ಜಿಮೇಲ್ ಬಳಸುವವರೇ ಹುಷಾರ್..! ಹೊಸ ಆನ್'ಲೈನ್ ಸ್ಕ್ಯಾಮ್'ಗೆ ಬಲಿಯಾಗದಿರಿ

Published : Jan 20, 2017, 03:32 PM ISTUpdated : Apr 11, 2018, 01:07 PM IST
ಜಿಮೇಲ್ ಬಳಸುವವರೇ ಹುಷಾರ್..! ಹೊಸ ಆನ್'ಲೈನ್ ಸ್ಕ್ಯಾಮ್'ಗೆ ಬಲಿಯಾಗದಿರಿ

ಸಾರಾಂಶ

ತಾಂತ್ರಿಕವಾಗಿ ಪಕ್ವವಾದ ಪರಿಣಿತರೂ ಕೂಡ ಬಲೆ ಬೀಳುವಷ್ಟು ಬುದ್ಧಿವಂತಿಕೆಯಿಂದ ವಂಚಕ ಜಾಲವನ್ನು ಸೃಷ್ಟಿಸಲಾಗಿದೆ.

ನವದೆಹಲಿ(ಜ. 20): ಆನ್'ಲೈನ್'ನಲ್ಲಿ ಹ್ಯಾಕರ್'ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು ವಂಚಕರು ಈಗಲೂ ಮಾಡುತ್ತಿದ್ದಾರೆ. ಇದೀಗ ಸರ್ವೇಸಾಮಾನ್ಯವಾಗಿ ಬಳಕೆಯಾಗುವ ಜಿ-ಮೇಲ್'ನಲ್ಲಿ ಹೊಸ ವಂಚನೆಯ ಟ್ರಿಕ್'ವೊಂದು ಜಾರಿಯಲ್ಲಿದೆ. ವರ್ಡ್'ಫೆನ್ಸ್ ಎಂಬ ಆನ್'ಲೈನ್ ಸೆಕ್ಯೂರಿಟಿ ಸಂಸ್ಥೆಯು ಜಿಮೇಲ್'ಗೆ ಆವರಿಸಿರುವ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ತಾಂತ್ರಿಕವಾಗಿ ಪಕ್ವವಾದ ಪರಿಣಿತರೂ ಕೂಡ ಬಲೆ ಬೀಳುವಷ್ಟು ಬುದ್ಧಿವಂತಿಕೆಯಿಂದ ವಂಚಕ ಜಾಲವನ್ನು ಸೃಷ್ಟಿಸಲಾಗಿದೆ.

ಏನಿದು ಜಿಮೇಲ್ ವಂಚನೆ?
* ನಿಮಗೆ ಗೊತ್ತಿರುವ ವ್ಯಕ್ತಿಯೊಬ್ಬರಿಂದ ನಿಮ್ಮ ಜಿಮೇಲ್'ಗೆ ಮೇಲ್ ಬರಬಹುದು.
* ನಿಮಗೆ ಗೊತ್ತಿರುವ ಇಮೇಜ್ ಅಥವಾ ಅಟ್ಯಾಚ್'ಮೆಂಟ್ ಆ ವ್ಯಕ್ತಿ ಕಳುಹಿಸಿರುವ ಮೇಲ್'ನಲ್ಲಿರಬಹುದು. ನೀವು ಈ ಮೊದಲು ಆ ವ್ಯಕ್ತಿಗೆ ಕಳುಹಿಸಿದ್ದ ಇಮೇಜ್ ಅದಾಗಿದ್ದರೂ ಇರಬಹುದು. ಒಟ್ಟಿನಲ್ಲಿ ನಿಮಗೆ ಅನುಮಾನ ಬರಬಾರದ ರೀತಿಯಲ್ಲಿ ಇಮೇಜ್ ಅಥವಾ ಅಟ್ಯಾಚ್ಮೆಂಟ್ ಇರುತ್ತದೆ.
* ನೀವು ಆ ಇಮೇಜ್ ಅಥವಾ ಅಟ್ಯಾಚ್ಮೆಂಟ್ ಕ್ಲಿಕ್ ಮಾಡಿದರೆ ಅದು ಹೊಸ ಟ್ಯಾಬ್'ನಲ್ಲಿ ಓಪನ್ ಆಗುತ್ತದೆ.
* ಆ ಹೊಸ ಟ್ಯಾಬ್'ನಲ್ಲಿ ನೀವು ಜಿಮೇಲ್'ಗೆ ಮತ್ತೊಮ್ಮೆ ಸೈನ್-ಇನ್ ಆಗಬೇಕಾಗುತ್ತದೆ.
* ನೀವು ಸೈನ್-ಇನ್ ಮಾಡಿದ್ದೇ ಆದಲ್ಲಿ ಹ್ಯಾಕರ್ ಬಲೆಗೆ ಬಿದ್ದಂತೆಯೇ.
* ನೀವು ಬಲೆಗೆ ಬಿದ್ದು ಅಕೌಂಟ್ ಹ್ಯಾಕ್ ಆದರೆ, ನಿಮ್ಮ ಜಿಮೇಲ್ ಕಾಂಟ್ಯಾಕ್ಸ್'ಗಳೆಲ್ಲರಿಗೂ ನಿಮಗಾದ ರೀತಿಯಲ್ಲೇ ವಂಚನೆಯಾಗಬಹುದು.

ರಕ್ಷಣೆಗೆ ಏನು ಮಾಡಬೇಕು?
* ಬ್ರೌಸರ್'ನಲ್ಲಿ ಯಾವಾಗಲೂ ಲೊಕೇಶನ್ ಬಾರ್ ಚೆಕ್ ಮಾಡಿರಿ.
* ಪ್ರೋಟೋಕಾಲನ್ನು ಯಾವಾಗಲೂ ವೆರಿಫೈ ಮಾಡಿ
* ಜಿಮೇಲ್'ನಿಂದ ಅಟ್ಯಾಚ್ಮೆಂಟ್ ಕ್ಲಿಕ್ ಮಾಡಿ ಓಪನ್ ಆದ ಟ್ಯಾಬ್'ನಲ್ಲಿ "https://accounts.google.com" ಕಾಣುತ್ತಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
* "https://"ಗೆ ಮುಂಚೆ ಏನೂ ಬರಬಾರದು.
* ಜಿಮೇಲ್'ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿ. ಎರಡು ಸುತ್ತಿನ ಅಥೆಂಟಿಕೇಶನ್ ಪಾಸ್ವರ್ಡ್ ಆ್ಯಕ್ಟಿವೇಟ್ ಮಾಡಿರಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Animal Facts: ಪ್ರಾಣಿಗಳ ಕುರಿತು ಈ ರಹಸ್ಯ ಮಾಹಿತಿ ಕೇಳಿದ್ರೆ ಶಾಕ್ ಆಗೋದು ಖಚಿತಾ!
ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ