ಕೈಗೆಟಕುವ ಬೆಲೆಯ ಹೊಸ HP ಲ್ಯಾಪ್ ಟಾಪ್ ಮಾರುಕಟ್ಟೆಗೆ

By Web Desk  |  First Published Aug 30, 2019, 4:08 PM IST

ಇಲೆಕ್ಟ್ರಾನಿಕ್ಸ್ ಲೋಕದ ದಿಗ್ಗಜ HP ಯಿಂದ ಮಾರುಕಟ್ಟೆಗೆ ಹೊಸ ಲ್ಯಾಪ್ ಟಾಪ್;  ಕ್ರೋಮ್‌ಬುಕ್‌ 14 ಸೀರಿಸ್ ಭಾರತದಲ್ಲಿ ಬಿಡುಗಡೆ; 2 ಬಣ್ಣಗಳಲ್ಲಿ ಲಭ್ಯ


ಇಂಟೆಲ್‌ ಅಪೋಲೋ ಲೇಕ್‌ ಡ್ಯೂಯಲ್‌ ಕೋರ್‌ ಪ್ರೊಸೆಸರ್‌ ಇರುವ HPಯ ಹೊಸ ಕ್ರೋಮ್‌ಬುಕ್‌ 14 ಲ್ಯಾಪ್‌ಟಾಪ್‌ ಬಿಡುಗಡೆಯಾಗಿದೆ. 

ಈ ಲ್ಯಾಪ್‌ಟಾಪ್‌ 14 ಇಂಚಿನ ಎಚ್‌ಡಿ ಅಲ್ಟ್ರಾ-ಬ್ರೈಟ್‌ ಟಚ್‌ಸ್ಕ್ರೀನ್‌  ಡಿಸ್‌ಪ್ಲೇ ಹೊಂದಿದೆ. 64 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್‌ ಹಾಗೂ 100 ಜಿಬಿ ಗೂಗಲ್‌ ಕ್ಲೌಡ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

Tap to resize

Latest Videos

undefined

47 Watt-hrಗಳಷ್ಟು ದೀರ್ಘ ಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಕ್ರೋಮ್‌ಬುಕ್‌ 14 ಸೀರಿಸ್ ಹೊಂದಿದೆ ಎಂದು ಕಂಪನಿಯು ಹೇಳಿದೆ.

ಇದನ್ನೂ ಓದಿ | HPಯಿಂದ 3 ಹೊಸ ಮಾದರಿಯ ಪ್ರಿಂಟರ್; ಮೊಬೈಲ್‌ನಿಂದಲೇ ಎಲ್ಲಾ ಕಂಟ್ರೋಲ್!

ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಇರುವ ಈ ಲ್ಯಾಪ್‌ಟಾಪ್ ಒಂದು ಮಿಲಿಯನ್ ಆ್ಯಂಡ್ರಾಯಿಡ್ ಆ್ಯಪ್ ಗಳಿಗೆ ಪೂರಕವಾಗಿದೆ. 

HP ಇ-ಸ್ಟೋರ್ ನ ಹೊರತಾಗಿ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲೂ ಈ ಲ್ಯಾಪ್‌ಟಾಪ್ ಖರೀದಿಗೆ ಲಭ್ಯವಿದೆ.

ಚಾಕ್‌ಬೋರ್ಡ್‌ ಗ್ರೇ, ಸ್ನೋವೈಟ್‌ ಈ ಎರಡು ಬಣ್ಣಗಳಲ್ಲಿ ಲ್ಯಾಪ್ ಟಾಪ್ ಲಭ್ಯವಿದ್ದು, ಇದರ ಆರಂಭಿಕ ಬೆಲೆ 23,900 ಆಗಿದೆ.

click me!