾಪ್ ಗಳೊಳಕ್ಕೆ ಧೂಳು ಹೋಗದಂತೆ ಫ್ಯಾನುಗಳನ್ನು ಅಳವಡಿಸಲಾಗಿದೆ. ಇವು ಧೂಳುನಿರೋಧಕಗಳಾಗಿ ಕೆಲಸ ಮಾಡುತ್ತವೆ,’’ ಎಂದು ಅವರು ಮಾಹಿತಿ ನೀಡಿದ್ದಾರೆ.

``ಈಗ ಮಾರುಕಟ್ಟೆಗೆ ಬಂದಿರುವ ಈ ಲ್ಯಾಪ್-ಟಾಪ್ ಗಳು ಆನ್-ಲೈನ್ ಮತ್ತು ಆಫ್-ಲೈನ್ ಎರಡೂ ಮಾದರಿಗಳಲ್ಲೂ ಲಭ್ಯವಿವೆ. ಈ ಪೈಕಿ ಎಫ್ಎಕ್ಸ್505 ಶ್ರೇಣಿಯ ಲ್ಯಾಪ್ ಟಾಪ್ 79,999 ರೂ.ಗಳ ಮತ್ತು ಎಫ್ಎಕ್ಸ್705 ಶ್ರೇಣಿಯ ಲ್ಯಾಪ್ ಟಾಪ್ 1,24,990 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿವೆ,’’ ಎಂದು ಆರ್ನಾಲ್ಡ್ ಹೇಳಿದ್ದಾರೆ.