ಅಮೆರಿಕಾದ IBM ಕಂಪನಿಗೆ ಭಾರತೀಯ ಮೂಲದ ಅರವಿಂದ ಕೃಷ್ಣ ಬಾಸ್

Suvarna News   | Asianet News
Published : Jan 31, 2020, 10:04 PM ISTUpdated : Jan 31, 2020, 10:46 PM IST
ಅಮೆರಿಕಾದ IBM ಕಂಪನಿಗೆ ಭಾರತೀಯ ಮೂಲದ ಅರವಿಂದ ಕೃಷ್ಣ ಬಾಸ್

ಸಾರಾಂಶ

ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ವಿಶ್ವದ ಪ್ರಮುಖ ಕಂಪನಿಗಳ  CEO ಭಾರತೀಯರ ಹೆಗಲೇರಿರವುದು ನಮ್ಮ ಹೆಮ್ಮೆ. ಇದೀಗ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿ ಎಂದೇ ಗುರುತಿಸಿಕೊಂಡಿರುವ  ಅಮೆರಿಕದ IBM ಸಂಸ್ಥೆಯ ನೂತನ CEO ಆಗಿ ಭಾರತೀಯ ಮೂಲದ ಅರವಿಂದ ಕೃಷ್ಣ ನೇಮಕಗೊಂಡಿದ್ದಾರೆ.

ನ್ಯೂಯಾರ್ಕ್(ಜ.31): ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ IBM ವಿಶ್ವದಲ್ಲೇ ದೈತ್ಯ ಕಂಪನಿಯಾಗಿ ಬೆಳೆದು ನಿಂತಿದೆ. ಅಮೆರಿಕಾ ಮೂಲದ ಈ ಕಂಪನಿಗೆ ಭಾರತದ ಅರವಿಂದ ಕೃಷ್ಣ ಕಾರ್ಯನಿರ್ವಾಹಕ ಅಧಿಕಾರಿ(CEO) ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: 1,680 ಕೋಟಿ ಸಂಪಾದಿಸುವ Google ಸಿಇಓ ಉಪಾಹಾರ ಕೇವಲ 1 ಆಮ್ಲೆಟ್‌, ಟೋಸ್ಟ್!

ಸದ್ಯ  IBM CEO ಆಗಿರುವ 62 ವರ್ಷದ  ವರ್ಜಿನಿಯಾ ರೊಮೆಟ್ಟಿ ಕಳೆದ 40 ವರ್ಷಗಳಿಂದ IBM ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ವರ್ಷ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮುಂದುವರಿಯಲಿರುವ ರೊಮೆಟ್ಟಿ ಬಳಿಕ ನಿವೃತ್ತಿ ಹೊಂದಲಿದ್ದಾರೆ. ರೊಮೆಟ್ಟಿ ನಿಭಾಯಿಸಿದ  CEO ಸ್ಥಾನಕ್ಕೆ  57ರ ಹರೆಯದ, ಕಾನ್ಪುರ IIT ಹಳೇ ವಿದ್ಯಾರ್ಥಿ ಅರವಿಂದ ಕೃಷ್ಣ  ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ  ಕಂಪನಿ CEO ಆಗಿ ಆಯ್ಕೆ ಬಳಿಕ ಮಾತನಾಡಿದ ಅರವಿಂದ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. IBM ಕಂಪನಿಯ ಯಶಸ್ಸಿಗೆ ಮತ್ತಷ್ಟು ವೇಗ ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಅರವಿಂದ ಕೃಷ್ಣ ಎಪ್ರಿಲ್ 6 ರಿಂದ  IBM CEO ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ