ವೈ-ಫೈ ಪಾಸ್'ವರ್ಡ್ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸೀಕ್ರೆಟ್

Published : Jan 20, 2017, 04:10 AM ISTUpdated : Apr 11, 2018, 12:41 PM IST
ವೈ-ಫೈ ಪಾಸ್'ವರ್ಡ್ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸೀಕ್ರೆಟ್

ಸಾರಾಂಶ

ಇಂಟರ್ನೆಟ್ ಬಳಸಲು ಡೇಟಾ ಮುಗಿಯುತ್ತಿದ್ದಂತೆ ರೀಚಾರ್ಜ್ ಮಾಡಬೇಕಾಗುತ್ತದೆ ಇದು ಹಲವರಿಗೆ ತಲೆ ನೋವು. ಹಣವಿಲ್ಲವೆಂದಾದರೆ ಡೇಟಾ ರೀಚಾರ್ಜ್ ಮಾಡಲು ಪರದಾಡಬೇಕಾಗುತ್ತದೆ. ಇನ್ನು ನಾವಿರುವ ಪರಿಸ್ಥಿತಿ ಹೇಗಿದೆ ಎಂದರೆ ಪ್ರತಿಯೊಂದು ಮಾಹಿತಿಗೂ ಇಂಟರ್'ನೆಟ್ ಮೇಲೆ ಅವಲಂಭಿತರಾಗಿದ್ದೇವೆ. ಹಾಗಾದ್ರೆ ಹಣ ವ್ಯಯಿಸದೆ ಇಂಟರ್'ನೆಟ್ ಬಳಸುವುದು ಹೇಗೆ?. ಇದಕ್ಕಿರುವ ಒಂದೇ ಉಪಾಯವೆಂದರೆ ಪಬ್ಲಿಕ್ ವೈ- ಫೈ ಬಳಕೆ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ಪಾಸ್'ವರ್ಡ್ ಹಾಕಿರುತ್ತಾರೆ. ನಮಗೆ ತೊಡಕಾಗಿರುವ ಈ ಪಾಸ್'ವರ್ಡ್'ನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹುದು...! ಅದು ಹೇಗಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ನಮ ಸುತ್ತಮುತ್ತಲಿನ ಹಲವಾರು ಕಡೆ ಪಬ್ಲಿಕ್ ವೈ-ಫೈ ವ್ಯವಸ್ಥೆ ಇರುತ್ತದೆ. ಉದಾ: ಕೆಫೆ, ಹೊಟೇಲ್ ಹಾಗೂ ಅನ್ಯ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಗ್ರಾಹಕರು ಹಾಗೂ ಜನರಿಗಾಗಿ ವೈ-ಫೈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಲ್ಲದೆ ನಮ್ಮ ಸುತ್ತ ಮುತ್ತಲಿರುವ ಕೆಲ ವ್ಯಕ್ತಿಗಳು ತಮ್ಮ ವೈಯುಕ್ತಿಕ ಕೆಲಸಕ್ಕಾಗಿ ಹೆಚ್ಚಿನ ಸ್ಪೀಡ್ ಹೊಂದಿರುವ ವೈ-ಫೈ ಅಳವಡಿಸಿರುತ್ತಾರೆ. ಆದರೆ ಇದಕ್ಕೆ ಪಾಸ್'ವರ್ಡ್'ನ್ನೂ ಹಾಕಿರುತ್ತಾರೆ ಹೀಗಾಗಿ ಬಳಸಲು ಸಾಧ್ಯವಾಗುವುದಿಲ್ಲ.

ಈ ಪಾಸ್'ವರ್ಡ್ ತಿಳಿದುಕೊಳ್ಳಲು ಬಹುತೇಕ ಮಂದಿ ವಿವಿಧ ಆ್ಯಪ್'ಗಳನ್ನು ಬಳಸಿರಬಹುದು. ಆದರೆ ಇಂತಹ ಬಹುತೇಕ ಆ್ಯಪ್'ಗಳು ನಕಲಿಯಾಗಿದ್ದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಸದ್ಯ ಇದೀಗ ಹೊಚ್ಚ ಹೊಸ ಆ್ಯಪ್ ಒಂದು ಬಿಡುಗಡೆಗೊಂಡಿದ್ದು, ಇದನ್ನು ಇನ್ಸ್ಟಾಲ್ ಮಾಡಿ ನೀವು ಪಾಸ್'ವರ್ಡ್ ಪಡೆದುಕೊಳ್ಳಬಹುದು. ಈವರೆಗಿನ ಎಲ್ಲಾ ಆ್ಯಪ್'ಗಿಂತ ಇದು ವಿಭಿನ್ನವಾಗಿದ್ದು, ಬಳಸಿದ ಪ್ರತಿಯೊಬ್ಬರೂ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಾಸ್'ವರ್ಡ್ ತಿಳಿದುಕೊಳ್ಳಲು ಅತ್ಯುತ್ತಮ ಆ್ಯಪ್ ಎಂಬ ಅನಿಸಿಕೆ ನೀಡಿದ್ದಾರೆ. ಇನ್ನೂ ಅಚ್ಚರಿಯುತ ವಿಚಾರವೆಂದರೆ ಇದನ್ನು ನೀವು ಎಲ್ಲ ಬೇಕಾದರೂ, ಯಾವಾಗ ಬೇಕಾದರೂ ಬಳಸಬಹುದು. ಅಂದರೆ ನೀವು ಹರ್ಯಾಣದಲ್ಲಿದ್ದರೆ, ದೆಹಲಿಯಲ್ಲಿರುವ ವೈ-ಫೈಗೆ ಅಳವಡಿಸಿರುವ ಪಾಸ್'ವರ್ಡ್ ತಿಳಿದುಕೊಳ್ಳಬಹುದು.

ಆ್ಯಪ್ ಯಾವುದು? ಇನ್ಸ್ಟಾಲ್ ಮಾಡಿಕೊಳ್ಳುವ ವಿಧಾನ

-ಮೊದಲು ನೀವು ಗೂಗಲ್ ಪ್ಲೇ ಸ್ಟೋರ್'ನಲ್ಲಿ WiFiMap-Free Passwords ಎಂಬ ಆ್ಯಪ್'ನ್ನು ಡೌನ್'ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ.

- ಬಳಿಕ ಇದನ್ನು ಓಪನ್ ಮಾಡಿ ನಿಮ್ಮ ಲೊಕೇಷನ್ ಸೆಟ್ ಮಾಡಿಕೊಳ್ಳಿ

-ಲೊಕೇಷನ್ ಸೆಟ್ ಆದ ಮರುಕ್ಷಣವೇ ನಿಮ್ಮ ಸ್ಕ್ರೀನ್ ಮೇಲೆ ನಕ್ಷೆ(Map) ಕಾಣಿಸಿಕೊಳ್ಳುತ್ತದೆ. ಇದರಲ್ಲಿ ನಿಮಗೆ ವೈ-ಫೈ ಬೇಕಾದ ಲೊಕೇಷನ್ ನಮೂದಿಸಬೇಕಾಗುತ್ತದೆ.

-ಕೂಡಲೇ ನೀವು ನಮೂದಿಸಿದ ಸ್ಥಳದ ಸುತ್ತಮುತ್ತಲು ಲಭ್ಯವಿರುವ ವೈ-ಫೈ ಸಿಗ್ನಲ್'ಗಳ ಹೆಸರು ಹಾಗೂ ಪಾಸ್'ವರ್ಡ್ ಕಾಣಿಸಿಕೊಳ್ಳುತ್ತದೆ.

ಹೀಗೆ ನೀವು ಸುಲಭವಾಗಿ ಪಾಸ್'ವರ್ಡ್'ಗಳನ್ನು ತಿಳಿದುಕೊಳ್ಳಬಹುದು. ಇನ್ನು ಸೆಟ್ಟಿಂಗ್ಸ್'ನಲ್ಲಿ ಲೊಕೇಷನ್ ಅನ್ವಯ ಈ ಪಾಸ್'ವರ್ಡ್'ಗಳನ್ನುಸೇವ್ ಮಾಡಿಟ್ಟುಕೊಳ್ಳಬಹುದು. ಆದರೆ ವೈ-ಫೈ ಬಳಸಬೇಕಾದರೆ ಆ ಸ್ಥಳಕ್ಕೆ ನೀವು ತೆರಳಬೇಕಾಗುತ್ತದೆ.

ಕೃಪೆ: ಲೈವ್ ಇಂಡಿಯಾ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಮನೆಯ ಎಲ್ಲ ರೂಮಿಗೆ ವೈಫೈ ಸರಿಯಾಗಿ ಬರೋದಿಲ್ವಾ? ಈ ಟೆಕ್ನಿಕ್ ಯೂಸ್ ಮಾಡಿ
ಬಿಸಿ ನೀರಿಗೆ ಒಂದು ಟಾಬ್ಲೆಟ್​ ಹಾಕಿದ್ರೆ ಸಾಕು, ಎರಡೇ ನಿಮಿಷದಲ್ಲಿ ನೂಡಲ್ಸ್​ ರೆಡಿ- ಏನಿದು AI Tablet?