ಬೆಂಗ್ಳೂರಲ್ಲಿ ದೇಶದ ಮೊದಲ 'ಡಾಟಾ ಸಮುದ್ರ' ಆರಂಭ

By Kannadaprabha News  |  First Published Oct 23, 2021, 11:34 AM IST

*  ಶೀಘ್ರ ಹೊಸ ದತ್ತಾಂಶ ಕಾರ್ಯನೀತಿ
*  ಕೊಡಿಗೇಹಳ್ಳಿ ಐಟಿ ಪಾರ್ಕ್‌ನಲ್ಲಿ ಬೃಹತ್‌ ದತ್ತಾಂಶ ಕೇಂದ್ರ ಉದ್ಘಾಟನೆ
*  ಉದ್ಯಮಸ್ನೇಹಿಯಾದ ಹೊಸ ದತ್ತಾಂಶ ಕಾರ್ಯನೀತಿ 
 


ಬೆಂಗಳೂರು(ಅ.23):  ರಾಜ್ಯ ಸರ್ಕಾರವು(State Government) ಶೀಘ್ರದಲ್ಲೇ ಹೊಸ ದತ್ತಾಂಶ ಕಾರ್ಯನೀತಿಯನ್ನು ರೂಪಿಸಲಿದೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ(CN Ashwathnarayan) ತಿಳಿಸಿದ್ದಾರೆ. 

ಜಾಲ ಹೋಬಳಿಯ ಮಹದೇವ ಕೊಡಿಗೇಹಳ್ಳಿಯ ಕೆಐಎಡಿಬಿ ಐಟಿ ಪಾರ್ಕ್‌ನಲ್ಲಿ(IT Park) ಟೆಲಿ ಇಂಡಿಯಾ ನೆಟ್‌ವರ್ಕ್ಸ್‌ ಕಂಪನಿ(TeleiIndia Networks Company) ಸ್ಥಾಪಿಸಿರುವ ಬೃಹತ್‌ ದತ್ತಾಂಶ ಕೇಂದ್ರ ‘ಡಾಟಾ ಸಮುದ್ರ’ವನ್ನು(Data Sea) ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

undefined

ರಾಜ್ಯ ಹೊಸ ಅನ್ವೇಷಣೆಗಳ ನೆಲೆಯಾಗಬೇಕು: ಕೃಷಿ ಸೇರಿ ಎಲ್ಲ ರಂಗಗಳಿಗೆ ತಂತ್ರಜ್ಞಾನ!

ಹೊಸ ದತ್ತಾಂಶ ಕಾರ್ಯನೀತಿಯು ಉದ್ಯಮಸ್ನೇಹಿಯಾಗಿದೆ ಎಂದ ಅವರು, ಸುಮಾರು 100 ಕೋಟಿ ರು. ಹೂಡಿಕೆಯ ಆನ್‌ಡಿಮ್ಯಾಂಡ್‌ ಆನ್‌ರಿಕ್ವೈರ್‌ಮೆಂಟ್‌’(On Demand on Requirement) ಮಾದರಿಯ ಈ ಡಾಟಾ ಕೇಂದ್ರವು 500ಕ್ಕೂ ಹೆಚ್ಚು ಮಂದಿಗೆ ಉದ್ಯೋಗ(Jobs) ನೀಡಲಿದೆ. ಈ ಮಾದರಿಯು ದೇಶದಲ್ಲೇ(India) ಮೊದಲನೆಯದು ಎನ್ನಲಾಗಿದ್ದು, ಕೋ-ಲೊಕೇಷನ್‌(Co-location), ಹೋಸ್ಟಿಂಗ್‌(Hosting), ಕ್ಲೌಡ್‌(Cloud) ಮತ್ತಿತರ ಸೇವೆಗಳನ್ನು ಒದಗಿಸುತ್ತದೆ ಎಂದು ವಿವರಿಸಿದರು.

ಟೆಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌, ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡ ಕೇಶವ ರೆಡ್ಡಿ, ಸಿಸ್ಕೋ ಕಂಪನಿಯ ಅಧ್ಯಕ್ಷೆ ಡೈಸಿ ಚಿತ್ತಿಲಪಲ್ಲಿ, ಸಿಯೆನಾ ಇಂಡಿಯಾದ ಮುಖ್ಯಸ್ಥ ರಿಯಾನ್‌ ಪೆರೇರ, ಲೈಟ್‌ಸ್ಟಾಮ್‌ರ್‍ಟೆಲಿಕಾಂ ಕನೆಕ್ಟಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರಜಿತ್‌ ಗುಪ್ತ ಮತ್ತಿತರರು ಉಪಸ್ಥಿತರಿದ್ದರು. 
 

click me!