ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

By Web Desk  |  First Published Jul 19, 2019, 7:34 PM IST

ಎಷ್ಟೆಂದರೂ ನಮ್ಮ ಸಮಾಜದಲ್ಲಿ ಪೋರ್ನ್ ಚಿತ್ರ ವೀಕ್ಷಣೆ ಈಗಲೂ ಕೆಟ್ಟ ವಿಚಾರ. ಇಂತಹ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಖಾಸಗಿಯಾಗಿಯೂ, ಏಕಾಂತದಲ್ಲೂ ವೀಕ್ಷಿಸುವಾಗ ಮುಖಮುಚ್ಚಿ (ಗುರುತು ಸಿಗದಂತೆ) ನೋಡೋದು ಸಾಮಾನ್ಯ. ಆದರೆ.... 


ಛೀ, ಪೋರ್ನ್ ವಿಡಿಯೋ ನೋಡೋದು ಬೇರೆಯವ್ರಿಗೆ ಗೊತ್ತಾದ್ರೆ ಹೇಗೆ? ವ್ಯಕ್ತಿಗಳಿಗಲ್ಲ ಬಿಡಿ, ನಿಮ್ಮ ಡಿಜಿಟಲ್ ಹೆಜ್ಜೆಗುರುತನ್ನು ಕರಾರುವಕ್ಕಾಗಿ ದಾಖಲಿಸುವ ಗೂಗಲ್, ಫೇಸ್ಬುಕ್‌ಗಳಂಥ ಕಂಪನಿಗಳ ಬಗ್ಗೆ ಈ ವಿಚಾರ!

ನೀವು ಸ್ವಲ್ಪ ‘ಡಿಜಿಟಲ್’ ಬುದ್ಧಿವಂತರಾಗಿದ್ದರೆ, ‘ಅದೇನ್ ಮಹಾ, ಇನ್‌ಕಾಗ್ನಿಟೋ ಮೋಡ್ ಇದೆಯಲ್ವಾ, ಅದ್ರಲ್ಲಿ ನೋಡಿದರಾಯ್ತು’ ಎಂದು ಭಾವಿಸಿರಬಹುದು. ಅಲ್ಲೇ ಇರೋದು ಸಮಸ್ಯೆ!

Tap to resize

Latest Videos

ಇಂಟರ್ನೆಟ್ ಬಳಸಬೇಕಾದರೆ ಸಾಮಾನ್ಯವಾಗಿ ಮೈಕ್ರೋಸಾಫ್ಟ್‌ನ ಕ್ರೋಮ್, ಮೊಝಿಲ್ಲಾದ ಫೈರ್‌ಫಾಕ್ಸ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಇನ್ನಿತರ ಬ್ರೌಸರ್ ಮೂಲಕ ಪ್ರವೇಶಿಸಬೇಕು. ಈ ಬ್ರೌಸರ್‌ಗಳು ನಿಮ್ಮ ಇ-ಮೇಲ್ ಖಾತೆಯೊಂದಿಗೆ ಸಂಯೋಜಿತವಾಗಿರುವುದರಿಂದ, ನಿಮ್ಮ ಪ್ರತಿ ಇಂಟರ್ನೆಟ್ ಚಟುವಟಿಕೆಗಳು ದಾಖಲಾಗುತ್ತವೆ/ ದಾಖಲಿಸಲಾಗುತ್ತದೆ. ಅದಕ್ಕೆಂದೇ ಲಭ್ಯವಿರುವ ‘ಇನ್‌ಕಾಗ್ನಿಟೋ’ ಎಂಬ ಮೋಡ್ ಮೂಲಕ ಇಂಟರ್ನೆಟ್ ಬಳಸಿದರೆ ನಿಮ್ಮ ಗುರುತು ರಹಸ್ಯವಾಗಿರುತ್ತದೆ, ಹಾಗೂ ನಿಮ್ಮ ಚಟುವಟಿಕೆಗಳು ಟ್ರ್ಯಾಕ್ ಆಗಲ್ಲ, ಬ್ರೌಸಿಂಗ್ ಹಿಸ್ಟರಿ ಕೂಡಾ ಸ್ಟೋರ್ ಆಗಲ್ಲ.

ಆದರೆ....       

ಮೈಕ್ರೋಸಾಫ್ಟ್, ಕಾರ್ನೆಗಿ ಮೆಲ್ಲನ್ ವಿವಿ ಮತ್ತು ಪೆನಿಸಿಲ್ವೇನಿಯಾ ವಿವಿ ಜಂಟಿಯಾಗಿ ನಡೆಸಿರುವ ಅಧ್ಯಯನವು ಶಾಕಿಂಗ್ ಮಾಹಿತಿಗಳನ್ನು ಹೊರಹಾಕಿದೆ.

ನೀವು ಇನ್‌ಕಾಗ್ನಿಟೋ ಮೋಡ್‌ನಲ್ಲಿ ಪೋರ್ನ್ ನೋಡುವಷ್ಟು ಬುದ್ಧಿವಂತರಾಗಿದ್ರೆ, ಅಲ್ಲಿ ಗೂಗಲ್‌ನಂತಹ ಕಂಪನಿಗಳಲ್ಲಿ ಇನ್ನೂ ಹೆಚ್ಚಿನ ಬುದ್ಧಿವಂತರಿದ್ದಾರೆ! ಇನ್‌ಕಾಗ್ನಿಟೋ ಮೋಡ್‌ನಲ್ಲಿಯೂ ನಿಮ್ಮ ಪೋರ್ನ್ ವೀಕ್ಷಣೆ ಅಭ್ಯಾಸ ಟ್ರ್ಯಾಕ್ ಮಾಡಲಾಗುತ್ತದೆ, ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.  ಪ್ರಮುಖ ಇಂಟರ್ನೆಟ್ ಕಂಪನಿಗಳಾದ ಗೂಗಲ್, ಫೇಸ್ಬುಕ್‌ ಮತ್ತಿತರ ದೊಡ್ಡ ದೊಡ್ಡ ಕಂಪನಿಗಳು ನಿಮ್ಮ ಬ್ರೌಸಿಂಗ್ ಪರಿಪಾಠಗಳನ್ನು ಟ್ರ್ಯಾಕ್ ಮಾಡುತ್ತವೆ ಎಂದು ವರದಿಯು ಹೇಳಿದೆ.

ಅದಲ್ಲದೇ, ಅಧ್ಯಯನ ನಡೆಸಲಾದ 22484 ಪೋರ್ನ್ ವೆಬ್‌ಸೈಟ್‌ಗಳ ಪೈಕಿ ಶೇ. 93 ವೆಬ್ ಸೈಟ್‌ಗಳು ಬಳಕೆದಾರರ ಮಾಹಿತಿಯನ್ನು ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಸೋರಿಕೆ ಮಾಡುತ್ತವೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದೆ.

click me!