*ಫೋಟೋ ಹಂಚಿಕೆ ಅಪ್ಲಿಕೇಶನ್ ಈಗ ಡ್ರಗ್ ಡೀಲರ್‌ಗಳ ಅಡ್ಡ
*ಎರಡೇ ಕ್ಕಿಕ್‌ಗಳಲ್ಲಿ ಯುವಕರಿಗೆ ಸುಲಭದಲ್ಲಿ ಮಾದಕ ವಸ್ತು ಲಭ್ಯ
*ಡ್ರಗ್ ಡೀಲರ್ ಖಾತೆಗಳನ್ನು ಸಜೆಸ್ಟ್ ಮಾಡುತ್ತಿದೆ ಜಾಲತಾಣ ದೈತ್ಯ!
ನವದೆಹಲಿ(ಡಿ. 09): ಮೆಟಾ-ಫೇಸ್‌ಬುಕ್ (Meta Facebook) ಒಡೆತನದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ಯುವಜನರ ಫೇವರೇಟ್ ಸ್ಪಾಟ್. ಇನ್ಸ್ಟಾಗ್ರಾಮ್ ಬಳಕೆದಾರರಲ್ಲಿ ಯುವ ಜನತೆ ದರ್ಬಾರ್ ಹೆಚ್ಚು. ಚಾಟಿಂಗ್ ಡೇಟಿಂಗ್ ನಿಂದ ಹಿಡಿದು ಮಾರ್ಕೆಟಿಂಗ್ ವರೆಗೂ ಇನ್ಸ್ಟಾಗ್ರಾಮ್‌ನಲ್ಲಿ ಎಲ್ಲದಕ್ಕೂ ಅವಕಾಶವಿದೆ. ಆದರೆ ಯುವ ಜನಾಂಗವೇ ಹೆಚ್ಚು ಬಳಸುಉತ್ತಿರುವ ಇನ್ಸ್ಟಾಗ್ರಾಮ್ ಬಗ್ಗೆ ಈಗ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಈ ಫೋಟೋ ಹಂಚಿಕೆ ಅಪ್ಲಿಕೇಶನ್ ಈಗ ಡ್ರಗ್ ಡೀಲರ್‌ಗಳ (Drug Dealer) ಅಡ್ಡ ಆಗಿ ಮಾರ್ಪಟ್ಟಿದೆ.
ಹೌದು ಇಂಥಹದ್ದೊಂದು ಶಾಕಿಂಗ್ ವರದಿಯನ್ನು ಟೆಕ್ ಟ್ರಾನ್ಸ್‌ಪರೆನ್ಸಿ ಪ್ರಾಜೆಕ್ಟ್ (Tech Transparency Project- TTP) ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಇನ್ಸ್ಟಾಗ್ರಾಮ್ ಯುವ ಬಳಕೆದಾರರಿಗೆ ಡ್ರಗ್ ಡೀಲರ್‌ಗಳ ಖಾತೆಗಳನ್ನು (Accounts) ಶಿಫಾರಸು ಮಾಡುತ್ತಿರುವುದು ಕಂಡುಬಂದಿದೆ. ಟೆಕ್ ಟ್ರಾನ್ಸ್‌ಪರೆನ್ಸಿ ಪ್ರಾಜೆಕ್ಟ್‌ನ ವರದಿಯು ಯುವ ಬಳಕೆದಾರರಿಗೆ ಡ್ರಗ್-ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು Instagram ಸೂಚಿಸುತ್ತಿದೆ ಎಂದು ಬಹಿರಂಗಪಡಿಸಿದೆ. 13 ವರ್ಷ ವಯಸ್ಸಿನ ಹದಿಹರೆಯದ ಬಳಕೆದಾರರಿಗೆ ಕೇವಲ ಎರಡು ಕ್ಲಿಕ್‌ಗಳಲ್ಲಿ ಡ್ರಗ್ ಖರೀದಿ ಮಾಡುವಂತೆ ವ್ಯವಸ್ಥೆ ರೂಪಿಸಲಾಗಿದೆ. ಜಾಲತಾಣದಲ್ಲಿ ಮಾರಾಟಕ್ಕಿರುವ ಡ್ರಗ್ ಕಂಡುಹಿಡಿಯಲು ಯುವಕರಿಗೆ ಅತ್ಯಂತ ಸುಲಭದ ಮಾರ್ಗಗಳನ್ನು ಇದು ನೀಡುತ್ತಿದೆ ಎಂದು ವರದಿ ತಿಳಿಸಿದೆ.
undefined
ನಕಲಿ ಖಾತೆ ಸೃಷ್ಟಿಸಿ ಅಧ್ಯಯನ!
ವರದಿಯ ಪ್ರಕಾರ, TTP ಸಂಸ್ಥೆಯೂ 13, 14, 15, ಮತ್ತು 17 ವರ್ಷ ವಯಸ್ಸಿನ ಹದಿಹರೆಯದ ಬಳಕೆದಾರರಿಗಾಗಿ ನಕಲಿ ಖಾತೆಗಳನ್ನು ರಚಿಸಿದೆ. ಈ ಖಾತೆಗಳ್ನು ಬಳಸಿ ಡ್ರಗ್ ಹುಡುಕಾಟ ನಡೆಸಲಾಗಿದೆ. ಆದರೆ ಅಪ್ಲಿಕೇಶನ್‌ನಲ್ಲಿ ಮಾದಕವಸ್ತು ಸಂಬಂಧಿತ ವಿಷಯವನ್ನು ಹುಡುಕುವುದನ್ನು ಇನ್ಸ್ಟಾಗ್ರಾಮ್ ತಡೆ ಹಿಡಿದಿಲ್ಲ ಎಂದು ಕಂಡುಬಂದಿದೆ. ಸಂಸ್ಥೆ ರಚಿಸಿದ 13 ವಯಸ್ಸಿನ ನಕಲಿ ಬಳಕೆದಾರ ಖಾತೆಯಿಂದ "ಬೈಕ್ಸಾನಾಕ್ಸ್" (buyxanax) ಎಂದು ಟೈಪ್ ಮಾಡಲು ಪ್ರಾರಂಭಿಸಿದಾಗ, ಅದು ಕ್ಸಾನಾಕ್ಸ್‌ನ ಹೆಸರಿನ ಡ್ರಗ್ ಡೀಲರ್ ಅನ್ನು ತೋರಿಸಿದೆ.
Twitter Trends in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?
TTP 13 ಮತ್ತು 17 ವಯಸ್ಸಿನ ವಿವಿಧ Instagram ಖಾತೆಗಳನ್ನು ರಚಿಸಿದೆ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ನಿಷೇಧಿತ ವಸ್ತುಗಳಿಗೆ ಹದಿಹರೆಯದ ಪ್ರವೇಶವನ್ನು ಪರೀಕ್ಷಿಸಲು ಅವುಗಳನ್ನು ಬಳಸಲಾಗಿದೆ. ಇನ್‌ಸ್ಟಾಗ್ರಾಮ್ ಹದಿಹರೆಯದವರಿಗೆ ವಯಸ್ಸಿಗೆ ನಿರ್ಬಂಧಿತ ಮತ್ತು ಕಾನೂನುಬಾಹಿರ ಡ್ರಗ್‌ಗಳನ್ನು ಸುಲಭವಾಗಿ ಹುಡುಕಲು ಅವಕಾಶ ಮಾಡಿಕೊಟ್ಟಿದ್ದು ಮಾತ್ರವಲ್ಲದೆ, ಪ್ಲಾಟ್‌ಫಾರ್ಮ್‌ನ ಅಲ್ಗಾರಿದಮ್‌ಗಳು (Algorithm) ಒಪಿಯಾಡ್‌ಗಳಿಂದ ಪಾರ್ಟಿ ಡ್ರಗ್‌ಗಳವರೆಗೆ ಮಾದಕ ವಸ್ತು ಮಾರಾಟ ಮಾಡುವ ಡ್ರಗ್ ಡೀಲರ್‌ಗಳೊಂದಿಗೆ ಅಪ್ರಾಪ್ತ ವಯಸ್ಕ ಖಾತೆ ಬಳಕೆದಾರರು ನೇರವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡಿತು ಎಂದು ವರದಿ ಹೇಳಿದೆ.
ಡ್ರಗ್ ಡೀಲರ್ ಖಾತೆಗಳನ್ನು ಸಜೆಸ್ಟ್ ಮಾಡುತ್ತಿದೆ ಜಾಲತಾಣ ದೈತ್ಯ!
ಇನ್ಸ್ಟಾಗ್ರಾಮ್ #mdma ನಂತಹ ಡ್ರಗ್-ಸಂಬಂಧಿತ ವಿಷಯವನ್ನು ನಿಷೇಧಿಸಿದೆ. ಆದರೆ ಹದಿಹರೆಯದ ಬಳಕೆದಾರರು #mdma ಗಾಗಿ ಹುಡುಕಿದಾಗ, ಹುಡುಕಾಟ ಬಾರ್‌ನಲ್ಲಿ (Search Bar) ಅದೇ ವಿಷಯವಾಗಿ ಇನ್ಸ್ಟಾಗ್ರಾಮ್ ಇತರ ಪರ್ಯಾಯ ಹ್ಯಾಶ್‌ಟ್ಯಾಗ್‌ಗಳು ತೋರಿಸುತ್ತಿದೆ. ಡ್ರಗ್ ಡೀಲರ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗವಾಗಿ ಡ್ರಗ್ ಮಾರಾಟ ಮಾಡುತ್ತಾರೆ ಮತ್ತು ಆಗಾಗ್ಗೆ ಅವರ ಖಾತೆಗಳಲ್ಲಿ ಅವರು ಮಾರಾಟ ಮಾಡುತ್ತಿರುವ ಮಾದಕ ವಸ್ತುಗಳ ಬಗ್ಗೆ ಉಲ್ಲೇಖವನ್ನು ಮಾಡುತ್ತಾರೆ.
Web pages blocked in 2020 : 9,849 ವೆಬ್‌ಸೈಟ್‌ಗಳಿಗೆ ನಿರ್ಬಂಧ : ರಾಜೀವ್
ಅಂತಹ ಖಾತೆಗಳು ಯುವ ಬಳಕೆದಾರರಿಗೆ ಡ್ರಗ್ ಮಾರಾಟ ಅಡುವ ಉದ್ದೇಶದಿಂದ ತೆರಯಲಾಗಿದೆ ಎಂದು ತಿಳಿದುಬಂದಿದೆ. ಸಂಶೋಧನೆಗಳಲ್ಲಿ ಇನ್ಸ್ಟಾಗ್ರಾಮ್ ಸ್ಪಷ್ಟವಾಗಿ ಇಂಥಹ ಹ್ಯಾಶ್‌ಟ್ಯಾಗ್‌ಗಳನ್ನು ಮರೆಮಾಡುವುದಿಲ್ಲ ಎಂದು ಕಂಡುಹಿಡಿಯಲಾಗಿದೆ. ಹದಿಹರೆಯದ ಬಳಕೆದಾರರು ಡ್ರಗ್ ಡೀಲರ್ ಅನ್ನು ಫಾಲೋ ಮಾಡಿದಾಗ ಇನ್ಸ್ಟಾಗ್ರಾಮ್ ಸೂಚಿಸಿದ ಸ್ನೇಹಿತರ ವಿಭಾಗದಲ್ಲಿ (Friend Suggestion) ಇದೇ ರೀತಿಯ ಡ್ರಗ್ ಡೀಲರ್‌ಗಳನ್ನು ತೋರಿಸಲು ಪ್ರಾರಂಭಿಸಿತು ಎಂದು ವರದಿ ಹೇಳಿದೆ.
ಈಗಾಗಲೇ ಇನ್ಸ್ಟಾಗ್ರಾಮ್ ಹಲವು ಆರೋಪ!
"ಈ ರೀತಿಯ ಮಾದಕ ವಸ್ತು ಸಂಬಂಧಿತ ವಿಷಯಗಳಿಗಾಗಿ ಇನ್ಸ್ಟಾಗ್ರಾಮ್ ಅತ್ಯಂತ ಕೆಟ್ಟ ಸ್ಥಳಗಳಲ್ಲಿ ಒಂದಾಗಿದೆ ಎಂದು ನಾನು ಹೇಳುತ್ತೇನೆ" ಎಂದು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿಮ್ ಮ್ಯಾಕಿ (Tim Mackey) ಹೇಳಿದ್ದಾರೆ. ಯುವ ಬಳಕೆದಾರರನ್ನು ಅಪ್ಲಿಕೇಶನ್‌ನಲ್ಲಿ ಹಾನಿಕಾರಕ ಮತ್ತು ಅಶ್ಲೀಲ ವಿಷಯಗಳನ್ನು ಪ್ರಚೋದಿಸಿದ್ದಕ್ಕಾಗಿ ಈಗಾಗಲೇ ಇನ್ಸ್ಟಾಗ್ರಾಮ್ ಹಲವು ಆರೋಪಗಳನ್ನು ಎದುರಿಸುತ್ತಿದೆ.