
ಜಿನೆವಾ/ನವದೆಹಲಿ: ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರ ಇಷ್ಟದ ವಿಶ್ವ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತಲೂ ತುಂಬಾ ಮುಂದಿದ್ದಾರೆ.
ಫೇಸ್‌ಬುಕ್‌ನಲ್ಲಿ ಮೋದಿ 4.32 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಬ್ರೂಸನ್ ಕೊನ್ ಮತ್ತು ವೋಲ್ಫ್ ಬಿಡುಗಡೆಗೊಳಿಸಿರುವ ‘ಫೇಸ್‌ಬುಕ್‌ನಲ್ಲಿ ವಿಶ್ವ ನಾಯಕರು’ ವರದಿಯ ಪ್ರಕಾರ, ಟ್ರಂಪ್‌ಗೆ 2.31 ಕೋಟಿ ಹಿಂಬಾಲಕರಿದ್ದು, ಮೋದಿಯವರ ನಂತರದ ಸ್ಥಾನದಲ್ಲಿದ್ದಾರೆ. 2017ರ ಜ.1ರಿಂದ ಇಲ್ಲಿ ವರೆಗೆ ಸುಮಾರು 650 ಪ್ರತಿಷ್ಠಿತ ಮಂದಿಯ ಫೇಸ್‌ಬುಕ್ ಪುಟದ ವಿಶ್ಲೇಷಣೆ ನಡೆಸಿ, ವರದಿ ಸಿದ್ಧಪಡಿಸಲಾಗಿದೆ. ಕಳೆದ 14 ತಿಂಗಳಿನಲ್ಲಿ ಟ್ರಂಪ್ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಸಂವಾದ ನಡೆಸಿದ ಮುಖಂಡ.
ಟ್ರಂಪ್ ಒಟ್ಟಾರೆ 20 ಕೋಟಿ ಬಾರಿ ಫೇಸ್‌ಬುಕ್ ಮೂಲಕ ಸಂವಹನ ನಡೆಸಿದ್ದಾರೆ. ಈ ಅವಧಿಯಲ್ಲಿ ಮೋದಿ 11 ಕೋಟಿ ಬಾರಿ ಸಂವಹನ ನಡೆಸಿದ್ದಾರೆ. 2017ರಲ್ಲಿ 5 ಅತಿಹೆಚ್ಚು ಲೈಕ್ ಮಾಡಲಾದ ಚಿತ್ರಗಳಲ್ಲಿ ಎಲ್ಲ 5 ಚಿತ್ರಗಳೂ ಮೋದಿ ಪೋಸ್ಟ್ ಮಾಡಿದ್ದಾಗಿದೆ. ಅದರಲ್ಲಿ ಒಡಿಶಾದ ಲಿಂಗರಾಜ್ ದೇಗುಲ ಫೋಟೊ ಅತಿಹೆಚ್ಚು ಲೈಕ್ ಮಾಡಲ್ಪಟ್ಟಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.