Fact Check: ವಾಟ್ಸಾಪ್‌ನಲ್ಲಿ 3 ಸರಿ ಚಿಹ್ನೆ ಇದ್ರೆ ಸರ್ಕಾರ ಗೂಢಚರ್ಯೆ ನಡೆಸ್ತಿದೆ ಎಂದರ್ಥ!

By Kannadaprabha NewsFirst Published Nov 9, 2019, 5:15 PM IST
Highlights

ಇಸ್ರೇಲಿ ಮೂಲದ ಪೆಗಾಸಸ್‌ ಎಂಬ ಸ್ಪೈವೇರ್‌ ಬಳಸಿ ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ ಮೂಲಕ ಗೂಢಚರ್ಯೆ ನಡೆಸಲಾಗಿದೆ ಎಂಬುದು ಇತ್ತೀಚೆಗಷ್ಟೇ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಒಂದು ವೇಳೆ ಸರ್ಕಾರ ನಿಮ್ಮ ವಾಟ್ಸ್‌ಆ್ಯಪ್‌ ಮೇಲೆ ಕಣ್ಣಿಟ್ಟಿದ್ದರೆ ವಾಟ್ಸ್‌ಆ್ಯಪ್‌ ಅದನ್ನು ನಿಮ್ಮ ಗಮನಕ್ಕೆ ತರಲು ಹೊಸ ವಿಧಾನ ಜಾರಿ ಮಾಡಿದೆ. ಹೌದಾ? ಏನಿದು ಸುದ್ದಿ? 

ಇಸ್ರೇಲಿ ಮೂಲದ ಪೆಗಾಸಸ್‌ ಎಂಬ ಸ್ಪೈವೇರ್‌ ಬಳಸಿ ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ ಮೂಲಕ ಗೂಢಚರ್ಯೆ ನಡೆಸಲಾಗಿದೆ ಎಂಬುದು ಇತ್ತೀಚೆಗಷ್ಟೇ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಒಂದು ವೇಳೆ ಸರ್ಕಾರ ನಿಮ್ಮ ವಾಟ್ಸ್‌ಆ್ಯಪ್‌ ಮೇಲೆ ಕಣ್ಣಿಟ್ಟಿದ್ದರೆ ವಾಟ್ಸ್‌ಆ್ಯಪ್‌ ಅದನ್ನು ನಿಮ್ಮ ಗಮನಕ್ಕೆ ತರಲು ಹೊಸ ವಿಧಾನ ಜಾರಿ ಮಾಡಿದೆ. ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ ಬಳಿಕ ಒಂದು ಸರಿ ಚಿಹ್ನೆ ಕಾಣಿಸಿದರೆ ನಿಮ್ಮ ಸಂದೇಶ ರವಾನೆಯಾಗಿದೆ ಎಂದರ್ಥ.

fact check: ಅಯೋಧ್ಯೆ ಪೊಲೀಸರಿಂದ ಫೇಸ್ಬುಕ್ ಮೇಲೆ ಕಣ್ಣು!

ಅದೇ ನೀಲಿ ಬಣ್ಣದ ಎರಡು ಸರಿ ಚಿಹ್ನೆ ಕಾಣಿಸಿದರೆ ನಿಮ್ಮ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದರ್ಥ. ಅದೇ ಬೂದು ಬಣ್ಣದ ಮೂರು ಸರಿ ಗುರುತುಗಳು ಕಾಣಿಸಿದರೆ ನಿಮ್ಮ ವಾಟ್ಸ್‌ಆ್ಯಪ್‌ ಸಂದೇಶಗಳ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ. ಮೂರು ನೀಲಿ ಬಣ್ಣದ ಸರಿ ಚಿಹ್ನೆಗಳೊಂದಿಗೆ ಕೆಂಪು ಬಣ್ಣದ ಮತ್ತೊಂದು ಮಾರ್ಕ್ ಇದ್ದರೆ ಸರ್ಕಾರ ನಿಮ್ಮ ಸಂದೇಶ ಓದಿದೆ ಎಂದರ್ಥ ಎಂದು ಸ್ವತಃ ವಾಟ್ಸ್‌ಆ್ಯಪ್‌ ಹೇಳಿಕೆ ಬಿಡುಗಡೆ ಮಾಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ವಿಶ್ವಾಸಾರ್ಹ ಬಿಬಿಸಿ ಸುದ್ದಿಸಂಸ್ಥೆ ಹೆಸರಲ್ಲಿ ಈ ಸಂದೇಶ ವೈರಲ್‌ ಆಗುತ್ತಿದೆ.

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದೇನು ಹೊಸತಲ್ಲ, ಈ ಹಿಂದೆಯೂ ಅನೇಕ ಬಾರಿ ಇದೇ ರೀತಿಯ ಸುಳ್ಳು ಸುದ್ದಿ ಹರಡಲಾಗಿತ್ತು ಎಂದು ತಿಳಿದುಬಂದಿದೆ. ವಾಟ್ಸ್‌ಆ್ಯಪ್‌ ಅಧಿಕೃತ ವೆಬ್‌ಸೈಟ್‌ ಮೂರು ಸರಿ ಚಿಹ್ನೆಗಳ ಬಗ್ಗೆಯಾಗಲೀ, ಕೆಂಪುಬಣ್ಣದ ಈ ಮಾರ್ಕ್ ಬಗ್ಗೆ ಎಲ್ಲೂ ಹೇಳಿಲ್ಲ. ವೆಬ್‌ಸೈಟ್‌ನಲ್ಲಿ ಸಂದೇಶ ರವಾನೆಯಾಗಿದೆ, ಸ್ವೀಕೃತವಾಗಿದೆ ಎಂಬುದನ್ನು ತಿಳಿಸುವ ಬೂದು ಬಣ್ಣದ ಗುರುತು ಮತ್ತು ನೀಲಿ ಬಣ್ಣದ ಡಬಲ್‌ ಗುರುತಿನ ಬಗ್ಗೆ ಮಾತ್ರ ಮಾಹಿತಿ ನೀಡಲಾಡಲಾಗಿದೆ. ಜೊತೆಗೆ ಬಿಬಿಸಿ ಕೂಡ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.

- ವೈರಲ್ ಚೆಕ್ 

click me!