ಇನ್ಮುಂದೆ ಇನ್ಸ್‌ಟಾಗ್ರಾಂನಲ್ಲಿ ಬೆತ್ತಲೆ ಚಿತ್ರ ಕಳಿಸಿದ್ರೆ ತನ್ನಿಂತಾನೇ ಬ್ಲರ್!

By Kannadaprabha News  |  First Published Apr 12, 2024, 7:04 AM IST

ಜನಪ್ರಿಯ ಮೊಬೈಲ್‌ ಸೋಷಿಯಲ್‌ ಮೀಡಿಯಾ ಆಗಿರುವ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳು ಹಾಗೂ ಇತರರ ಬೆತ್ತಲೆ ಚಿತ್ರಗಳನ್ನು ‘ಡೈರೆಕ್ಟ್‌ ಮೆಸೇಜ್‌’ (ಡಿಎಂ ಅಥವಾ ನೇರ ಸಂದೇಶ) ಮೂಲಕ ಕಳಿಸಿ ಹಣ ಪೀಕಲು ಕೆಲ ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಹೀಗಾಗಿ ಇದರ ತಡೆಗೆ ಮಕ್ಕಳ ಬೆತ್ತಲೆ ಚಿತ್ರಗಳಿದ್ದರೆ ಅವರನ್ನು ತನ್ನಿಂತಾನೆ ಮಸುಕು (ಬ್ಲರ್‌ ಮಾಡುವ) ತಂತ್ರಜ್ಞಾನವನ್ನು ಅಳವಡಿಸಲು ಇನ್‌ಸ್ಟಾಗ್ರಾಂ ನಿರ್ಧರಿಸಿದೆ.


ಲಂಡನ್‌ (ಏ.12): ಜನಪ್ರಿಯ ಮೊಬೈಲ್‌ ಸೋಷಿಯಲ್‌ ಮೀಡಿಯಾ ಆಗಿರುವ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳು ಹಾಗೂ ಇತರರ ಬೆತ್ತಲೆ ಚಿತ್ರಗಳನ್ನು ‘ಡೈರೆಕ್ಟ್‌ ಮೆಸೇಜ್‌’ (ಡಿಎಂ ಅಥವಾ ನೇರ ಸಂದೇಶ) ಮೂಲಕ ಕಳಿಸಿ ಹಣ ಪೀಕಲು ಕೆಲ ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಹೀಗಾಗಿ ಇದರ ತಡೆಗೆ ಮಕ್ಕಳ ಬೆತ್ತಲೆ ಚಿತ್ರಗಳಿದ್ದರೆ ಅವರನ್ನು ತನ್ನಿಂತಾನೆ ಮಸುಕು (ಬ್ಲರ್‌ ಮಾಡುವ) ತಂತ್ರಜ್ಞಾನವನ್ನು ಅಳವಡಿಸಲು ಇನ್‌ಸ್ಟಾಗ್ರಾಂ ನಿರ್ಧರಿಸಿದೆ.

ಅಮೆರಿಕ ಹಾಗೂ ನೈಜೀರಿಯಾದಲ್ಲಿ ಕಿಡಿಕೇಡಿಗಳು ಮಕ್ಕಳ ಬೆತ್ತಲೆ ಚಿತ್ರಗಳನ್ನು ಮಕ್ಕಳಿಗೆ ಅಥವಾ ಅವರ ಪಾಲಕರಿಗೆ ಕಳಿಸಿ ಹಣ ಪೀಕುವ ಯತ್ನ ನಡೆದಿದ್ದವು. ಹೀಗಾಗಿ ಇನ್‌ಸ್ಟಾಗ್ರಾಂ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.

Tap to resize

Latest Videos

ಅಬ್ಬಾ! ಸೋಷಿಯಲ್ ಮೀಡಿಯಾ ಸ್ಟಾರ್ ಗಳ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ, ಬರೀ ಒಂದು ವಿಡಿಯೋದಿಂದ 15 ಲಕ್ಷ ಆದಾಯ

ಹೀಗಾಗಿ ಇನ್ನು ಇಂಥ ಚಿತ್ರಗಳು ಡಿಎಂಗಳಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬಂದರೆ ಬ್ಲರ್‌ ಆಗಿ ಕಾಣಿಸಲಿವೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಂದರೆ ಮಸುಕಾಗಿಯೇ ಇರುತ್ತವೆ. ‘ಇದನ್ನು ಓಪನ್ ಮಾಡುವುದಕ್ಕೂ ಮುನ್ನ ಎಚ್ಚರ. ಇದರಲ್ಲಿ ಅಶ್ಲೀಲತೆ ಇದೆ’ ಎಂಬ ಸಂದೇಶ ಅದರ ಜತೆ ಬರುತ್ತದೆ. ಅವರು ಓಕೆ ಎಂದರೆ ಮಾತ್ರ ಚಿತ್ರ ಒಪನ್‌ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ಇಂಥ ಮೆಸೇಜ್‌ಗಳನ್ನು ಕಳಿಸಿದವರ ವಿರುದ್ಧ ಸ್ವೀಕರಿಸಿದವರು ಇನ್‌ಸ್ಟಾಗೆ ದೂರು ಕೂಡ ನೀಡಬಹುದು.

click me!