ಸರ್ಕಾರದಿಂದ BSNLಗೆ ₹6 ಸಾವಿರ ಕೋಟಿ, ಇನ್ಮುಂದೆ 365 ದಿನ ವ್ಯಾಲಿಡಿಟಿಗೆ ಕೇವಲ ಇಷ್ಟೇ ಕೊಡೋದು!

By Mahmad Rafik  |  First Published Sep 4, 2024, 1:50 PM IST

ಕೇಂದ್ರ ಸರ್ಕಾರವು BSNL ಗೆ 4G ನೆಟ್‌ವರ್ಕ್‌ಗಾಗಿ ₹6,000 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಈ ಹೂಡಿಕೆಯು BSNL ಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ನವದೆಹಲಿ: ಕೇಂದ್ರ ಸರ್ಕಾರ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಗೆ 4G ನೆಟ್‌ವರ್ಕ್‌ ಸೌಲಭ್ಯಕ್ಕಾಗಿ 6,000 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಘೋಷಣೆ ಮಾಡಲಿದೆ. 4G ನೆಟ್‌ವರ್ಕ್ ಅಳವಡಿಕೆ ಬೇಕಾಗುವ ಅತ್ಯಾಧುನಿಕ ಸಾಮಾಗ್ರಿಗಳ ಖರೀದಿಗಾಗಿ ಕೇಂದ್ರವೇ ಆಂತರಿಕ ಬಂಡವಾಳ ಹೂಡಿಕೆ  ಮಾಡಿದೆ. ಈ ಮೂಲಕ ಗ್ರಾಹಕರನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಬಿಎಸ್‌ಎನ್‌ಎಲ್‌ಗೆ ಸಹಾಯವಾಗಲಿದೆ. 4G ನೆಟ್‌ವರ್ಕ್‌ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ ಬಿಎಸ್‌ಎನ್‌ಎಲ್ ಹೊಸ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ದೂರಸಂಚಾರ ವಿಭಾಗ (DoT) ಶೀಘ್ರದಲ್ಲಿಯೇ ಈ ಆಂತರಿಕ ಹೂಡಿಕೆಗೆ ಸಂಬಂಧಿಸಿದಂತೆ ಸಂಪುಟದಿಂದ ಒಪ್ಪಿಗೆ ಪಡೆಯಲಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಬಿಎಸ್‌ಎನ್‌ಎಲ್  1,00,000 4ಜಿ ಸೈಟ್‌ಗಳಿಗಾಗಿ 19,000 ಕೋಟಿ ರೂಪಾಯಿ ಮುಂಗಡ ಖರೀದಿ ಆದೇಶ ನೀಡಿತ್ತು. ಇದೀಗ ವಾಸ್ತವಿಕ ಖರೀದಿಯ ಆದೇಶ ನೀಡಿದ್ದು, ಇದು 13,000 ಕೋಟಿಗೆ ನೀಡಲಾಗಿದೆ. ಇದೀಗ ಸರ್ಕಾರ 6,000 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. 

Tap to resize

Latest Videos

undefined

ಸರ್ಕಾರ 2019 ರಿಂದ BSNL ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL Mahanagar Telephone Nigam Ltd) ಅನ್ನು ಸ್ವಾಧೀನಪಡಿಸಿಕೊಂಡಿದೆ. ಮೂರು ಪುನರುಜ್ಜೀವನ ಪ್ಯಾಕೇಜ್‌ಗಳ ಅಡಿಯಲ್ಲಿ ಸರ್ಕಾರ ₹ 3.22 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಪ್ಯಾಕೇಜ್‌ಗಳಿಂದಾಗಿ BSNL ಮತ್ತು MTNL ಆರ್ಥಿಕ ವರ್ಷ 2021ರಿಂದ ಕಾರ್ಯಾಚರಣೆಯ ಲಾಭವನ್ನು ಗಳಿಸಲು ಪ್ರಾರಂಭಿಸಿವೆ. ಸದ್ಯ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ನಿಧಾನಗತಿಯಲ್ಲಿ ಕಾರ್ಯರೂಪಕ್ಕೆ ತರುತ್ತಿದೆ. ಸದ್ಯ ಜೂನ್ 2024ಕ್ಕೆ ಟಿಲಿಕಾಂ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್‌ ಪಾಲು ಶೇ.7.33ರಷ್ಟಿದೆ. ಡಿಸೆಂಬರ್ 2020ರಲ್ಲಿ ಬಿಎಸ್‌ಎನ್‌ಎಲ್ ಶೇ.10.72ರಷ್ಟು ಪಾಲುದಾರಿಕೆಯನ್ನು ಹೊಂದಿತ್ತು. ಖಾಸಗಿ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಶೇ.40.71ರಷ್ಟು, ಏರ್‌ಟೆಲ್ ಶೇ.33.71ರಷ್ಟು ಬಳಕೆದಾರರನ್ನು ಹೊಂದಿದೆ. 

ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ CDoT-TCS ಸ್ಟಾಕ್ ಆಧಾರದ ಮೇಲೆ 4G ನೆಟ್‌ವರ್ಕ್ ಅನ್ನು ರೋಲ್‌ಔಟ್ ಮಾಡಲು ಸರ್ಕಾರವು BSNLಗೆ ನಿರ್ದೇಶನ ನೀಡಿತ್ತು. ಆದರೆ ಈ ಸ್ಥಳೀಯ ಸ್ಟಾಕ್‌ನ ಪರೀಕ್ಷಾ ಪ್ರಕ್ರಿಯೆಯಿಂದಾಗಿ 4G ನೆಟ್‌ವರ್ಕ್ ಸೇವೆ ವಿಳಂಬವಾಗುತ್ತಿದೆ. ಆದ್ರೆ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಮೂರು ಕಂಪನಿಗಳು ಒಂದಕ್ಕಿಂತ ಒಂದರಂತೆ ಸ್ಮಾರ್ಟ್‌ ಆಫರ್‌ಗಳನ್ನು ಗ್ರಾಹಕರಿಗೆ ನೀಡುತ್ತಿವೆ. 

ರಿಲಯನ್ಸ್ ಜಿಯೋಗೆ ಬಿಗ್ ಶಾಕ್ ಕೊಟ್ಟ ಬಿಎಸ್‌ಎನ್‌ಎಲ್‌; ಅಗ್ಗದ ರೀಚಾರ್ಜ್ ಪ್ಲಾನ್‌ ಘೋಷಣೆ

ಬಿಎಸ್‌ಎನ್‌ಎಲ್ ರೀಚಾರ್ಜ್ ಪ್ಲಾನ್‌ಗಳು
1. ₹399 ಪ್ಲಾನ್:
80 ದಿನ ವ್ಯಾಲಿಡಿಟಿ, ಪ್ರತಿದಿನ 1 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು
2. ₹499 ಪ್ಲಾನ್: 90 ದಿನ ವ್ಯಾಲಿಡಿಟಿ, ಪ್ರತಿದಿನ 1.5 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, Zing ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ
3. ₹997 ಪ್ಲಾನ್ : 180 ದಿನ ವ್ಯಾಲಿಡಿಟಿ, ಪ್ರತಿದಿನ 3 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, PRBT (ವೈಯಕ್ತಿಕ ರಿಂಗ್ ಬ್ಯಾಕ್ ಟೋನ್)
4. ₹1,999 ಪ್ಲಾನ್: 365 ದಿನ ವ್ಯಾಲಿಡಿಟಿ, ಪ್ರತಿದಿನ 2 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, ಉಚಿತ ಸ್ಥಳೀಯ ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳು
5. ₹2,399 ಪ್ಲಾನ್: 365 ದಿನ ವ್ಯಾಲಿಡಿಟಿ, ಪ್ರತಿದಿನ 3 GB ಡೇಟಾ ಮತ್ತು 100 ಎಸ್‌ಎಂಎಸ್, ಅನಿಯಮಿತ ಸ್ಥಳೀಯ/STD ಕರೆಗಳು, ಉಚಿತ PRBT, BSNL ಟ್ಯೂನ್‌ಗಳಿಗೆ ಉಚಿತ ಚಂದಾದಾರಿಕೆ.

ಕೇವಲ 1 ರೂ ನಿಂದ Vi ಆಟಕ್ಕೆ ಬ್ರೇಕ್ ಹಾಕಿದ ಜಿಯೋ: ಕೈ-ಕೈ ಹಿಸುಕಿಕೊಂಡ ಏರ್‌ಟೆಲ್‌ ಗ್ರಾಹಕರು!

click me!