ವಾಟ್ಸಾಪ್ ಸ್ಟೇಟಸ್‌ನಲ್ಲಿ ಲೊಕೇಶನ್ ಸ್ಟಿಕ್ಕರ್‌ ಸೇರಿಸುವುದು ಹೇಗೆ?

Published : Apr 24, 2022, 01:12 PM ISTUpdated : Apr 24, 2022, 01:13 PM IST
ವಾಟ್ಸಾಪ್ ಸ್ಟೇಟಸ್‌ನಲ್ಲಿ ಲೊಕೇಶನ್ ಸ್ಟಿಕ್ಕರ್‌  ಸೇರಿಸುವುದು ಹೇಗೆ?

ಸಾರಾಂಶ

ಲೊಕೇಶನ್ ಸ್ಟಿಕ್ಕರ್‌ಗಳು ನಿಮ್ಮ ವಾಟ್ಸಾಪ್ ಸ್ಟೇಟಸ್‌ಗೆ ನಿಮ್ಮ ಸ್ಥಳದೊಂದಿಗೆ ಸ್ಟಿಕ್ಕರನ್ನು ಸೇರಿಸಲು ಅನುಮತಿಸುತ್ತದೆ.

Whatsapp Location Sticker: ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಬೀಟಾ ಅಪ್‌ಡೇಟನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಹೊಸ ಬೀಟಾ ಅಪ್‌ಡೇಟ್ ಅಪ್ಲಿಕೇಶನ್‌ನ ಆವೃತ್ತಿಯನ್ನು 2.22.10.7 ಗೆ ತರುತ್ತದೆ. ಬೀಟಾ ನವೀಕರಣವು ಮರುವಿನ್ಯಾಸಗೊಳಿಸಲಾದ ಲೊಕೇಶನ್‌  ಸ್ಟಿಕ್ಕರ್‌ ನೀಡಲಾಗಿದೆ ಎಂದು ವರದಿ ಹೇಳಿದೆ. ನಿಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ನಿಮ್ಮ ಸ್ಥಳದೊಂದಿಗೆ ಸ್ಟಿಕ್ಕರನ್ನು ಸೇರಿಸಲು ಲೋಕೇಶನ್ ಸ್ಟಿಕ್ಕರ್ ನಿಮಗೆ ಅನುಮತಿಸುತ್ತದೆ. ಈ ಸ್ಟೀಕ್ಕರ್ ಇನ್ಸ್ಟಾಗ್ರಾಮ್‌  ಸ್ಟಿಕ್ಕರನ್ನು ಹೋಲುತ್ತದೆ.

ನೀವು ಹಂಚಿಕೊಳ್ಳಲು ಬಯಸುವ ಸ್ಟೇಟಸ್ ಅವಲಂಬಿಸಿ, ನಕ್ಷೆಯಿಂದ (Map) ನಿಮ್ಮ ಪ್ರಸ್ತುತ ಸ್ಥಳ ಅಥವಾ ಇನ್ನೊಂದು ಸ್ಥಳವನ್ನು ಸೇರಿಸಲು ನೀವು ಸ್ಟಿಕ್ಕರ್‌ಗಳನ್ನು ಬಳಸಬಹುದು. ನಿಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಸ್ಥಳವನ್ನು ಹೇಗೆ ಸೇರಿಸುವುದು ಎಂಬುದನ್ನು ತಿಳಿಯಲು ನೀವು ಈ ಹಂತಗಳನ್ನು ಅನುಸರಿಸಬಹುದು.

ವಾಟ್ಸಾಪ್‌ ಸ್ಟೀಕ್ಕರ್‌ ಸೇರಿಸುವುದು ಹೇಗೆ?

  • ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ.‌
  • ಈಗ ಹೋಮ್ ಸ್ಕ್ರೀನ್‌ನಲ್ಲಿ, ಬಲಕ್ಕೆ ಸ್ವೈಪ್ ಮಾಡಿ ಮತ್ತು ಸ್ಟೇಟಸ್ ವಿಭಾಗಕ್ಕೆ ಹೋಗಿ. ಸ್ವೈಪ್ ಮಾಡಿದ ನಂತರ ಈ ವಿಂಡೋವನ್ನು ಪ್ರವೇಶಿಸಲು ಐಫೋನ್ ಬಳಕೆದಾರರು ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ.‌
  • ಈಗ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು, ನೀವು ಅಪ್ಲಿಕೇಶನ್‌ನಲ್ಲಿ ನೀಡಲಾದ ಕ್ಯಾಮೆರಾವನ್ನು ಬಳಸಬೇಕಾಗುತ್ತದೆ. ಗ್ಯಾಲರಿಯಿಂದ ಫೈಲನ್ನು ಹಂಚಿಕೊಳ್ಳುವ ಆಯ್ಕೆಯನ್ನು ಸಹ ನೀವು ಆಯ್ಕೆ ಮಾಡಬಹುದು.
  • ಈಗ ಎಡಿಟಿಂಗ್ ವಿಂಡೋದಲ್ಲಿ, ಪರದೆಯ ಮೇಲ್ಭಾಗದಲ್ಲಿರುವ ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ
  • ಕಂಟೆಂಟ್ ಸ್ಟಿಕ್ಕರ್‌ಗಳ ಅಡಿಯಲ್ಲಿ, ಗಡಿಯಾರದ ಪಕ್ಕದಲ್ಲಿರುವ ಸ್ಟಿಕ್ಕರನ್ನು ಟ್ಯಾಪ್ ಮಾಡಿ
  • ಈಗ ನೀವು ನಿಮ್ಮ ಪ್ರಸ್ತುತ ಸ್ಥಳವನ್ನು ಆಯ್ಕೆ ಮಾಡಬಹುದು ಅಥವಾ ಸರ್ಚ್‌ ಬಾರ್‌ನಲ್ಲಿ ಸ್ಥಳವನ್ನು ನಮೂದಿಸುವ ಮೂಲಕ ನೀವು ಹುಡುಕಬಹುದು
  • ನೀವು ಆಯ್ಕೆ ಮಾಡಿದ ಸ್ಥಳದೊಂದಿಗೆ ಸ್ಟಿಕ್ಕರ್ ಈಗ ನಿಮ್ಮ ಸ್ಟೇಟಸ್‌ನಲ್ಲಿ ಗೋಚರಿಸುತ್ತದೆ. 
  • ವಿನ್ಯಾಸವನ್ನು ಬದಲಾಯಿಸಲು ನೀವು ಅದರ ಮೇಲೆ ಟ್ಯಾಪ್ ಮಾಡಬಹುದು ಮತ್ತು ನೀವು ಅದನ್ನು ಇತರ ಯಾವುದೇ ಸ್ಟಿಕ್ಕರ್‌ನಂತೆ ಬಳಸಬಹುದು
  • ಈ ಪ್ರಕ್ರಿಯೆ ಮುಗಿದ ನಂತರ, ನಿಮ್ಮ ಸ್ಟೇಟಸನ್ನು ನೀವು ಹಂಚಿಕೊಳ್ಳಬಹುದು

ಇದನ್ನೂ ಓದಿ: ಲಾಸ್ಟ್‌ ಸೀನ್‌, ಪ್ರೊಫೈಲ್‌ ಫೋಟೋ ಹೈಡ್‌ ಮಾಡಲು ಬರ್ತಿದೆ ಜಬರದಸ್ತ್‌ ಫೀಚರ್‌

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​