ಇದು ಅಂತಿತಹ ವಾಚ್ ಅಲ್ಲ! ಹಾರ್ಟ್ ರೇಟ್, ವರ್ಕೌಟ್ ಕೌಂಟ್, ಜಿಪಿಎಸ್ ಸೌಲಭ್ಯ ವನ್ನೂ ಹೊಂದಿರುವ ಫಾಸಿಲ್ ಬ್ರ್ಯಾಂಡ್‌ನ ಸ್ಮಾರ್ಟ್‌ವಾಚ್!
ಫಾಸಿಲ್ ಕ್ಯೂ ಲೈನ್ ಹೆಸರಿನ ನಾಲ್ಕನೇ ಜನರೇಶನ್ ಸ್ಮಾರ್ಟ್ ವಾಚ್‌ಅನ್ನು ಫಾಸಿಲ್ ಕಂಪೆನಿ ಬಿಡುಗಡೆ ಮಾಡಿದೆ.
ಆರೋಗ್ಯದ ಬಗ್ಗೆ ಕಾಳಜಿಯುಳ್ಳವರಿಗೆ ಈ ವಾಚ್ ಸಹಕಾರಿ. ಹಾರ್ಟ್ ರೇಟ್‌ಅನ್ನು ನಿಖರವಾಗಿ ಹೇಳುವುದು ಈ ವಾಚ್‌ನ ವಿಶೇಷತೆ.
ಅದೇ ರೀತಿ ಸ್ವಿಮ್ಮಿಂಗ್ ಮಾಡುವಾಗಲೂ ಈ ವಾಚ್ ಧರಿಸಬಹುದು. ನಿಮ್ಮ ಈಜಿನ ಅವಧಿಯನ್ನು ಪರೀಕ್ಷಿಸಬಹುದು. ವಾಟರ್ ಪ್ರೂಫ್ ಇರುವ ಫಾಸಿಲ್ ಕ್ಯೂ ಲೈನ್ ವಾಚ್‌ನಲ್ಲಿ ಸ್ವಿಮ್ ಪ್ರೂಫ್ ಎಂಬ ಹೊಸ ಆಯ್ಕೆ ಇದೆ.
ಅದೇ ರೀತಿ ಜಿಪಿಎಸ್ ಸೌಲಭ್ಯವನ್ನೂ ಹೊಂದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ವರ್ಕೌಟ್ ಕೌಂಟ್ ನೀಡೋದು ಇದರ ಹೆಚ್ಚುಗಾರಿಕೆ. ಇದಲ್ಲದೇ ಎನ್ ಎಫ್‌ಸಿ ವ್ಯವಸ್ಥೆಯ ಮೂಲಕ ಹಣ ವರ್ಗಾಯಿಸುವ ಅವಕಾಶ ಕಲ್ಪಿಸಲಾಗಿದೆ.
ಫ್ಯಾಶನೇಬಲ್ ಲುಕ್ ಹೊಂದಿರುವ ಈ ವಾಚ್‌ನಲ್ಲಿ ಕಾಲ್ ರಿಸೀವ್ ಮಾಡುವ ಸವಲತ್ತೂ ಇದೆ. ಸ್ಟೈನ್‌ಲೆಸ್ ಸ್ಟೀಲ್ ಕೇಸ್, ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ.
ಬೆಲೆ: 19,995ರು.ನಿಂದ 21995 ರು