ಚೀನಾದ ಕಡಿಮೆ ಬೆಲೆಯ ರೆಡ್'ಮೀ ನೋಟ್ 4 ಫೋನ್'ಗೆ ಭಾರತದ ಸ್ವೈಪ್ ಫೋನ್ ಪೈಪೋಟಿ

Published : Oct 07, 2017, 07:37 PM ISTUpdated : Apr 11, 2018, 12:58 PM IST
ಚೀನಾದ ಕಡಿಮೆ ಬೆಲೆಯ ರೆಡ್'ಮೀ ನೋಟ್ 4 ಫೋನ್'ಗೆ ಭಾರತದ ಸ್ವೈಪ್ ಫೋನ್ ಪೈಪೋಟಿ

ಸಾರಾಂಶ

ರೆಡ್'ಮೀ ನೋಟ್ 4 ಫೋನ್'ಗಿಂತ ಸ್ವೈಪ್ ಇಲೈಟ್ ಪ್ರೋ ಹೆಚ್ಚು RAM ಹೊಂದಿದೆ. ಇನ್ನೂ ಹಲವಾರು ವಿಚಾರದಲ್ಲಿ ರೆಡ್'ಮೀಗಿಂತ ಇಲೈಟ್ ಪ್ರೋ ತುಸು ಮುಂದಿದೆ. ಆದರೆ ಬ್ಯಾಟರಿ ವಿಚಾರದಲ್ಲಿ ಹಿಂದುಳಿದಿದೆ.

ನವದೆಹಲಿ(ಅ. 07): ಚೀನಾದ ಶಿಯೋಮಿ ರೆಡ್'ಮೀ ಸ್ಮಾರ್ಟ್'ಫೋನ್'ಗಳು ಭಾರತೀಯ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರುತ್ತಿವೆ. ಉತ್ತಮ ಫೀಚರ್ಸ್ ಮತ್ತು ಕಡಿಮೆ ಬೆಲೆಯು ಆ ಫೋನ್'ನ ಟ್ರಂಪ್ ಕಾರ್ಡ್'ಗಳು. ಈಗ ಭಾರತದ ಸ್ಮಾರ್ಟ್'ಫೋನ್ ತಯಾರಕ ಸಂಸ್ಥೆ ಸ್ವೈಪ್ ಕೂಡ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್'ಫೋನ್ ಬಿಡುಗಡೆ ಮಾಡಿದೆ. ಸ್ವೈಪ್ ಇಲೈಟ್ ಪ್ರೋ ಸ್ಮಾರ್ಟ್'ಫೋನ್ 6,999 ರೂಪಾಯಿಗೆ ಲಭ್ಯವಿದೆ.

ರೆಡ್'ಮೀ ನೋಟ್ 4 ಫೋನ್'ಗಿಂತ ಸ್ವೈಪ್ ಇಲೈಟ್ ಪ್ರೋ ಹೆಚ್ಚು RAM ಹೊಂದಿದೆ. ಇನ್ನೂ ಹಲವಾರು ವಿಚಾರದಲ್ಲಿ ರೆಡ್'ಮೀಗಿಂತ ಇಲೈಟ್ ಪ್ರೋ ತುಸು ಮುಂದಿದೆ. ಆದರೆ ಬ್ಯಾಟರಿ ವಿಚಾರದಲ್ಲಿ ಹಿಂದುಳಿದಿದೆ.

ಸ್ವೈಟ್ ಇಲೈಟ್ ಪ್ರೋ ಫೀಚರ್ಸ್:
* 5 ಇಂಚು ಎಚ್'ಡಿ ಪರದೆ
* ಆಂಡ್ರಾಯ್ಡ್ 6.0
* ಕ್ವಾಲ್'ಕಾಮ್ ಸ್ನಾಪ್'ಡ್ರಾಗಾನ್ 425 ಚಿಪ್
* 3ಜಿಬಿ RAM
* 32 ಜಿಬಿ ಇಂಟರ್ನಲ್ ಸ್ಟೋರೇಜ್
* 128 ಜಿಬಿವರೆಗೂ ಸ್ಟೋರೇಜ್ ವಿಸ್ತರಣೆ ಅವಕಾಶ
* ಬೆಲೆ 6,999
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* 2500mAh ಸಾಮರ್ಥ್ಯದ ಬ್ಯಾಟರಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಐಫೋನ್ 17e ರಿಲೀಸ್‌: ಕೇವಲ ₹64,900ಕ್ಕೆ ಲಭ್ಯ! ಸ್ಯಾಟಲೈಟ್ ಫೀಚರ್ ಮತ್ತು ಸೂಪರ್ ಫಾಸ್ಟ್ A19 ಚಿಪ್!
ಶಿವಮೊಗ್ಗಕ್ಕೆ ರಾಜ್ಯದ ಮತ್ತೊಂದು 'ಐಟಿ ಹಬ್' ಆಗುವ ಸಾಮರ್ಥ್ಯವಿದೆ: 'ನೆಮ್ಮದಿ ಹಾಳು ಮಾಡಬೇಡಿ' ಎಂದ ಮಲೆನಾಡಿಗರು!