Realme 9 4G 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದ್ದು, 8GB ಯ RAM ನೊಂದಿಗೆ ಜೋಡಿಸಲಾಗಿದೆ
Realme 9 4G Launch: Realme 9 4G Launch ಭಾರತದಲ್ಲಿ ಗುರುವಾರ, ಏಪ್ರಿಲ್ 7 ರಂದು ಬಿಡುಗಡೆ ಮಾಡಲಾಗಿದೆ. Realme 9i, Realme 9 5G, Realme 9 5G ಸ್ಪೀಡ್ ಆವೃತ್ತಿ, Realme 9 Pro 5G, ಮತ್ತು Realme 9 Pro+ 5G ಒಳಗೊಂಡಿರುವ Realme 9 ಸ್ಮಾರ್ಟ್‌ಫೋನ್ ಸರಣಿಗೆ ಕಂಪನಿಯ ಇತ್ತೀಚಿನ ಸೇರ್ಪಡೆಯಾಗಿ ಈ ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. Realme 9 4G 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದ್ದು, 8GB ಯ RAM ನೊಂದಿಗೆ ಜೋಡಿಸಲಾಗಿದೆ.
Realme 9 4G ಜೊತೆಗೆ, ಕಂಪನಿಯು Realme Book Prime, Realme Buds Air 2 ಟ್ರು ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳು, Realme Smart TV Stick ಹಾಗೂ Realme GT 2 Pro ಭಾರತದಲ್ಲಿ ಬಿಡುಗಡೆ ಮಾಡಿದೆ.
undefined
ಭಾರತದಲ್ಲಿ Realme 9 4G ಬೆಲೆ, ಲಭ್ಯತೆ: Realme 9 4G ಬೆಲೆ 6GB + 128GB RAM ಮತ್ತು ಸ್ಟೋರೇಜ್ ಮಾದರಿಗೆ ರೂ.17,999 ನಿಂದ ಪ್ರಾರಂಭವಾಗುತ್ತದೆ. 8GB + 128GB ಸ್ಟೋರೇಜ್ ರೂಪಾಂತರ ರೂ. 18,999 ಬೆಲೆಯಲ್ಲಿ ಲಭ್ಯವಿದೆ.
ಸ್ಮಾರ್ಟ್‌ಫೋನ್ ಪರಿಚಯಾತ್ಮಕ ಕೊಡುಗಡೆಯಾಗಿ ಮೊದಲ ಮಾರಾಟದ ಸಮಯದಲ್ಲಿ 6GB + 128GB ಮತ್ತು 8GB + 128GB ಸಂಗ್ರಹಣೆ ಆಯ್ಕೆಗಳು ಕ್ರಮವಾಗಿ ರೂ. 15,999 ಮತ್ತು ರೂ. 16,999 ಬೆಲೆಯಲ್ಲಿ ಲಭ್ಯವಿರಲಿದ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Realme GT 2 Pro ಫ್ಲ್ಯಾಗ್ ಶಿಪ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?
ಹ್ಯಾಂಡ್ಸೆಟ್ Meteor Black, Stargaze White, Sunburst Gold, ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು Realme.com, ಫ್ಲಿಪ್‌ಕಾರ್ಟ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಏಪ್ರಿಲ್ 12 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. HDFC ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ 2,000 ತ್ವರಿತ ರಿಯಾಯಿತಿ ಕೂಡ ಇರಲಿದೆ.
Realme 9 4G ಫೀಚರ್ಸ್: Realme 9 4G ಆಂಡ್ರಾಯ್ಡ್ 12 ಆಧಾರಿತ Realme UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.4-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಹೊಂದಿದೆ.
ಇದು ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದ್ದು, 8GB ಯ RAM ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ ಬಳಕೆಯಾಗದ ಶೇಖರಣಾ ಸ್ಥಳವನ್ನು ಬಳಸಿಕೊಂಡು 5GB ವರೆಗೆ ಡೈನಾಮಿಕ್ ರ‍್ಯಾಮ್ ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ಓದಿ: ಶವೊಮಿ, ಓಪ್ಪೋ, ರಿಯಲ್‌ಮಿ ಸೇರಿ ಏಪ್ರಿಲ್‌ನಲ್ಲಿ ಯಾವೆಲ್ಲ ಫೋನ್ ಲಾಂಚ್?
ಕ್ಯಾಮೆರಾ ಯಾವುದು?: Realme 9 4G f/1.75 ಅಪರ್ಚರ್ ಲೆನ್ಸ್‌ನೊಂದಿಗೆ 108-ಮೆಗಾಪಿಕ್ಸೆಲ್ Samsung ISOCELL HM6 ಪ್ರಾಥಮಿಕ ಕ್ಯಾಮೆರಾ, f/2.2 ಅಪರ್ಚರ್ ಲೆನ್ಸ್ ಜತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. Realme 9 4G ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ f/2.45 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ.
Realme 9 4G 128GB ವರೆಗೆ ಅಂತರ್ಗತ UFS 2.1 ಸಂಗ್ರಹಣೆಯನ್ನು ನೀಡುತ್ತದೆ, ಇದನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.1, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಹ್ಯಾಂಡ್‌ಸೆಟ್ 33W ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಸ್ಮಾರ್ಟ್ಫೋನ್ 160.2x73.3x7.99 ಅಳತೆ ಮತ್ತು 178g ತೂಗುತ್ತದೆ.