ಮನೆ ಸ್ವಚ್ಚಗೊಳಿಸೋ ಐರೋಬಾಟ್ ಖರೀದಿಸಿ-ಆಕರ್ಷಕ ಉಡುಗೊರೆ ಪಡೆಯಿರಿ!

Published : Oct 15, 2018, 03:07 PM IST
ಮನೆ ಸ್ವಚ್ಚಗೊಳಿಸೋ ಐರೋಬಾಟ್ ಖರೀದಿಸಿ-ಆಕರ್ಷಕ ಉಡುಗೊರೆ ಪಡೆಯಿರಿ!

ಸಾರಾಂಶ

ಮನೆಯನ್ನು ಸ್ವಚ್ಛಗೊಳಿಸಿ ಗೃಹಿಣಿಯರ ಮನೆಕೆಲಸವನ್ನು ಕಡಿಮೆಗೊಳಿಸುವ ಐರೋಬಾಟ್ ಖರೀದಿಸಿದರೆ ಆಕರ್ಷಕ ಉಡುಗೊರೆ ನಿಮ್ಮದಾಗಲಿದೆ. ನಿಮ್ಮ ಮನೆಕೆಲಸವನ್ನು ಸುಲಭಗೊಳಿಸುವ ಮಾಂತ್ರಿಕ ಉತ್ಪನ್ನ ಕಡಿಮೆ ಬೆಲೆ ಹಾಗೂ ಆಕರ್ಷಕ ಉಡುಗೊರೆಯಲ್ಲಿ ಲಭ್ಯವಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಂಗಳೂರು(ಅ.15): ಮತ್ತೆ ಹಬ್ಬಗಳ ಸಡಗರ ಆರಂಭವಾಗಿದೆ. ಮನೆಯನ್ನು ಶುಚಿಗೊಳಿಸಿ ಅಂದಗೊಳಿಸಬೇಕಾಗಿದೆ. ಶುಭ ಸಮಾರಂಭಗಳಿಗಾಗಿ ಮನೆಯ ಮೂಲೆ ಮೂಲೆಯ ಕಸ ಸ್ವಚ್ಛಗೊಳಿಸುವ ಕೆಲಸ ಮಾಡಬೇಕೆಂದು ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಮನೆಕೆಲಸವನ್ನು ಸುಲಭಗೊಳಿಸುವ ಮಾಂತ್ರಿಕ ಉತ್ಪನ್ನವೀಗ ದೊರಕುತ್ತಿದೆ. ಈ ಬಾರಿ ನಿಮಗೆ ನೀವೇ ಈ ರೊಬೊಟ್ ಅನ್ನು ಉಡುಗೊರೆ ಕೊಟ್ಟುಕೊಳ್ಳಿ, ಮತ್ತು ಮನೆಕೆಲಸ ಸುಲಭವಾಗುವ ಪರಿಯನ್ನು ಕಾದು ನೋಡಿ.

ಪ್ಯೂರ್ ಸೈಟ್ ಸಿಸ್ಟಮ್ ಪ್ರೈ.ಲಿ. ಭಾರತದಲ್ಲಿ ಐರೊಬೊಟ್ ಉತ್ಪನ್ನಗಳ ಅಧಿಕೃತ ವಿತರಕನಾಗಿದ್ದು, ಈ ಬೆಳಕಿನ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲು ಮುಂದಾಗಿದೆ. ಮನೆಯನ್ನು ಸ್ವಚ್ಛಗೊಳಿಸಿ ಗೃಹಿಣಿಯರ ಮನೆಕೆಲಸವನ್ನು ಕಡಿಮೆಗೊಳಿಸುವ ಈ ರೊಬೊ-ವ್ಯಾಕ್ಯೂಮ್ ಕ್ಲೀನರ್ ಗಳ ಮೇಲೆ ಅದ್ಭುತ ಕೊಡುಗೆಗಳನ್ನು ಘೋಷಿಸಿದೆ. 

ಐರೊಬೊಟ್ ರೊಂಬಾ 980 ಯ ಖರೀದಿಯೊಂದಿಗೆ  4499ರೂಪಾಯಿ ಮೌಲ್ಯದ ಅಮೆಜಾನ್ ಇಕೋ ಡಾಟ್ ಅನ್ನು ಉಚಿತವಾಗಿ ಪಡೆಯಬಹುದು. ರೊಂಬಾ 966,ರೊಂಬಾ ಇ5, ಮತ್ತು ರೊಂಬಾ 671 ಖರೀದಿ ವೇಳೆ ಅಮೇಜಾನ್ ಇಕೋ ಡಾಟ್ ರೂ.1000ಕ್ಕೆ ಲಭ್ಯವಾಗಲಿದೆ. ಎಐ ಪವರ್ಡ್ ಹೋಮ್ ಅಸಿಸ್ಟೆಂಟ್ ಕೂಡಾ ಕೇವಲ ರೂ. 2000ಕ್ಕೆ ದೊರೆಯಲಿದೆ. 

ತೆಳ್ಳಗೆ ಬಳುಕುವ ದೇಹ ಹೊಂದಿರುವ ಈ ರೊಬೊ ಸ್ವಯಂಚಾಲಿತವಾಗಿ ಮನೆಯನ್ನು ನ್ಯಾವಿಗೇಟ್ ಮಾಡಿ, ಪ್ರತಿಯೊಂದು ಕಸ, ಕೊಳಕನ್ನು ಹೆಕ್ಕಿ ತೆಗೆದು ನೆಲವನ್ನು ಫಳ ಫಳ ಹೊಳೆಯುವಂತೆ ಮಾಡುತ್ತದೆ. ಪೀಠೋಪಕರಣಗಳ ಮೂಲೆಗೂ ತೆರಳಿ ಅಂಚನ್ನು ಸ್ವಚ್ಛಗೊಳಿಸುತ್ತದೆ. ಅಮೇಜಾನ್ ಇಕೊ ಡಾಟ್ ಮೂಲಕ ಸರಳ ಆಜ್ಞೆಗಳನ್ನು ನೀಡಿ ದೂರದಿಂದಲೇ ಅದರ ಕೆಲಸಗಳನ್ನು ನಿಯಂತ್ರಿಸಬಹುದು. 

ರೊಂಬಾದೊಂದಿಗೆ ಉಚಿತವಾಗಿ ಸಿಗುವ ಇಕೊ ಡಾಟ್ ಜೋಡಿಯಾಗಿ ಸಿಗುವ ಅವಕಾಶವನ್ನು ಕಳೆದುಕೊಳ್ಳದಿರಿ. ಹಬ್ಬದ ಸಮಯದಲ್ಲಿ ಮನೆತುಂಬ ನೆಂಟರಿರುವಾಗ ದಿನಕ್ಕೆರಡು ಬಾರಿ ನೆಲ ಸ್ವಚ್ಛಗೊಳಿಸಬೇಕಾದೀತು. ನಿಮ್ಮ ಮನೆಯಲ್ಲಿ ಐರೊಬೊಟ್ ಇದ್ದರೆ ನೀವು ಸೋಫಾದಲ್ಲಿ ಕಾಲು ಮೇಲಿಟ್ಟು ಕುಳಿತು ಟಿವಿ ವೀಕ್ಷಿಸುತ್ತಿದ್ದರೆ ಸಾಕು, ಮನೆಯಲ್ಲಿ ಸ್ವಚ್ಛಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ವ್ಯಾಕ್ಯೂಮ್ ಕ್ಲೀನರ್ ಹೊತ್ತುಕೊಳ್ಳುತ್ತದೆ. ಈ ಕೊಡುಗೆ ಅಮೆಜಾನ್ ನಲ್ಲಿ  ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುದೀರ್ಘ ಬಾಹ್ಯಾಕಾಶ ಸೇವೆಯಿಂದ ನಿವೃತ್ತಿ
ಸಸ್ಯಗಳು ಹೇಗೆ ಉಸಿರಾಡುತ್ವೆ, ಕೊನೆಗೂ ಕ್ಯಾಮರಾದಲ್ಲಿ ಸೆರೆ ಹಿಡಿದ ವಿಜ್ಞಾನಿಗಳು