ಇಂದಿನಿಂದ ಮೊಬೈಲಲ್ಲಿ ಸಿಮ್‌ ಇದ್ರೆ ಮಾತ್ರ ವಾಟ್ಸಪ್‌ ಬಳಕೆ!

Kannadaprabha News   | Kannada Prabha
Published : Mar 01, 2026, 07:06 AM IST
WhatsApp

ಸಾರಾಂಶ

ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುವಾಗ ನೋಂದಾಯಿಸಲಾಗುವ ಸಂಖ್ಯೆಯ ಸಿಮ್‌ಕಾರ್ಡ್‌ ಮೊಬೈಲ್‌ನಲ್ಲಿ ಇದ್ದರೆ ಮಾತ್ರ ಇಂದಿನಿಂದ ಆ ಆ್ಯಪ್‌ಗಳನ್ನು ಬಳಸಲಾಗುವುದು. ಅಂತೆಯೇ ವಾಟ್ಸಪ್‌ ಮತ್ತು ಟೆಲಿಗ್ರಾಂಗೆ ವೆಬ್‌ನಲ್ಲಿ ಲಾಗ್‌ಇನ್‌ ಆಗಿದ್ದರೆ, ಅವುಗಳು 6 ತಾಸುಗಳ ಬಳಿಕ ತಾವಾಗಿಯೇ ಲಾಗ್‌ಔಟ್‌ ಆಗಲಿವೆ.

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುವಾಗ ನೋಂದಾಯಿಸಲಾಗುವ ಸಂಖ್ಯೆಯ ಸಿಮ್‌ಕಾರ್ಡ್‌ ಮೊಬೈಲ್‌ನಲ್ಲಿ ಇದ್ದರೆ ಮಾತ್ರ ಇಂದಿನಿಂದ ಆ ಆ್ಯಪ್‌ಗಳನ್ನು ಬಳಸಲಾಗುವುದು. ಅಂತೆಯೇ ವಾಟ್ಸಪ್‌ ಮತ್ತು ಟೆಲಿಗ್ರಾಂಗೆ ವೆಬ್‌ನಲ್ಲಿ ಲಾಗ್‌ಇನ್‌ ಆಗಿದ್ದರೆ, ಅವುಗಳು 6 ತಾಸುಗಳ ಬಳಿಕ ತಾವಾಗಿಯೇ ಲಾಗ್‌ಔಟ್‌ ಆಗಲಿವೆ.

ಸೈಬರ್‌ ವಂಚನೆಗಳನ್ನು ತಡೆಯಲು

ಸೈಬರ್‌ ವಂಚನೆಗಳನ್ನು ತಡೆಯಲು ಮತ್ತು ಬಳಕೆದಾರರನ್ನು ಟ್ರ್ಯಾಕ್‌ ಮಾಡುವ ಉದ್ದೇಶದಿಂದ 2024ರ ಟೆಲಿಕಾಂ ಸೈಬರ್ ಸೆಕ್ಯುರಿಟಿ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್‌ಗೆ ಭಾರತದ ದೂರಸಂಪರ್ಕ ಇಲಾಖೆ ಈಗಾಗಲೇ ಈ ಹೊಸ ನಿಯಮ ಜಾರಿಗೆ ತರಲು ಸೂಚಿಸಿ 90 ದಿನಗಳ ಕಾಲಾವಕಾಶ ನೀಡಿತ್ತು. ಅದು ನ.28ರಂದು ಅತ್ಯಗೊಳ್ಳಲಿದ್ದು, ಮಾ.1ರಿಂದ ಜಾರಿಗೆ ಬರಲಿದೆ. ಇದಾದ 1 ತಿಂಗಳ ಬಳಿಕ ಎಲ್ಲಾ ಆ್ಯಪ್‌ಗಳು ಆದೇಶದ ಪಾಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ.

ಬದಲಾವಣೆಯೇನು?:

ಇಷ್ಟುದಿನ ಮೊಬೈಲ್‌ನಲ್ಲಿ ಸಿಮ್‌ ಇರದಿದ್ದರೂ, ಸಂಖ್ಯೆಯನ್ನು ಮತ್ತು ಅದಕ್ಕೆ ಬರುವ ಒಟಿಪಿಯನ್ನು ನಮೂದಿಸಿ ಲಾಗ್‌ಇನ್‌ ಆಗಲು ಅವಕಾಶವಿತ್ತು. ಆದರೆ ಇನ್ನುಮುಂದೆ ಅದಾಗದು. ನೋಂದಣಿ ವೇಳೆ ನೀಡಲಾದ ಸಂಖ್ಯೆಯ ಸಿಮ್‌ ಇರದ ಹೊರತು ಆ್ಯಪ್‌ಗಳನ್ನು ಬಳಸಲಾಗದು.

ಅಂತೆಯೇ, ವೆಬ್‌ ಮೂಲಕ ವಾಟ್ಸಪ್‌ ಮತ್ತು ಟೆಲಿಗ್ರಾಂಗ್‌ ಲಾಗ್‌ಇನ್‌ ಆಗಿ, ಬಳಿಕ ಲಾಗ್‌ಔಟ್‌ ಆಗಲು ಬಳಕೆದಾರರು ಮರೆಯಬಹುದು. ಇದರಿಂದ ಅವುಗಳ ದುರ್ಬಳಕೆ ಸಾಧ್ಯ, ಹಾಗಾಗಿ 6 ತಾಸುಗಳ ಬಳಿಕ ಅವು ಸ್ವಯಂಚಾಲಿತವಾಗಿ ಲಾಗ್‌ಔಟ್‌ ಆಗಲಿವೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ದೇಶದಲ್ಲೇ ಮೊದಲು ಬಂಡೀಪುರ ಅರಣ್ಯದ 'ಎಐ' ಕಣ್ಗಾವಲು: 10 ಕಿ.ಮೀ ದೂರದಿಂದಲೇ ಪ್ರಾಣಿ ಗುರುತಿಸುವ ಹೈಟೆಕ್ ಕ್ಯಾಮರಾ!
ವಿಕಸಿತ ಭಾರತಕ್ಕೆ ಮಹಿಳಾ ವಿಜ್ಞಾನಿಗಳ ಕೊಡುಗೆ