ಹ್ಯಾಕ್ ಮಾಡಲಾಗಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆಯನ್ನು ಈಗ ಮರುಸ್ಥಾಪಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ
Tech Desk: ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆಯನ್ನು ಬುಧವಾರ ಹ್ಯಾಕ್ ಮಾಡಲಾಗಿದ್ದು ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್ಗಳು, ಖಾತೆಯ ಹೆಸರನ್ನು ಎಲೋನ್ ಮಸ್ಕ್ (Elon Musk) ಎಂದು ಬದಲಿಸಿದ್ದರು. ಖಾತೆಯನ್ನು ಹ್ಯಾಕ್ ಮಾಡಿದ ನಂತರ, ಬಿಟ್‌ಕಾಯಿನ್ ಎಂದು ಬರೆಯಲಾಗಿದ್ದ 'amazing news' ಗೆ ಲಿಂಕ್‌ಗಳನ್ನು ಹೊಂದಿರುವ ಹಲವಾರು ಟ್ವೀಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಹ್ಯಾಕರ್‌ಗಳು ಖಾತೆಯನ್ನು 'ಎಲೋನ್ ಮಸ್ಕ್' ಎಂದು ಮರುನಾಮಕರಣ ಮಾಡುವುದರ ಜತೆಗೆ 'Great Job' (ಉತ್ತಮ ಕೆಲಸ) ಎಂದು ಟ್ವೀಟ್ ಮಾಡಲು ಪ್ರಾರಂಭಿಸಿದ್ದರು.
ಆದರೆ ತಕ್ಷಣ ಎಚ್ಚೆತ್ತ ಸಚಿವಾಲಯ ತನ್ನ ಟ್ವೀಟರ್ ಖಾತೆಯನ್ನು ಮರುಸ್ಥಾಪಿಸಿದೆ. ಅಲ್ಲದೆ ಹ್ಯಾಕರ್ಸ್ ಮಾಡಿದ ಟ್ವೀಟ್‌ಗಳನ್ನು ಡೀಲಿಟ್ ಮಾಡಿ ಖಾತೆಯನ್ನು ಭದ್ರಪಡಿಸಿದೆ. “@Mib_india ಖಾತೆಯನ್ನು ಮರುಸ್ಥಾಪಿಸಲಾಗಿದೆ. ಇದು ಎಲ್ಲಾ ಅನುಯಾಯಿಗಳ (Followers) ಮಾಹಿತಿಗಾಗಿ,” ಎಂದು ಸಚಿವಾಲಯವು ಖಾತೆಯನ್ನು ಮರುಸ್ಥಾಪಿಸಿದ ನಂತರ ಟ್ವೀಟ್ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯ ಟ್ವಿಟರ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.
undefined
The account has been restored. This is for the information of all the followers.
— Ministry of Information and Broadcasting (@MIB_India)
ಸರಿಯಾಗಿ ಒಂದು ತಿಂಗಳ ಹಿಂದೆ ಡಿಸೆಂಬರ್ 12, 2021 ರಂದು, ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲಾಗಿತ್ತು. ಖಾತೆಯನ್ನು ಮರುಸ್ಥಾಪಿಸುವ ಮೊದಲು, "ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ (Bitcoin) ಅನ್ನು ಕಾನೂನುಬದ್ಧವಾಗಿ ಅಳವಡಿಸಿಕೊಂಡಿದೆ. ಸರ್ಕಾರವು ಅಧಿಕೃತವಾಗಿ 500 BTC ಯನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ" ಎಂದು ನಮೂದಿಸಿದ ಟ್ವೀಟ್ ಅನ್ನು PM ಮೋದಿ ಅವರ ಟೈಮ್‌ಲೈನ್‌ನಲ್ಲಿ URL ನೊಂದಿಗೆ ಹಂಚಿಕೊಳ್ಳಲಾಗಿದೆ.
ಖಾತೆಯನ್ನು ರಿಸ್ಟೋರ್ ಮಾಡಿದ ನಂತರ ಪ್ರಧಾನ ಮಂತ್ರಿ (PMO India) ಅಧಿಕೃತ ಖಾತೆಯಿಂದ ಸ್ಪಷ್ಟನೆ ನೀಡಲಾಗಿತ್ತು. "ಪ್ರಧಾನಿ @narendramodi ಅವರ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲಾಗಿದೆ. ಈ ವಿಷಯವನ್ನು ಟ್ವಿಟರ್‌ಗೆ ತಿಳಿಸಲಾಗಿದ್ದು ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಯನ್ನು ಹ್ಯಾಕ್ ಮಾಡಿದಾಗ ಹಂಚಿಕೊಂಡ ಯಾವುದೇ ಟ್ವೀಟ್‌ಗಳನ್ನು ನಿರ್ಲಕ್ಷಿಸಬೇಕು" ಎಂದು PMO ಇಂಡಿಯಾ ತಿಳಿಸಿತ್ತು. ಸೆಪ್ಟೆಂಬರ್ 2020 ರಲ್ಲಿ, ಪಿಎಂ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆಗ ಕೂಡ ಕ್ರಿಪ್ಟೋಕರೆನ್ಸಿಯನ್ನು ಬಗ್ಗೆ ಟ್ವೀಟ್‌ಗಳನ್ನು ಮಾಡಲಾಗಿತ್ತು.
ಜನವರಿ 3 ರಂದು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಮನ್ ದೇಶಿ ಮಹಿಳಾ ಬ್ಯಾಂಕ್ (ಮೈಕ್ರೋ ಫೈನಾನ್ಸ್ ಬ್ಯಾಂಕ್) ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಹ್ಯಾಕರ್‌ಗಳು ಹ್ಯಾಂಡಲ್‌ಗೆ ‘ಎಲಾನ್ ಮಸ್ಕ್’ ಎಂದು ಮರುನಾಮಕರಣ ಮಾಡಿದ್ದರು. ಇಂದಿನ ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್ ಮತ್ತು ಜನವರಿ 3 ರ ಘಟನೆಯಲ್ಲಿ ಪ್ರೊಫೈಲ್‌ಗಳ ಹೆಸರನ್ನು ಬದಲಾಯಿಸಲು ಬಳಸಿದ ಫಾಂಟ್‌ಗಳು ಒಂದೇ ಆಗಿವೆ. ಎರಡು ಸಂದರ್ಭಗಳಲ್ಲಿ ಟ್ವೀಟ್ ಮಾಡಿದ ಲಿಂಕ್‌ಗಳು ವಿಭಿನ್ನವಾಗಿರುವಂತೆ ತೋರುತ್ತಿದ್ದರೂ, ಪೋಸ್ಟ್ ಮಾಡಲಾದ ವಿಷಯ 'AmazZING' ಸಹ ಒಂದೇ ರೀತಿಯದ್ದಾಗಿದೆ.