ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಪೈಪೋಟಿ | WhatsApp ಪರಿಚಯಿಸಲು ಹೊರಟಿದೆ ಹಹೊ ಫೀಚರ್ | ಹಲವು ತಿಂಗಳಿನಿಂದ ನಡೆಯುತ್ತಿದ್ದ ಚರ್ಚೆಗೆ ಫುಲ್ ಸ್ಟಾಪ್
ಜನಪ್ರಿಯ ಇನ್ಸ್ಟಾಂಟ್ ಮೆಸೇಜಿಂಗ್ ಆ್ಯಪ್, WhatsAppನಲ್ಲಿ ಹೊಸ ಫೀಚರ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈವರೆಗೆ ಜಾಹೀರಾತುಗಳಿಂದ ದೂರವಿದ್ದ ವಾಟ್ಸಪ್ ಮುಂದಿನ ದಿನಗಳಲ್ಲಿ ಅದಕ್ಕೆ ಅನುವು ಮಾಡಿಕೊಡಲಿದೆ.
ಮೊದಲ ಹಂತದಲ್ಲಿ, ಸ್ಟೇಟಸ್ ನಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡುವ ಮೂಲಕ WhatsAppನಲ್ಲಿ ಜಾಹೀರಾತು ಯುಗ ಆರಂಭವಾಗಲಿದೆ. ನೆದರ್ ಲ್ಯಾಂಡಿನಲ್ಲಿ ಇತ್ತೀಚೆಗೆ ನಡೆದ Facebook ಮಾರ್ಕೆಟಿಂಗ್ ಶೃಂಗಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, 2020ರಲ್ಲಿ ಈ ಫೀಚರ್ ಬಿಡುಗಡೆಯಾಗಲಿದೆ.
WhatsApp ಸ್ಟೇಟಸ್ ನಲ್ಲಿ ಬಳಕೆದಾರರು ಟೆಕ್ಸ್ಟ್, ಫೋಟೋ, ವಿಡಿಯೋ ಮತ್ತು ಆ್ಯನಿಮೇಟೆಡ್ ಜಿಫ್ ಫೈಲ್ ಗಳನ್ನು ಹಾಕಬಹುದು. 24 ಗಂಟೆಗಳ ಕಾಲ ಇತರರಿಗೆ ಕಾಣಿಸುತ್ತದೆ.
ಇದನ್ನೂ ಓದಿ | 2.2 ಬಿಲಿಯನ್ ಫೇಸ್ಬುಕ್ ಖಾತೆ ಡಿಲೀಟ್! ನಿಯಮ ಮೀರಿದ್ರೆ ಇದೇ ಗತಿ!
ಸುಮಾರು 1 ಬಿಲಿಯನ್ ಬಳಕೆದಾರರನ್ನು ಹೊಂದಿರುವ Facebook ಒಡೆತನದ ಕಂಪನಿ WhatsApp ಕಳೆದ ಕೆಲವು ತಿಂಗಳಿನಿಂದ ಈ ಬಗ್ಗೆ ಚಿಂತನೆ ನಡೆಸುತ್ತಿದೆ. Facebook ಹಾಗೂ Instagram ನಲ್ಲಿ ಜಾಹೀರಾತು ವ್ಯವಸ್ಥೆ ಈಗಾಗಲೇ ಕಾರ್ಯಾಚರಿಸುತ್ತಿದೆ.
WhatsAppನ್ನು ವ್ಯವಹಾರಿಕ ಉದ್ದೇಶಕ್ಕೆ ಬಳಸುವ ಕುರಿತು Facebook ವ್ಯವಸ್ಥಾಪಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್’ರ ಪರವಾದ ನಿಲುವಿನಿಂದಾಗಿ ಸಹ-ಸಂಸ್ಥಾಪಕರು ಕಂಪನಿಯನ್ನು ತ್ಯಜಿಸಿದ್ದರು.