Realme X ಮಾಸ್ಟರ್ ಎಡಿಷನ್‌ಗೆ ಈರುಳ್ಳಿ, ಬೆಳ್ಳುಳ್ಳಿಯೇ ಸ್ಫೂರ್ತಿ!

By Web Desk  |  First Published Jul 16, 2019, 6:20 PM IST

ಸಿದ್ಧವಾಗುತ್ತಿದೆ ಬಹು ನಿರೀಕ್ಷಿತ Realme X ಮಾಸ್ಟರ್ ಎಡಿಷನ್! | ಹೊಸ ಡಿಸೈನ್‌ಗೆ ತರಕಾರಿ ಸ್ಫೂರ್ತಿ! | ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ


ಬೆಂಗಳೂರು (ಜು.16): ಅಡುಗೆ ಮನೆಯ ಅತಿ ಮುಖ್ಯ ಸದಸ್ಯರಾದ ಈರುಳ್ಳಿ, ಬೆಳ್ಳುಳ್ಳಿ ಜಗತ್ತಿನ ಅತಿ ಆಕರ್ಷಕ ಉತ್ಪನ್ನವಾದ ಮೊಬೈಲ್ ವಿನ್ಯಾಸಕ್ಕೂ ಸ್ಫೂರ್ತಿಯಾಗಿದೆ ಎನ್ನುವುದನ್ನು ಕೇಳುವುದೇ ಎಷ್ಟು ಖುಷಿ.

ಬಹು ನಿರೀಕ್ಷಿತ Realme X ಮಾಸ್ಟರ್ ಎಡಿಷನ್ ಸಿದ್ಧವಾಗುತ್ತಿದೆ. ಎರಡು ರೀತಿಯಲ್ಲಿ ರೆಡಿಯಾಗುತ್ತಿರುವ ಆ ಮೊಬೈಲ್‌ನ ವಿನ್ಯಾಸ ಥೇಟ್ ಈರುಳ್ಳು, ಬೆಳ್ಳುಳ್ಳಿಯಂತೆಯೇ ಇದೆ. ಸಂತಸವೆಂದರೆ ಈ ಡಿಸೈನ್‌ಗೆ ಸ್ಫೂರ್ತಿಯೇ ಈರುಳ್ಳಿ, ಬೆಳ್ಳುಳ್ಳಿ ಅಂತ ಮೊಬೈಲ್ ವಿನ್ಯಾಸಗೊಳಿಸಿದ ಜಪಾನಿನ ನಾಟೋ ಫುಕುಸವಾ ಹೇಳಿದ್ದಾರೆ.

Tap to resize

Latest Videos

ಹೊಸ ಥರ ಮೊಬೈಲ್ ವಿನ್ಯಾಸ ಮಾಡಬೇಕು ಅನ್ನುವ ಆಸೆ ಇತ್ತು. ಒಂದ್ಸಲ ಈರುಳ್ಳಿಯನ್ನು ನೋಡಿದೆ. ಒಂದ್ಸಲ ಅದನ್ನು ಕಟ್ ಮಾಡಿ ನೋಡಿ, ಅದರೊಳಗಿನ ವಿನ್ಯಾಸ ನಿಮ್ಮನ್ನು ಅಚ್ಚರಿಗೊಳಿಸದೇ ಇರಲು ಸಾಧ್ಯವಿಲ್ಲ. ಹಾಗಾಗಿ ಅದನ್ನೇ ಯಾಕೆ ಮೊಬೈಲ್ ವಿನ್ಯಾಸಕ್ಕೆ ತರಬಾರದು ಎಂದು ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದೇವೆ ಎಂತ ಫುಕುಸವಾ ಹೇಳುತ್ತಾರೆ. ಆತ ಜಗತ್ತಿನ ಶ್ರೇಷ್ಠ ವಿನ್ಯಾಸಕರಲ್ಲಿ ಒಬ್ಬರು. ಅಂಥಾ ವಿನ್ಯಾಸಕ ಈರುಳ್ಳಿಯಲ್ಲಿ ವಿನ್ಯಾಸವನ್ನು ಕಂಡಿದ್ದೂ ಕಲೆಗಾರರಿಗೆ ಸ್ಫೂರ್ತಿ.

ಇದನ್ನೂ ಓದಿ | ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ! ನಿಮ್ದು ಸೇಫ್ ಇದಿಯಾ ನೋಡಿ...

ಈ ಮಾಸ್ಟರ್ ಎಡಿಷನ್ 4 GB RAM, 128 GB ಸ್ಟೋರೇಜ್‌ನಲ್ಲಿ ಮಾತ್ರ ಲಭ್ಯ. ಬೆಲೆ ಸ್ವಲ್ಪ ಜಾಸ್ತಿಯೇ. ರು. 19,999.  ಸದ್ಯಕ್ಕೆ ಈ ಮೊಬೈಲ್ ಕೈಗೆ ಸಿಗುವುದಿಲ್ಲ. ಆಗಸ್ಟ್ ತಿಂಗಳಲ್ಲಿ ಸಿಗಬಹುದು ಎನ್ನಲಾಗಿದೆ.

48 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 586 ರೇರ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 16 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್471 ಫ್ರಂಟ್ ಕ್ಯಾಮೆರಾ ಇದರ ಹೆಚ್ಚುಗಾರಿಕೆ. ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 710 ಪ್ರೊಸೆಸರ್, 3765 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ವೇಗವಾಗಿ ಚಾರ್ಜ್ ಮಾಡಬಲ್ಲ ವೂಕ್ 3.0 ಫ್ಲಾಶ್ ಚಾರ್ಜರ್, ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್  ಮತ್ತು ಡಾಲ್ಬಿ ಅಟ್ ಮೋಸ್ ಸೌಂಡು ಇದರ ಪ್ಲಸ್ ಪಾಯಿಂಟ್. ಇದರ ಬೆಲೆ 19,999 ರೂಪಾಯಿ.

ಇದರೊಂದಿಗೆ ಸ್ಪೈಡರ್‌ಮ್ಯಾನ್ ಎಡಿಷನ್ ಕೂಡ ಲಭ್ಯವಿದ್ದು, ಬೆಲೆ ರು. 20,999.
  

click me!