
ಬೆಂಗಳೂರು (ಏ. 24): ಜಗತ್ತಿನ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಎಲೆಕ್ಟ್ರಿಕ್ ವಾಹನ ಕಂಪನಿಯ ಆರಂಭಿಕ ದಿನಗಳ ಕಥೆಯನ್ನು ಮರು-ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಮೂಲದ ಗ್ರೋತ್‌ಸ್ಕೂಲ್‌ನ (GrowthSchool) ಸಿಇಒ ಮತ್ತು ಸಂಸ್ಥಾಪಕ ವೈಭವ್ ಸಿಸಿಂಟಿ (Vaibhav Sisinty) ಟ್ವೀಟ್‌ಗೆ ಪ್ರತಿಕ್ರಯಿಸಿರುವ ಮಸ್ಕ್ ತಮ್ಮ ಕಂಪನಿ ಆರಂಭಿಕ ದಿನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ಎಲೋನ್ ಮಸ್ಕ್ ಟೆಸ್ಲಾ ಸಂಸ್ಥಾಪಕರಲ್ಲ, ಅವರು ಅದನ್ನು ಸ್ವಾಧೀನಪಡಿಸಿಕೊಂಡರು" ಎಂದು ವೈಭವ್ ಸಿಸಿಂಟಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟೆಸ್ಲಾ ಸಿಇಓ "ಅದಕ್ಕೆ ಹತ್ತಿರವೂ ಇಲ್ಲ. ಇದು ಯಾವುದೇ ಉದ್ಯೋಗಿಗಳಿಲ್ಲದ ಶೆಲ್ ಕಂಪನಿ ಆಗಿತ್ತು, ಯಾವುದೇ ಐಪಿ ಇಲ್ಲ, ಯಾವುದೇ ವಿನ್ಯಾಸಗಳಿರಲಿಲ್ಲ, ಯಾವುದೇ ಮಾದರಿಗಳಿಲ್ಲ, ಅಕ್ಷರಶಃ ಎಸಿ ಪ್ರೊಪಲ್ಷನ್‌ನ ಟಿಯನ್ನು ವಾಣಿಜ್ಯೀಕರಿಸುವ (ವ್ಯಾಪಾರ) ಯೋಜನೆಯಾಗಿತ್ತು. ಇದನ್ನು ನನಗೆ ಪರಿಚಯಿಸಿದ್ದು ಜೆಬಿ ಸ್ಟ್ರಾಬೆಲ್ ಹೊರತು ಎಬರ್‌ಹಾರ್ಡ್ ಅಲ್ಲ. 'ಟೆಸ್ಲಾ ಮೋಟಾರ್ಸ್' ಎಂಬ ಹೆಸರು ಕೂಡ ಇತರರ ಮಾಲೀಕತ್ವದಲ್ಲಿತ್ತು!" ಎಂದು ಹೇಳಿದ್ದಾರೆ.
2003 ರಲ್ಲಿ ಇಂಜಿನಿಯರ್‌ಗಳ ಗುಂಪೊಂದು ಟೆಸ್ಲಾ ಸಂಸ್ಥೆಯನ್ನು ಸ್ಥಾಪಿಸಿತ್ತು, ಅವರು ಎಲೆಕ್ಟ್ರಿಕ್ ವಾಹನಗಳು ಗ್ಯಾಸೋಲಿನ್ ಕಾರುಗಳಿಗಿಂತ ಉತ್ತಮ, ವೇಗವಾಗಿ ಮತ್ತು ಹೆಚ್ಚು ಮೋಜಿನ ಚಾಲನೆ ಮಾಡಬಹುದು. ಎಲೆಕ್ಟ್ರಿಕ್ ಡ್ರೈವಿಂಗ್ ಮಾಡಲು ಜನರು ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಾಬೀತುಪಡಿಸಲು ಮುಂದಾಗಿದ್ದರು.
ಇದನ್ನೂ ಓದಿ: 41 ಬಿಲಿಯನ್ ಡಾಲರ್ ಕ್ಯಾಶ್ ಕೊಡ್ತೇನೆ, ಟ್ವಿಟರ್ ಕಂಪನಿ ಕೊಡ್ತೀರಾ ಎಲಾನ್ ಮಸ್ಕ್ ನೇರ ಆಫರ್!
X.com ಸಹ-ಸಂಸ್ಥಾಪಕರಾಗಿದ್ದ ಎಲಾನ್ ಮಸ್ಕ್ ಫೆಬ್ರವರಿ 2004 ರಲ್ಲಿ $6.5 ಮಿಲಿಯನ್ ಹೂಡಿಕೆ ಮಾಡಿ ಕಂಪನಿಯ ಅತಿದೊಡ್ಡ ಷೇರುದಾರ ಮತ್ತು ಅದರ ಅಧ್ಯಕ್ಷರಾದರು. ಮಸ್ಕ್ 2008 ರಿಂದ ಟೆಸ್ಲಾ ಸಿಇಒ ಆಗಿದ್ದಾರೆ. ಪ್ರಸ್ತುತ, ಟೆಸ್ಲಾ ವಿದ್ಯುತ್ ವಾಹನಗಳನ್ನು ಮಾತ್ರವಲ್ಲದೆ ಶುದ್ಧ ಶಕ್ತಿ ಉತ್ಪಾದನೆ ಮತ್ತು ಶೇಖರಣಾ ಉತ್ಪನ್ನಗಳನ್ನು ನಿರ್ಮಿಸುತ್ತದೆ. ಟೆಸ್ಲಾ ವಾಹನಗಳನ್ನು ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ಮತ್ತು ಶಾಂಘೈನಲ್ಲಿರುವ ಗಿಗಾಫ್ಯಾಕ್ಟರಿಯಲ್ಲಿ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತದೆ.
ಇದಲ್ಲದೆ, ಟೆಸ್ಲಾ ಈಗ ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಗಳಲ್ಲಿ ಒಂದಾಗಿದೆ ಮತ್ತು $1 ಟ್ರಿಲಿಯನ್‌ಗಿಂತಲೂ ಹೆಚ್ಚು ಮಾರುಕಟ್ಟೆ ಬಂಡವಾಳದೊಂದಿಗೆ ವಿಶ್ವದ ಅತ್ಯಂತ ಮೌಲ್ಯಯುತವಾದ ವಾಹನ ತಯಾರಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.