
ವಾಟ್ಸಪ್ ಬಳಕೆದಾರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅದೇನಪ್ಪಾ ಎಂದರೆ, ದಿನದಿಂದ ದಿನಕ್ಕೆ ಹೊಸತನಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಾ ಬಂದಿರುವ ವಾಟ್ಸಪ್ ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಐಒಎಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಇಮೋಜಿಗಳನ್ನು ನೀಡಲು ಮುಂದಾಗಿದೆ.
ಆ್ಯಪಲ್ ಮೊಬೈಲ್‌ಗಳಲ್ಲಿ ಇರುವ ಕೆಲವು ವಾಟ್ಸಪ್ ಇಮೋಜಿಗಳು ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಿಗುತ್ತಿಲ್ಲ. ಆದರೆ ಈಗ ಪರಿಚಯಿಸಲು ಮುಂದಾಗಿರುವ ವಿ 2.17.340 ಅಪ್‌ಡೇಟ್ ವರ್ಷನ್‌ನಲ್ಲಿ ಎಲ್ಲಾ ರೀತಿಯ ಇಮೋಜಿಗಳು ಬಳಕೆಗೆ ಸಿಗಲಿವೆ. ವಾಟ್ಸಪ್ ಇಂದು ಒಂದು ಬಿಲಿಯನ್‌ಗೂ ಅಧಿಕ ಸಂಖ್ಯೆಯ ಸಕ್ರಿಯ ಬಳಕೆ ದಾರರನ್ನು ಹೊಂದಿದೆ. ಇದರಲ್ಲಿ ಹೆಚ್ಚಿನವರು ಪ್ರತೀ ‘ಬಾರಿಯೂ ಇಮೋಜಿಗಳ ಬಳಕೆಗೆ ಮುಂದಾಗುತ್ತಾರೆ ಎಂದು ಸ್ವತಃ ಕಂಪನಿಯೇ ತಿಳಿಸಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ತನ್ನ ಇಮೋಜಿ ಸೇವೆಯನ್ನು ವಿಸ್ತರಿಸಿಕೊಂಡು ಬಂದಿದ್ದ ಕಂಪನಿ ಈಗ ಅಂತಿಮವಾಗಿ ಐಒಎಸ್ ಆಪರೇಟಿಂಗ್ ಸಿಸ್ಟಂನ ಎಲ್ಲಾ ಇಮೋಜಿಗಳನ್ನು ಆಂಡ್ರಾಯ್ಡ್‌ಗೂ ಬಳಕೆದಾರರಿಗೂ ಸಿಗುವಂತೆ ನೋಡಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ‘ವಿಷ್ಯದಲ್ಲಿ ಎಲ್ಲಾ ಮಾದರಿಯ ಆಪರೇಟಿಂಗ್ ಸಿಸ್ಟಂಗಳ ನಡುವೆಯೂ ನವೀನ ಇಮೋಜಿಗಳಿಂದ ಸಂವಹನ ಸಾಧ್ಯವಾಗಲಿದೆ.
ಆದರೆ ಇದು ಎಲ್ಲಾ ಅಪ್‌ಡೇಟೆಡ್ ವರ್ಷನ್‌ಗಳಲ್ಲಿ ಮಾತ್ರ ಸಾಧ್ಯವಾಗಲಿದೆ. ಅಂದರೆ ಇಬ್ಬರು ವ್ಯಕ್ತಿಗಳ ನಡುವೆ ಸಂವಹನ ನಡೆಯುತ್ತಿದ್ದರೆ ಇಬ್ಬರೂ ಕೂಡ ಹೊಸ ವರ್ಷನ್ ಡೌನ್‌ಲೋಡ್ ಮಾಡಿಕೊಂಡಿರಬೇಕು. ಅದೂ ಅಲ್ಲದೇ ಈಗಿರುವ ಆ್ಯಪಲ್ ಫೋನ್‌ಗಳ ಇಮೋಜಿಗಳಿಗಿಂತಲೂ ಕೆಲ ಭಿನ್ನತೆಗಳು ಹೊಸ ವರ್ಷನ್‌ನಲ್ಲಿ ಇರಲಿವೆ ಎಂದು ಕಂಪನಿ ಹೇಳಿಕೊಂಡಿದ್ದರೂ ಸಹ, ಅದರ ಪೂರ್ಣ ಸ್ವರೂಪಗಳನ್ನು ಬಳಕೆ ಮಾಡಿದ ನಂತರವೇ ತಿಳಿಯಬೇಕಷ್ಟೇ. ಆದರೂ ಕೂಡ ಈಗ ಹೊರ ತರುತ್ತಿರುವ ಹೊಸ ವರ್ಷನಿಂದಂತೂ ಇಮೋಜಿ ಪ್ರಿಯರಿಗೆ ಬಹಳ ಸಂತಸವಾಗುವುದಂತೂ ಖಚಿತ ಎನ್ನಬಹುದು. ಅದೂ ಅಲ್ಲದೇ ಕೆಲ ದಿನಗಳ ಹಿಂದಷ್ಟೇ ವಾಟ್ಸಪ್ ರೀಕಾಲ್ ಎನ್ನುವ ಹೊಸ ಆಯ್ಕೆಯೊಂದನ್ನು ನೀಡಿತ್ತು. ಆ ಆಯ್ಕೆಯೂ ಇದೇ ಅಪ್‌ಡೇಟೆಡ್ ವರ್ಷನ್‌ನೊಂದಿಗೆ ಬರಲಿದೆಯೇ ಇಲ್ಲವೇ ಎನ್ನುವುದು ಖಚಿತವಾಗಿಲ್ಲ.
ಏನೇ ಆದರೂ ಮುಂದಿನ ಅಪ್‌ಡೇಟ್ ವರ್ಷನ್‌ನಲ್ಲಿ ಸಾಕಷ್ಟು ನವೀನ ಸ್ವರೂಪಗಳನ್ನು ವಾಟ್ಸಪ್ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ ಎನ್ನುವುದಂತೂ ಸಂತಸದ ವಿಚಾರ. ಇದರೊಂದಿಗೆ ಆಂಡ್ರಾಯ್ಡ್ ಬಳಕೆದಾರರೂ ಕೂಡ ಆ್ಯಪಲ್ ಆಪರೇಟಿಂಗ್ ಸಿಸ್ಟಂಗಳಿಗೆ ಸಮನಾಗಿ ಸಂವಹನ ನಡೆಸಲು ಇದರಿಂದ ಸಾಧ್ಯವಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.