ಘಿಬ್ಲಿ ಇಮೇಜ್ ಟ್ರೆಂಡ್‌: ನೀವೂ ಘಿಬ್ಲಿ ಇಮೇಜ್ ಮಾಡಬೇಕಾ? ಇಲ್ಲಿದೆ ನೋಡಿ ಹಂತ, ಹಂತದ ಮಾಹಿತಿ!

Published : Apr 02, 2025, 08:30 AM ISTUpdated : Apr 02, 2025, 09:01 AM IST
ಘಿಬ್ಲಿ ಇಮೇಜ್ ಟ್ರೆಂಡ್‌: ನೀವೂ ಘಿಬ್ಲಿ ಇಮೇಜ್ ಮಾಡಬೇಕಾ? ಇಲ್ಲಿದೆ ನೋಡಿ ಹಂತ, ಹಂತದ ಮಾಹಿತಿ!

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಘಿಬ್ಲಿ ಶೈಲಿಯ ಚಿತ್ರಗಳು ಟ್ರೆಂಡ್ ಆಗಿವೆ. ಚಾಟ್‌ಜಿಪಿಟಿ ತಂತ್ರಜ್ಞಾನ ಬಳಸಿ, ಬಳಕೆದಾರರು ತಮ್ಮ ಫೋಟೋಗಳನ್ನು ಕಾರ್ಟೂನ್ ಶೈಲಿಗೆ ಪರಿವರ್ತಿಸಬಹುದು. ಪ್ರಧಾನಿ ಮೋದಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಈ ಶೈಲಿಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಾಟ್‌ಜಿಪಿಟಿ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ, ಚಿತ್ರ ಅಪ್‌ಲೋಡ್ ಮಾಡಿ, ಘಿಬ್ಲಿ ಶೈಲಿಗೆ ಪರಿವರ್ತಿಸಲು ಸೂಚನೆ ನೀಡುವ ಮೂಲಕ ಈ ಚಿತ್ರಗಳನ್ನು ರಚಿಸಬಹುದು.

ಸಾಮಾಜಿಕ ಜಾಲತಾಣಲ್ಲಿ ಭಾರೀ ಟ್ರೆಂಡ್ ಸೃಷ್ಟಿ ಮಾಡಿರುವ ಘಿಬ್ಲಿ ಇಮೇಜ್ ಸೃಷ್ಟಿ ಮಾಡುವುದು ಹೇಗೆ? ನೀವು ಕೂಡ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಿ ಅದನ್ನು ಕಾರ್ಟೂನ್ ಸ್ಟೈಲ್‌ನಲ್ಲಿ ಬರುವಂತೆ ಚಿತ್ರವನ್ನು ವಾಪಸ್ ಪಡೆಯಬಹುದು. ಇದೀಗ ಬಹುತೇಕ ಸಾಮಾಜಿಕ ಜಾಲತಾಣ ಬಳಕೆದಾರರು ಘಿಬ್ಲಿ ಇಮೇಜ್ ಬಳಸಿ ತಮ್ಮ ಫೋಟೋಗಳಿಗೆ ಹೊಸ ರೂಪವನ್ನು ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಕೊಳ್ಳುತ್ತಿದ್ದಾರೆ.

ಇದೀಗ ಅಂತರ್ಜಾಲ ತಾಣದಲ್ಲಿ ಘಿಬ್ಲಿ ಸ್ಟೈಲ್ (Ghibli Trend) ಇಮೇಜ್ ಧೂಳೆಬ್ಬಿಸುತ್ತಿದ್ದು, ಇದೇ ಟ್ರೆಂಡಿಂಗ್‌ನಲ್ಲಿರುವ ಚರ್ಚಿತ ವಿಷಯವಾಗಿದೆ. ಸಾಮಾಜಿಕ ಜಾಲತಾಣ ಬಳಸುವ ಬಹುತೇಕರು ಘಿಬ್ಲಿ ಶೈಲಿಯ ಇಮೇಜ್ ರಚೊಸುತ್ತಿದ್ದಾರೆ. ಈ ಘಿಬ್ಲಿ ಇಮೇಜ್ ಎನ್ನುವುದು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅತಿಹೆಚ್ಚು ಬಳಕೆಯಾಗುತ್ತಿರುವ ChatGPTಯ ಒಂದು ಸಹ ತಂತ್ರಜ್ಞಾನ ಆಗಿದೆ. ಚಾಟ್ ಜಿಪಿಟಿಯ ಹೊಸ ಇಮೇಜ್ ಸೃಷ್ಟಿ ತನ್ನ ಎಲ್ಲ ಬಳಕೆದಾರರಿಗೆ ಹೊಸ ಅನುಭವನ್ನು ನೀಡಿದೆ. ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಬಹುತೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಫೋಟೋಗಳು ತಮ್ಮ ಘಿಬ್ಲಿ ಇಮೇಜ್ ಸೃಷ್ಟಿಸಿ ಹಂಚಿಕೊಳ್ಳುತ್ತಿರುವುದು ಭಾರೀ ವೈರಲ್ ಆಗುವುದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್

ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಸ್ಟುಡಿಯೋ ಘಿಬ್ಲಿ ಶೈಲಿಯ ಭಾವಚಿತ್ರಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಧಾನಿ ಮೋದಿ ಕೂಡ ತಮ್ಮ ಘಿಬ್ಲಿ-ಪ್ರೇರಿತ ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಸರ್ಕಾರದ MyGov ವೆಬ್‌ಸೈಟ್‌ನಿಂದ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಮೋದಿ ಹಾಗೂ ಟ್ರಂಪ್‌ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ, ನರೇಂದ್ರ ಮೋದಿ ಅವರು ಚೀತಾ ಮರಿಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುವ ಫೋಟೋ ಕೂಡ ಇದೆ.

ಜಗತ್ತಿನ ಕ್ರಿಕೆಟ್ ದೇವರು ಎಂದು ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಫೋಟೋಗಳನ್ನು ಘಿಬ್ಲಿ ಇಮೇಜ್ ಆಗಿ ಸೃಷ್ಟಿಸಿಕೊಂಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ 2011ರ ಐಸಿಸಿ ವಿಶ್ವಕಪ್ ಗೆಲುವು ಪಡೆದ ಹಾಗೂ ಟ್ರೋಫಿ ಎತ್ತಿಹಿಡಿದ ಫೋಟೋವನ್ನು ಘಿಬ್ಲಿ ಇಮೇಜ್ ಆಗಿ ಮರುಸೃಷ್ಟಿ ಮಾಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಒಂದು ಚಿತ್ರಗಳನ್ನು ತಮ್ಮ ತಂಡದ ಸದಸ್ಯರು ಸಂಭ್ರಮಾಚರಣೆಯಲ್ಲಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಹಾಗೂ ಮತ್ತೊಂದು ವಿಶ್ವಕಪ್ ಎತ್ತಿ ಹಿಡಿದಿರುವ ಫೋಟೋವನ್ನು ಘಿಬ್ಲಿ ಇಮೇಜ್ ಮಾಡಿದ್ದಾರೆ.

ಘಿಬ್ಲಿ ಇಮೇಜ್ ಕ್ರಿಯೇಟ್‌ ಮಾಡುವುದು ಹೇಗೆ?
GPT-4o ನಿಂದ ನಡೆಸಲ್ಪಡುವ OpenAI ನ ChatGPT, ಬಳಕೆದಾರರಿಗೆ ಇಷ್ಟವಾಗುವ ಚಿತ್ರಗಳನ್ನು ರಚಿಸಲು ಅನುವು ಮಾಡಿಕೊಡುವ AI ಇಮೇಜ್ ಜನರೇಟರ್ ಈ ಘಿಬ್ಲಿ ಇಮೇಜ್ ಆಗಿದೆ. ಇದು ಹಣ ಪಾವತಿಸಿದ ಚಂದಾದಾರರಿಗೆ ಲಭ್ಯವಿದ್ದರೂ, ಲಾಗಿನ್ ಆದ ಬಳಕೆದಾರರು ಈ ಹಂತಗಳನ್ನು ಅನುಸರಿಸುವ ಮೂಲಕ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋ ಸೃಷ್ಟಿಸಬಹುದು.

ಇದನ್ನೂ ಓದಿ: ಘಿಬ್ಲಿ ಕಲಾ ಚಿತ್ರ ಬಿಡಿಸಬೇಕಾ? ChatGPT 4o ಮೂಲಕ ಅದ್ಭುತ AI ಇಮೇಜ್ ರಚಿಸಿ

ಘಿಬ್ಲಿ ಇಮೇಜ್ ಸೃಷ್ಟಿಯ ಹಂತಗಳು:
1. ChatGPT ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಮಾಡಿ. 
ಇಮೇಜ್ ಜನರೇಷನ್ ವೈಶಿಷ್ಟ್ಯಕ್ಕೆ ನೀವು ಪ್ರವೇಶವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ (ಪ್ರಸ್ತುತ ಪ್ರೀಮಿಯಂ ಬಳಕೆದಾರರಿಗೆ GPT-40 ನಲ್ಲಿ ಲಭ್ಯವಿದೆ).
2. ನೀವು ರೂಪಾಂತರಗೊಳಿಸಲು ಬಯಸುವ ಯಾವುದೇ ಚಿತ್ರವಿದ್ದರೆ, ಅದನ್ನು ಇಮೇಜ್ ಟೂಲ್ ಬಳಸಿ ಅಪ್‌ಲೋಡ್ ಮಾಡಿ. 
3. ಸ್ಟುಡಿಯೋ ಘಿಬಿ ಶೈಲಿಯಲ್ಲಿ ಚಿತ್ರವನ್ನು ರಚಿಸಲು ChatGPT ಗೆ ಸೂಚನೆ ನೀಡುವ ಪ್ರಾಂಪ್ಟ್ ಅನ್ನು ಟೈಪ್ ಮಾಡಿ.
4. ಉದಾಹರಣೆ ಸೂಚನೆಗಳು: 
ಚೆರ್ರಿ ಹೂವುಗಳೊಂದಿಗೆ ಶಾಂತಿಯುತ ಗ್ರಾಮಾಂತರದ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸಿ. 
ಈ ಫೋಟೋವನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಅನಿಮೇಷನ್ ಪ್ರೇಮ್ ಆಗಿ ಪರಿವರ್ತಿಸಿ.
5. ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಮತ್ತು ಚಿತ್ರವನ್ನು ರೆಂಡರ್ ಮಾಡಲು AI ಗಾಗಿ ಕೆಲವು ಸೆಕೆಂಡುಗಳು ಕಾಯಿರಿ.
6. ಚಿತ್ರವು ನಿರೀಕ್ಷೆಗಳಿಗೆ ಹೊಂದಿಕೆಯಾಗದಿದ್ದರೆ, ಪ್ರಾಂಪ್ಟ್ ಅನ್ನು ಮಾರ್ಪಡಿಸಿ ಅಥವಾ ವಿವರಗಳನ್ನು ಪರಿಷ್ಕರಿಸಲು ಸಂಪಾದನೆ ವೈಶಿಷ್ಟ್ಯವನ್ನು ಬಳಸಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ! ಎಚ್ಚರಿಕೆ ಜಾರಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!