2018ರಲ್ಲಿ ಭಾರತೀಯರು ಟೀವಿ ಖರೀದಿಗೆ ಖರ್ಚು ಮಾಡಿದ್ದು 7,200 ಕೋಟಿ ರೂ.!

By Web DeskFirst Published Jul 4, 2019, 10:56 AM IST
Highlights

2018ರಲ್ಲಿ ಭಾರತೀಯರು ಟೀವಿ ಖರೀದಿಗೆ ಖರ್ಚು ಮಾಡಿದ್ದು 7200 ಕೋಟಿ!| ಅರ್ಧಕ್ಕಿಂತ ಹೆಚ್ಚಿನ ಟೀವಿ ಸೆಟ್‌ಗಳು ಚೀನಾದಿಂದ ಭಾರತಕ್ಕೆ ಬಂದಿವೆ 

ನವದೆಹಲಿ[ಜು.04]: 2018-19ನೇ ಸಾಲಿನಲ್ಲಿ ಭಾರತ ಬರೋಬ್ಬರಿ .7224 ಕೋಟಿ ಮೌಲ್ಯದ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಟೀವಿ ಸೆಟ್‌ಗಳು ಚೀನಾದಿಂದ ಭಾರತಕ್ಕೆ ಬಂದಿವೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

2017-18ರಲ್ಲಿ 4962 ಕೋಟಿ ರೂಪಾಯಿ ಮೌಲ್ಯದ ಟೀವಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ. ಈಗಾಗಲೇ ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ದೇಶೀಯವಾಗಿ ಎಲ್‌ಸಿಡಿ, ಎಲ್‌ಇಡಿ ಮತ್ತು ಪ್ಲಾಸ್ಮಾ ಟೀವಿ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಇದಕ್ಕಾಗಿ ಸುಂಕ ರಹಿತ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಶೇ.80ರಷ್ಟುದೇಶಿಯ ಟೀವಿ ಉತ್ಪಾದನೆಗೆ ಒತ್ತು ಸಿಕ್ಕಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.

Latest Videos

2018-19ರಲ್ಲಿ ಭಾರತ ಟೀವಿಗಳನ್ನು ಆಮದು ಮಾಡಿಕೊಂಡ ಪ್ರಮುಖ ಐದು ದೇಶಗಳಲ್ಲಿ ಚೀನಾ, ವಿಯೆಟ್ನಾಂ, ಮಲೇಷಿಯಾ, ಹಾಂಗ್‌ಕಾಂಗ್‌ ಮತ್ತು ತೈವಾನ್‌ ಟಾಪ್‌ 5ರಲ್ಲಿವೆ.

click me!