ಇನ್‌ಫಿನಿಕ್ಸ್‌ ಬಿಡುಗಡೆ ಮಾಡಿದೆ ಬಜೆಟ್ ಸ್ಮಾರ್ಟ್‌ಫೋನ್!

Published : Aug 09, 2018, 10:00 PM IST
ಇನ್‌ಫಿನಿಕ್ಸ್‌ ಬಿಡುಗಡೆ ಮಾಡಿದೆ ಬಜೆಟ್ ಸ್ಮಾರ್ಟ್‌ಫೋನ್!

ಸಾರಾಂಶ

ದೀರ್ಘಕಾಲದ ಸ್ಮಾಟ್ ಫೋರ್ನ್ ಬಳಕೆಯಿಂದ ಕಣ್ಣಿನ ಮೇಲಾಗುವ ಒತ್ತಡವನ್ನು ನಿವಾರಿಸಲು ಸ್ಕ್ರೀನ್ ಐ ಕೇರ್ ಮೋಡ್ ಫೋಕಸ್‌ನಲ್ಲಿಟ್ಟು ಹಿನ್ನೆಲೆಯ ಎಲ್ಲವನ್ನು ಅಸ್ಪಷ್ಟಗೊಳಿಸಿ ಗುಂಪಿನಿಂದ ನಿಮ್ಮನ್ನು ಪ್ರತ್ಯೇಕವಾಗಿ ಪ್ರದರ್ಶಿಸುವ ಬೊಕೆ ಸೆಲ್ಫಿ ಮೋಡ್ 

ಇನ್‌ಫಿನಿಕ್ಸ್ ಕಂಪೆನಿ 6000 ರು.ಗಿಂತಲೂ ಕಡಿಮೆ ದರದ ಹಲವಾರು ವಿಶೇಷತೆ ಹೊಂದಿರುವ ಸ್ಮಾರ್ಟ್ 2 ಫೋನ್ ಬಿಡುಗಡೆ ಮಾಡಿದೆ. 

ಇನ್‌ಫಿನಿಕ್ಸ್ ಸ್ಮಾರ್ಟ್ 2 ಮೊಬೈಲ್‌ಗಳು 5.45 ಇಂಚು ಡಿಸ್ಪ್ಲೇ ಹೊಂದಿವೆ. 2 ಜಿಬಿ RAM, 16 ಜಿಬಿ ಸ್ಟೋರೇಜ್ ವ್ಯವಸ್ಥೆ ಇದೆ. 128 ಜಿಬಿವರೆಗೂ ವಿಸ್ತರಿಸಬಹುದಾದ ಮೊಮೆರಿ ಸೌಲಭ್ಯವಿದೆ. 

ಜೊತೆಗೆ ಡ್ಯುಯಲ್ ಸಿಮ್, ಡ್ಯುಯಲ್ ವೋಲ್ಟ್(ಡಿಎಸ್ ಡಿವಿ) ವ್ಯವಸ್ಥೆ ಇದೆ. 8 ಎಂಪಿಯ ಮಂದ ಬೆಳಕಿನ ಸೆಲ್ಫೀ ಕ್ಯಾಮರಾ, ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್, ಫೇಸ್‌ಅನ್‌ಲಾಕ್ ಸೌಲಭ್ಯ ಈ ಫೋನ್‌ನಲ್ಲಿವೆ.  ಎಫ್.2.0 ಅಪರ್ ಚರ್ ಇರುವ ಫೋನ್ ಇದಾಗಿದೆ. 

ಇದರಲ್ಲಿರುವ ಬೊಕೆ ಸೆಲ್ಫಿ ಮೋಡ್ ನಿಮ್ಮನ್ನು ಫೋಕಸ್‌ನಲ್ಲಿಟ್ಟು ಹಿನ್ನೆಲೆಯ ಎಲ್ಲವನ್ನು ಅಸ್ಪಷ್ಟಗೊಳಿಸಿ ಗುಂಪಿನಿಂದ ನಿಮ್ಮನ್ನು ಪ್ರತ್ಯೇಕವಾಗಿ ಪ್ರದರ್ಶಿಸುತ್ತದೆ. 

ಸ್ಕ್ರೀನ್ ಐ ಕೇರ್ ಮೋಡ್, ದೀರ್ಘಕಾಲದ ಸ್ಮಾಟ್ ಫೋರ್ನ್ ಬಳಕೆಯಿಂದ ಕಣ್ಣಿನ ಮೇಲಾಗುವ ಒತ್ತಡವನ್ನು ನಿವಾರಿಸುತ್ತದೆ. ಸ್ಮಾರ್ಟ್ 2 ಉತ್ಪನ್ನ ಸ್ಯಾಂಡ್‌ಸ್ಟೋನ್ ಬ್ಲ್ಯಾಕ್, ಸೆರಿನ್ ಗೋಲ್ಡ್, ಬೋರ್ಡೆಕ್ಸ್ ರೆಡ್ ಮತ್ತು ಸಿಟಿ ಬ್ಲ್ಯೂ ವರ್ಣಗಳಲ್ಲಿ ದೊರೆಯುತ್ತದೆ.

ಬೆಲೆ : 5999 ರು. ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ವ್ಯಾಟ್ಸಾಪ್‌ನಿಂದ ಮಾತ್ರ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡುವುದು ಹೇಗೆ? ಸಿಂಪಲ್ ಟಿಪ್ಸ್
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌