ಅಪ್ಲಿಕೇಶನ್ ಸ್ಟೋರ್‌ನಲ್ಲಿ ಕೆಲವು ಹಳೆಯ ಅಪ್ಲಿಕೇಶನ್‌ಗಳಿದ್ದು, ಇವು ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರದ ಕಾರಣ ಬಳಕೆದಾರರು ಡೌನ್‌ಲೋಡ್ ಮಾಡಬಾರದು ಎಂದು ಗೂಗಲ್ ಹೇಳಿದೆ.
Google Hiding Outdated Apps: ಗೂಗಲ್ ಪ್ಲೇ ಸ್ಟೋರ್ (Google Play Store) ಪ್ರಸ್ತುತ ಲಕ್ಷಾಂತರ ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಪ್ರತಿನಿತ್ಯ ನೂರಾರು ಹೊಸ ಅಪ್ಲಿಕೇಶನ್‌ಗಳು ಸೇರ್ಪಡೆಯಾಗುತ್ತವೆ. ಗೇಮಿಂಗ್, ಎಜುಕೆಶನ್, ವಿಡಿಯೀ ಸ್ಟ್ರೀಮಿಂಗ್, ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಸೇರಿದಂತೆ ವಿವಿಧ ಮೊಬೈಲ್ ಬಳಕೆದಾರರ ವಿವಿಧ ಬೇಡಿಕೆಗಳನ್ನು ಪೂರೈಸುವ ಲಕ್ಷಾಂತರ ಅಪ್ಲಿಕೆಶನ್‌ಗಳು ಪ್ಲೇ ಸ್ಟೋರ್‌ನಲ್ಲಿವೆ. ಅಪ್ಲಿಕೇಶನ್ ಡೆವಲಪರ್ಸ್ ಬಳಕೆದಾರರಿಗೆ ಹೊಸ ಅನುಭವ ನೀಡಲು ಕಾಲಕಾಲಕ್ಕೆ ತಮ್ಮ ಆಪ್‌ಗಳನ್ನು ಅಪ್ಡೇಟ್ ಮಾಡುತ್ತಾರೆ. ಆದರೆ ಕೆಲ ಆಪ್‌ಗಳು ಬಿಡುಗಡೆಯಾದ ಬಳಿಕ ತಟಸ್ಥವಾಗಿ ಬಿಡುತ್ತವೆ.
ಇಂಥಹ ಅಪ್ಡೇಟ್ ಪಡೆಯದ ಅಪ್ಲಿಕೇಶನ್‌ಗಳಿಗೆ ಸರ್ಚ್ ದೈತ್ಯ ಗೂಗಲ್ ಈಗ ಚಾಟಿ ಬೀಸಲು ಸಿದ್ಧವಾಗಿದೆ. ಅಪ್ಲಿಕೇಶನ್ ಸ್ಟೋರ್‌ನಲ್ಲಿ ಕೆಲವು ಹಳೆಯ ಅಪ್ಲಿಕೇಶನ್‌ಗಳಿದ್ದು, ಇವು ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರದ ಕಾರಣ ಬಳಕೆದಾರರು ಡೌನ್‌ಲೋಡ್ ಮಾಡಬಾರದು ಎಂದು ಗೂಗಲ್ ಹೇಳಿದೆ. ಹಾಗಾಗಿ, ಪ್ಲೇ ಸ್ಟೋರ್‌ನ ಸುರಕ್ಷತಾ ಮಾನದಂಡಗಳಿಗೆ ಹೊಂದಿಕೆಯಾಗದ ಮತ್ತು ಹಳೆಯದಾದ ಅಪ್ಲಿಕೇಶನ್‌ಗಳನ್ನು ಶೀಘ್ರದಲ್ಲೇ ಮರೆಮಾಡಲು ಪ್ರಾರಂಭಿಸುವುದಾಗಿ ಟೆಕ್ ದೈತ್ಯ ಗೂಗಲ್ ಘೋಷಿಸಿದೆ.
undefined
ಇದನ್ನೂ ಓದಿ: ಗೂಗಲ್ ಮ್ಯಾಪ್ಸ್ ಜಬರ್ದಸ್ತ್ ಫೀಚರ್ ಶೀಘ್ರದಲ್ಲೇ ಬಿಡುಗಡೆ: ಪ್ರಯಾಣಕ್ಕೂ ಮುನ್ನವೇ ಟೋಲ್ ಶುಲ್ಕ ಮಾಹಿತಿ!
3.5 ಮಿಲಿಯನ್ ಅಪ್ಲಿಕೇಶನ್: ಸ್ಟ್ಯಾಟಿಸ್ಟಾದ (Statista) ವರದಿಯು ಗೂಗಲ್ ಪ್ಲೇ ಸ್ಟೋರ್ 3.5 ಮಿಲಿಯನ್ ಅಪ್ಲಿಕೇಶನ್‌ಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ. ಹೀಗಾಗಿ ಇವುಗಳಲ್ಲಿ ಹಲವಾರು ಹಳೆಯ ಅಪ್ಲಿಕೇಶನ್‌ಗಳು ಇರಬಹುದು. ಹಳತಾದ ಅಪ್ಲಿಕೇಶನ್‌ಗಳು ಅಷ್ಟು ಹಾನಿಕಾರಕವಲ್ಲವಾದರೂ, ಆಂಡ್ರಾಯ್ಡ್ ಬಳಕೆದಾರರು ಸುರಕ್ಷಿತ ಅನುಭವವನ್ನು ಹೊಂದಬೇಕೆಂದು ಗೂಗಲ್ ಬಯಸುತ್ತದೆ. ಹಾಗಾಗಿ, ನವೆಂಬರ್‌ನಲ್ಲಿ ಹೊಸ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಕಂಪನಿ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ.
ಯಾರೆಲ್ಲ ಡೌನ್‌ಲೋಡ್ ಮಾಡಬಹುದು? ವರ್ಷದ ಅಂತ್ಯದ ವೇಳೆಗೆ ಈ ಬದಲಾವಣೆಗಳನ್ನು ಮಾಡಲಾಗುವುದು ಎಂದು ಗೂಗಲ್ ತಿಳಿಸಿದೆ. ಆದರೆ ನಿಮ್ಮ ಫೋನ್‌ನಲ್ಲಿ ನೀವು ಹೊಂದಿರುವ ಹಳೆಯ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಕಳೆದುಕೊಳ್ಳುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಗೂಗಲ್ ಇದೀಗ ಅಪ್ಲಿಕೇಶನ್‌ಗಳನ್ನು ಮರೆಮಾಡಲು ನಿರ್ಧರಿಸಿದೆ, ಇದರರ್ಥ ಮೂಲಭೂತವಾಗಿ ನೀವು ಸರ್ಚ್ ಮಾಡಿದ ತಕ್ಷಣವೇ ಅವು ಗೋಚರಿಸುವುದಿಲ್ಲ ಮತ್ತು ಅವುಗಳನ್ನು ಪಡೆಯಲು ಪ್ಲೇ ಸ್ಟೋರ್‌ನಲ್ಲಿ ಸ್ವಲ್ಪ ಕಷ್ಟಪಟ್ಟು ಹುಡುಕಬೇಕಾಗಬಹುದು.
ನೀವು ನಿರ್ದಿಷ್ಟ ಅಪ್ಲಿಕೇಶನನ್ನು ತೆಗೆದುಹಾಕಿದ ಬಳಿಕ ಮತ್ತು ಕೆಲವು ಕಾರಣಗಳಿಗಾಗಿ ಅದನ್ನು ಮರು-ಸ್ಥಾಪಿಸಲು ನಿರ್ಧರಿಸಿದರೂ ಸಹ, ನೀವು ಅದನ್ನು ಇನ್ನೂ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಆದರೆ, ಗೂಗಲ್ ಹಳೆಯದು ಎಂದು ಪರಿಗಣಿಸುವ ಅಪ್ಲಿಕೇಶನನ್ನು ನೀವು ಎಂದಿಗೂ ಬಳಸದಿದ್ದರೆ, ಅಂದರೆ ಮೊದಲ ಬಾರಿಗೆ ಡೌನ್‌ಲೋಡ್ ಮಾಡುತ್ತಿದ್ದರೆ ನೀವು ಅದನ್ನು ಪ್ಲೇ ಸ್ಟೋರ್‌ನಲ್ಲಿ ಹುಡುಕುವುದು ಕಷ್ಟವಾಗಬಹುದು ಅದು ಆ ಅಪ್‌ಗಳು ಡೌನ್‌ಲೋಡ್ ಮಾಡಲು ಸಾಧ್ಯವಾಗದಿರಬಹುದು.
ಕಾರಣವೇನು?: “ನವೆಂಬರ್ 1, 2022 ರಿಂದ, ಇತ್ತೀಚಿನ ಪ್ರಮುಖ ಆಂಡ್ರಾಯ್ಡ್ ಬಿಡುಗಡೆ ಆವೃತ್ತಿಯ ಎರಡು ವರ್ಷಗಳಲ್ಲಿ API ಮಟ್ಟವನ್ನು ಗುರಿಯಾಗಿಸಿಕೊಳ್ಳದ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳು, API ಮಟ್ಟಕ್ಕಿಂತ ಹೆಚ್ಚಿನ Android OS ಆವೃತ್ತಿಗಳನ್ನು ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಸ ಬಳಕೆದಾರರಿಗೆ ಪ್ಲೇ ಸ್ಟೋರ್‌ನಲ್ಲಿ ಸರ್ಚ್ ಮಾಡಲು ಅಥವಾ ಸ್ಥಾಪನೆಗೆ ಲಭ್ಯವಿರುವುದಿಲ್ಲ.” ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಇದನ್ನೂ ಓದಿ: Android 13 ಹೊಸ ವೈಶಿಷ್ಟ್ಯ: ಒಂದೇ eSIMನಲ್ಲಿ ಎರಡು ಮೊಬೈಲ್ ನಂಬರ್ಸ್?
ಅಂದರೆ ಇತ್ತೀಚಿನ ಪ್ರಮುಖ ಆಂಡ್ರಾಯ್ಡ್ ಬಿಡುಗಡೆ ಆವೃತ್ತಿಯ ಎರಡು ವರ್ಷಗಳಲ್ಲಿ API ಮಟ್ಟವನ್ನು ಗುರಿಯಾಗಿಸಿಕೊಳ್ಳದ ಪ್ಲೇ ಸ್ಟೋರ್‌ನಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಈ ಹೊಸ ನೀತಿಯ ಬದಲಾವಣೆಯಿಂದ ಪ್ರಭಾವಿತವಾಗಿತ್ತವೆ ಎಂದು ಗೂಗಲ್ ತಿಳಿಸಿದೆ.
ಸರಳವಾಗಿ ಹೇಳುವುದಾದರೆ, Android 10 ಅಥವಾ ಹಳೆಯ ಆವೃತ್ತಿಗಳನ್ನು ಗುರಿಪಡಿಸುವ ಅಪ್ಲಿಕೇಶನ್‌ಗಳು ಅನ್ವೇಷಿಸಲು ಸಾಧ್ಯವಿಲ್ಲ ಅಥವಾ ಹೊಸ ಬಳಕೆದಾರರಿಗೆ ಸ್ಥಾಪನೆಗೆ ಲಭ್ಯವಿರುವುದಿಲ್ಲ.
"ಬಳಕೆದಾರರಿಗೆ ಸುರಕ್ಷಿತ ಅನುಭವವನ್ನು ಒದಗಿಸಲು ಕೇಂದ್ರವಾಗಿರುವ ಗೂಗಲ ಪ್ಲೇ ವೈಶಿಷ್ಟ್ಯಗಳು ಮತ್ತು ನೀತಿಗಳ ಜೊತೆಗೆ, ಪ್ರತಿ Android OS ಅಪ್‌ಡೇಟ್ ಗೌಪ್ಯತೆ, ಭದ್ರತೆ ಮತ್ತು ಬಳಕೆದಾರರ ಅನುಭವದ ಸುಧಾರಣೆಗಳನ್ನು ತರುತ್ತದೆ. ಈ ಪ್ರಗತಿಗಳ ಸಂಪೂರ್ಣ ಪ್ರಯೋಜನಗಳನ್ನು ಬಳಕೆದಾರರು ಅರಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು - ಹೊಸ Android ಆವೃತ್ತಿಗಳಲ್ಲಿ ಅವರ ಅಪ್ಲಿಕೇಶನ್‌ಗಳು ಮನಬಂದಂತೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಡೆವಲಪರ್‌ಗಳೊಂದಿಗೆ ಸಹಕರಿಸುತ್ತೇವೆ" ಎಂದು ಗೂಗಲ್ ಹೇಳಿದೆ.