ಹಳೆ mAadhaar ಆ್ಯಪ್‌ಗೆ ಗುಡ್‌ಬೈ, ಹೊಸ ಫೀಚರ್‌ಗಳೊಂದಿಗೆ ಬಂತು ಹೊಸ ಆಧಾರ್ ಆ್ಯಪ್!

Published : May 26, 2026, 05:34 PM IST
Aadhaar App

ಸಾರಾಂಶ

ಕೇಂದ್ರ ಸರ್ಕಾರವು ಹಳೆಯ 'mAadhaar' ಆ್ಯಪ್ ಅನ್ನು ಸ್ಥಗಿತಗೊಳಿಸಿ, ಹೊಸ ಆಧಾರ್ ಆ್ಯಪ್ ಅನ್ನು ಪರಿಚಯಿಸಿದೆ. ಈ ಹೊಸ ಆ್ಯಪ್, QR ಕೋಡ್, ಫೇಸ್ ಅಥೆಂಟಿಕೇಶನ್‌ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ಮತ್ತು ಸುರಕ್ಷತೆಯನ್ನು ನೀಡುತ್ತದೆ.

ನವದೆಹಲಿ: ಭಾರತದ ಆಧಾರ್ ಸೇವೆಗಳಲ್ಲಿ ಕೇಂದ್ರ ಸರ್ಕಾರ ಒಂದು ದೊಡ್ಡ ಬದಲಾವಣೆ ತಂದಿದೆ. ಹಳೆಯ 'mAadhaar' ಆ್ಯಪ್ ಅನ್ನು ಶೀಘ್ರದಲ್ಲೇ ನಿಲ್ಲಿಸುವುದಾಗಿ ಸರ್ಕಾರ ಘೋಷಿಸಿದೆ. ಇದರ ಬದಲಿಗೆ, ಹೆಚ್ಚು ಸುರಕ್ಷತೆ ಮತ್ತು ಹೊಸ ಸೌಲಭ್ಯಗಳಿರುವ ಹೊಸ ಆಧಾರ್ ಆ್ಯಪ್ ಅನ್ನು ಪರಿಚಯಿಸಲಾಗಿದೆ. ದೇಶದ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವುದು ಈ ಬದಲಾವಣೆಯ ಉದ್ದೇಶ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತಿಳಿಸಿದೆ.

mAadhaar ಶೀಘ್ರದಲ್ಲೇ ಬಂದ್ ಆಗಲಿದೆ

ತನ್ನ ಅಧಿಕೃತ 'X' ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ UIDAI, ಹಳೆಯ mAadhaar ಆ್ಯಪ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ. 'ಹೊಸ ಆಧಾರ್ ಆ್ಯಪ್ ಡೌನ್‌ಲೋಡ್ ಮಾಡಿ, ವೇಗದ ಸೇವೆಗಳು ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಬಳಸಿ' ಎಂದು UIDAI ಜನರಿಗೆ ತಿಳಿಸಿದೆ. ಇದು ಕೇವಲ ಹಳೆಯ ಆ್ಯಪ್‌ನ ಅಪ್‌ಡೇಟ್ ಅಲ್ಲ, ಬದಲಿಗೆ ಆಧಾರ್ ಮಾಹಿತಿ ಹಂಚಿಕೊಳ್ಳುವ ಮತ್ತು ದೃಢೀಕರಿಸುವ ವಿಧಾನದಲ್ಲೇ ದೊಡ್ಡ ಬದಲಾವಣೆ ತರಲಿದೆ.

 

ಹೊಸ ಆ್ಯಪ್‌ನಲ್ಲಿರುವ ಪ್ರಮುಖ ಫೀಚರ್ ಅಂದ್ರೆ, ಸುರಕ್ಷಿತ QR ಕೋಡ್ ಮೂಲಕ ಆಧಾರ್ ಮಾಹಿತಿ ಹಂಚಿಕೊಳ್ಳುವುದು. ಇನ್ಮುಂದೆ ಹೋಟೆಲ್‌, ಆಸ್ಪತ್ರೆ, ಸರ್ಕಾರಿ ಕಚೇರಿಗಳಂತಹ ಕಡೆಗಳಲ್ಲಿ ಪೂರ್ತಿ ಆಧಾರ್ ವಿವರಗಳನ್ನು ತೋರಿಸಬೇಕಾಗಿಲ್ಲ. ಬದಲಿಗೆ, QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕೇವಲ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಸುರಕ್ಷಿತವಾಗಿ ಹಂಚಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಆಧಾರ್ ಆ್ಯಪ್‌ನಲ್ಲಿವೆ ಬೊಂಬಾಟ್ ಫೀಚರ್‌ಗಳು

ಅಷ್ಟೇ ಅಲ್ಲ, ಆಧಾರ್ ದೃಢೀಕರಣ ವ್ಯವಸ್ಥೆಯನ್ನೂ ಇನ್ನಷ್ಟು ಬಲಪಡಿಸಲಾಗಿದೆ. ಮೊದಲು ಕೇವಲ OTP ಆಧಾರಿತ ದೃಢೀಕರಣ ಮಾತ್ರ ಇತ್ತು. ಈಗ OTP ಜೊತೆಗೆ ಫೇಸ್ ಅಥೆಂಟಿಕೇಶನ್ ಮತ್ತು QR ಕೋಡ್ ಪರಿಶೀಲನೆಯಂತಹ ಮಲ್ಟಿ-ಲೇಯರ್ ಸುರಕ್ಷತಾ ವ್ಯವಸ್ಥೆಯನ್ನು ತರಲಾಗಿದೆ. ಇದರಿಂದ ನಕಲಿ ಬಳಕೆ ಮತ್ತು ಡೇಟಾ ಸೋರಿಕೆಯನ್ನು ತಡೆಯಬಹುದು ಎಂದು UIDAI ಹೇಳಿದೆ. ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳ ಮೇಲೆ ಹೆಚ್ಚಿನ ಹಿಡಿತ ಸಾಧಿಸಬಹುದು. ಅಂದರೆ, ಬೆರಳಚ್ಚು, ಮುಖ ಮತ್ತು ಕಣ್ಣಿನ ಪಾಪೆಯ (ಐರಿಸ್) ವಿವರಗಳನ್ನು ಆ್ಯಪ್‌ನಲ್ಲೇ ನೇರವಾಗಿ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಬೇರೆಯವರ ಡಿವೈಸ್‌ಗಳಲ್ಲಿ ಆಧಾರ್ ಬಳಸುವಾಗ ಇದು ಹೆಚ್ಚಿನ ಸುರಕ್ಷತೆ ನೀಡುತ್ತದೆ.

ಈ ಹೊಸ ಆ್ಯಪ್ ಬಳಸಲು, ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಅಧಿಕೃತ 'Aadhaar App' ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ, ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ OTP ಮೂಲಕ ವೆರಿಫೈ ಮಾಡಬೇಕು. ಕೆಲವರಿಗೆ ಫೇಸ್ ಅಥೆಂಟಿಕೇಶನ್ ಕೂಡ ಕಡ್ಡಾಯವಾಗಿರಬಹುದು. ಬಳಿಕ, ಒಂದು ಪಿನ್ ನಂಬರ್ ಸೆಟ್ ಮಾಡಿ, ನಿಮ್ಮ ಆಧಾರ್ ನಂಬರ್ ಸೇರಿಸಿದರೆ ರಿಜಿಸ್ಟ್ರೇಷನ್ ಪೂರ್ಣಗೊಳ್ಳುತ್ತದೆ. ಇದಲ್ಲದೆ, 'My Aadhaar' ಪೋರ್ಟಲ್ ಮೂಲಕ ಉಚಿತವಾಗಿ ಆಧಾರ್ ದಾಖಲೆಗಳನ್ನು ಅಪ್‌ಡೇಟ್ ಮಾಡಲು ಇದ್ದ ಗಡುವನ್ನು ಸರ್ಕಾರ 2027ರ ಜೂನ್ 14ರವರೆಗೆ ವಿಸ್ತರಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಇದು ದೇಶದಲ್ಲೇ ಮೊದಲು, ಪೊಲೀಸರಿಂದ AI ಭಾಷಾಂತರ ಮೊಬೈಲ್ ಆ್ಯಪ್ ಬಿಡುಗಡೆ, ಠಾಣೆಯಲ್ಲಿ ಇನ್ನು ಮಾತು ಮೌನವಾಗದು!
ಮತ್ತೆ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ಖರೀದಿಗೆ ಭಾರತ ಸಜ್ಜು, ಭಾರತದಲ್ಲೇ 90 ವಿಮಾನ ನಿರ್ಮಾಣ