ವಾಟ್ಸ್‌ ಆ್ಯಪ್‌ನಿಂದ ಹೊಸ ಫೀಚರ್ : ಇದು ಹೆಚ್ಚು ಹೆಲ್ಪ್ ಫುಲ್

 |  First Published Jul 1, 2018, 10:58 AM IST

ವಿಶ್ವದ ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರು ಅದರಲ್ಲೂ ವಿಶೇಷವಾಗಿ ಗ್ರೂಪ್‌ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವೊಂದನ್ನು ದಯಪಾಲಿಸಿದೆ. 


ನ್ಯೂಯಾರ್ಕ್: ವಿಶ್ವದ ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರು ಅದರಲ್ಲೂ ವಿಶೇಷವಾಗಿ ಗ್ರೂಪ್‌ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವೊಂದನ್ನು ದಯಪಾಲಿಸಿದೆ. ಅದೇನೆಂದರೆ, ಒಂದು ಗ್ರೂಪ್‌ನಲ್ಲಿರುವ ಸದಸ್ಯರಿಗೆ ಆ ನಿರ್ದಿಷ್ಟಗ್ರೂಪ್‌ಗೆ ಸಂದೇಶ ಕಳುಹಿಸುವ ಹಕ್ಕನ್ನು ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಕೊಟ್ಟಿದೆ.

ಕಿರಿಕಿರಿ ಉಂಟು ಮಾಡುವ ಅನಗತ್ಯ ಸಂದೇಶಗಳಿಂದ ಬೇಸತ್ತಿರುವ ಗ್ರೂಪ್‌ ಅಡ್ಮಿನ್‌ಗಳಿಗೆ ಇದರಿಂದ ವರದಾನವಾಗುತ್ತದೆ. ಆದರೆ ಒಬ್ಬ ಅಥವಾ ಇಬ್ಬರು ಸದಸ್ಯರನ್ನು ಮಾತ್ರವೇ ಬ್ಲಾಕ್‌ ಮಾಡಲು ಇದರಲ್ಲಿ ಅವಕಾಶವಿಲ್ಲ. ಎಲ್ಲ ಸದಸ್ಯರ ಹಕ್ಕನ್ನೂ ಕಸಿದುಕೊಳ್ಳಬೇಕಾಗುತ್ತದೆ. ಇದೇ ವೇಳೆ, ಇದಕ್ಕೆ ಪರಿಹಾರವೂ ಇದೆ. ಕಿರಿಕಿರಿ ಉಂಟು ಮಾಡುವ ವ್ಯಕ್ತಿಯನ್ನು ಸದಸ್ಯನನ್ನಾಗಿ ಇಟ್ಟು, ಮಿಕ್ಕವರನ್ನು ಅಡ್ಮಿನ್‌ಗಳಾಗಿಸಬೇಕಾಗುತ್ತದೆ.

Tap to resize

Latest Videos

ಈಗಾಗಲೇ ಹಲವು ಮೊಬೈಲ್‌ಗಳಲ್ಲಿ ಈ ಸೌಕರ್ಯ ಲಭಿಸುತ್ತಿದೆ. ಒಂದು ನಿರ್ದಿಷ್ಟಗ್ರೂಪ್‌ನ ಸೆಟ್ಟಿಂಗ್ಸ್‌ನಲ್ಲಿ ಗ್ರೂಪ್‌ ಇಸ್ಫೋ ಮೇಲೆ ಕ್ಲಿಕ್‌ ಮಾಡಿದಾಗ ಗ್ರೂಪ್‌ ಸೆಟ್ಟಿಂಗ್ಸ್‌ ಎಂಬ ಹೊಸ ಆಯ್ಕೆ ನೀಡಲಾಗಿದೆ. ಅದರಲ್ಲಿ ಸೆಂಡ್‌ ಮೆಸೇಜ್‌ ಎಂಬ ಆಯ್ಕೆ ಇದೆ. ಅದನ್ನು ಒತ್ತಿದಾಗ ಆಲ್‌ ಪಾರ್ಟಿಸಿಪಂಟ್ಸ್‌ ಅಥವಾ ಓನ್ಲಿ ಅಡ್ಮಿನ್ಸ್‌ ಎಂಬ ಎರಡು ಆಯ್ಕೆಗಳಿರುತ್ತವೆ. ಓನ್ಲಿ ಅಡ್ಮಿನ್ಸ್‌ ಎಂಬ ಆಯ್ಕೆ ಕ್ಲಿಕ್‌ ಮಾಡಿದರೆ ಸದಸ್ಯರಿಗೆ ಸಂದೇಶ ಕಳುಹಿಸುವ ಅಧಿಕಾರವೇ ಇರುವುದಿಲ್ಲ. ಅಡ್ಮಿನ್‌ಗಳು ಹಾಕಿದ್ದನ್ನಷ್ಟೇ ವೀಕ್ಷಿಸಬಹುದಾಗಿರುತ್ತದೆ. ಇದರಲ್ಲೇ ಗ್ರೂಪ್‌ ಅಡ್ಮಿನ್‌ಗಳನ್ನು ಎಡಿಟ್‌ ಮಾಡುವ, ಗ್ರೂಪ್‌ನ ವಿಷಯ, ಐಕಾನ್‌, ಮತ್ತಿತರೆ ವಿವರಗಳನ್ನು ಬದಲಿಸುವ ಅಧಿಕಾರವನ್ನು ಗ್ರೂಪ್‌ ಅಡ್ಮಿನ್‌ಗಳಿಗಷ್ಟೇ ಸೀಮಿತಗೊಳಿಸುವ ಆಯ್ಕೆಯೂ ಇದೆ.

ಈ ಹೊಸ ಅಪ್‌ಡೇಟ್‌ ಮಾಡಿಕೊಂಡರೆ, ವಾಟ್ಸ್‌ಆ್ಯಪ್‌ನಲ್ಲಿ ಒಂದು ನಿರ್ದಿಷ್ಟಗ್ರೂಪ್‌ ಸೃಷ್ಟಿಮಾಡಿದವರನ್ನು ಇತರ ಅಡ್ಮಿನ್‌ಗಳು ತೆಗೆದುಹಾಕಲು ಬಾರದಂತಹ ಸೌಲಭ್ಯ ಕಲ್ಪಿಸಲಾಗಿದೆ.

click me!