Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

By Suvarna News  |  First Published Jan 3, 2022, 8:57 PM IST

"ಟೆಸ್ಲಾ ಆಟೋಪೈಲಟ್ ತಂಡವನ್ನು ಪ್ರಾರಂಭಿಸುತ್ತಿದೆ ಎಂದು ಹೇಳುವ ನನ್ನ ಟ್ವೀಟ್‌ನಿಂದ ನೇಮಕಗೊಂಡ ಮೊದಲ ವ್ಯಕ್ತಿ ಅಶೋಕ್!" ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.


Tech Desk: ಸಾಮಾಜಿಕ ಮಾಧ್ಯಮವು ಸಾಧಕ ಬಾಧಕಗಳೆರಡನ್ನು ಒಳಗೊಂಡಿದೆ. ಸೋಷಿಯಲ್‌ ಮೀಡಿಯಾ ಕೆಲವರು ಮನರಂಜನೆಗಾಗಿ ಬಳಸಿದರೆ ಇನ್ನೂ ಕೆಲವರು ಬ್ಯುಸಿನೆಸ್‌, ಮಾರ್ಕೆಟಿಂಗ್‌ ಸೇರಿದಂತೆ ಹಲವು ವಿಷಯಗಳಿಗೆ ಬಳಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌̈ (Viral) ಆಗುವ ಪೋಸ್ಟ್‌ಗಳು ಜನರ ಬದುಕನ್ನೇ ಬದಲಿಸಿರುವ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ, ರಿಟ್ವೀಟ್‌ಗಳ ಮೂಲಕ ನಡೆಯುವ ಮಾತುಕತೆಗಳು ಅಥವಾ ಕಂಪನಿಯ ಟೈ ಅಪ್‌ಗಳ ಮೂಲಕ ಜನರು ಉದ್ಯೋಗಗಳನ್ನು ಪಡೆಯುವ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ.

ಹೀಗೆ ಕೆಲವೇ ದಿನಗಳ ಹಿಂದೆ, ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ (Elon Musk) ಅವರು ಪ್ರಸ್ತುತ ಆಟೋಪೈಲಟ್‌ ಇಂಜಿನೀಯರಿಂಗ್ ಮುಖ್ಯಸ್ಥರಾಗಿರುವ ಭಾರತೀಯ ಮೂಲದ ಎಂಜಿನಿಯರ್ ಅಶೋಕ್ ಎಲ್ಲು ಸ್ವಾಮಿಯವರನ್ನು ತಮ್ಮ ಟೆಸ್ಲಾ ಆಟೋಪೈಲಟ್ ತಂಡಕ್ಕೆ ಹೇಗೆ ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಿದ್ದರು.

Tap to resize

Latest Videos

undefined

ಆಟೋಪೈಲಟ್ ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ!

2015 ರಲ್ಲಿ ಮಸ್ಕ್ ಅಭ್ಯರ್ಥಿಗಳ ನೇಮಕಾತಿಗಾಗಿ ಟ್ವೀಟ್‌ ಮಾಡಿದಾಗ, ಭಾರತೀಯ ಮೂಲದ  ಎಲ್ಲುಸ್ವಾಮಿ ಟೆಸ್ಲಾದ ಆಟೋಪೈಲಟ್ ತಂಡಕ್ಕೆ ನೇಮಕಗೊಂಡ ಮೊದಲ ಉದ್ಯೋಗಿ. ಮಸ್ಕ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಟೆಸ್ಲಾ ಆಟೋಪೈಲಟ್ ತಂಡದ ಬಗ್ಗೆ ಮಾತನಾಡಿದ್ದರು. ಮಾತುಕತೆ ಸಂದರ್ಭದಲ್ಲಿ ಭಾರತೀಯ ಮೂಲದ ವ್ಯಕ್ತಿ ಆಟೋಪೈಲಟ್ ಇಂಜಿನಿಯರಿಂಗ್ ಮುಖ್ಯಸ್ಥ ಎಂದು ಎಲಾನ ಮಸ್ಕ್  ಬಹಿರಂಗಪಡಿಸಿದ ನಂತರ ಎಲ್ಲುಸ್ವಾಮಿ ಅವರ ಹೆಸರು ಎಲ್ಲೆಡೆ ಕಾಣಿಸಿಕೊಂಡಿತು.

ಇದನ್ನೂ ಓದಿ: Elon Musk reacts: ತನ್ನ ತದ್ರೂಪಿಯ ವಿಡಿಯೋಗೆ ವಿಶ್ವದ ಶ್ರೀಮಂತ ಪ್ರತಿಕ್ರಿಯಿಸಿದ್ದು ಹೀಗೆ...!

ನಂತರ ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರು ಸಂದರ್ಶನದ ತುಣುಕನ್ನು ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲ್ಲುಸ್ವಾಮಿಯನ್ನು ತಮ್ಮ ಟ್ವೀಟ್ ಮೂಲಕ ನೇಮಕ ಮಾಡಿಕೊಂಡಿದ್ದರು ಎಂದು ಬಹಿರಂಗಪಡಿಸಿದರು ಜತೆಗೆ  ಟೆಸ್ಲಾ ಆಟೋಪೈಲಟ್ ತಂಡವನ್ನು ಹೇಗೆ ಪ್ರಾರಂಭಿಸಿದರು ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ.

 

Elon on Teslas Autopilot team: Ashok is actually the head of Autopilot engineering. Andrej is director of AI; People often give me too much credit & give Andrej too much credit. The Tesla Autopilot AI team is extremely talented. Some of the smartest people in the world. pic.twitter.com/a6vJ64aphG

— Sawyer Merritt (@SawyerMerritt)

 

"ಟೆಸ್ಲಾ ಆಟೋಪೈಲಟ್ ತಂಡವನ್ನು ಪ್ರಾರಂಭಿಸುತ್ತಿದೆ ಎಂದು ಹೇಳುವ ನನ್ನ ಟ್ವೀಟ್‌ನಿಂದ ನೇಮಕಗೊಂಡ ಮೊದಲ ವ್ಯಕ್ತಿ ಅಶೋಕ್!" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮಸ್ಕ್ "ಟೆಸ್ಲಾ ಆಟೊಪೈಲಟ್ AI ತಂಡವು ಅತ್ಯಂತ ಪ್ರತಿಭಾವಂತವಾಗಿದೆ. ಇವರು ಪ್ರಪಂಚದ ಕೆಲವು ಬುದ್ಧಿವಂತ ಜನರಿರುವ ತಂಡ," ಎಂದು ಎಲ್ಲುಸ್ವಾಮಿ ಮತ್ತು ಆಂಡ್ರೆಜ್ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಅಶೋಕ್ ಎಲ್ಲುಸ್ವಾಮಿ ಯಾರು?

ಟೆಸ್ಲಾಗೆ ಸೇರುವ ಮೊದಲು, ಎಲ್ಲುಸ್ವಾಮಿ WABCO ವೆಹಿಕಲ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಿದರು ಮತ್ತು ವೋಕ್ಸ್‌ವ್ಯಾಗನ್ ಎಲೆಕ್ಟ್ರಾನಿಕ್ ರಿಸರ್ಚ್ ಲ್ಯಾಬ್‌ನಲ್ಲಿ ಸಹ ತರಬೇತಿ ಪಡೆದಿದ್ದಾರೆ. ಅವರು ಚೆನ್ನೈನ ಕಾಲೇಜ್ ಆಫ್ ಇಂಜಿನಿಯರಿಂಗ್ ಗಿಂಡಿಯಿಂದ (College of Engineering Guindy) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ನಲ್ಲಿ  ಪದವಿಯನ್ನು ಪಡೆದಿದ್ದಾರೆ ಮತ್ತು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಿಂದ ರೊಬೊಟಿಕ್ಸ್ ಸಿಸ್ಟಮ್ ಡೆವಲಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!

ಮಸ್ಕ್ ತನ್ನ ಕಂಪನಿಗಳಿಗೆ ಜನರನ್ನು ನೇಮಿಸಿಕೊಳ್ಳಲು ಟ್ವಿಟರ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರು. ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕಾಳಜಿ ವಹಿಸುವ ಹಾರ್ಡ್‌ಕೋರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಎಂಜಿನಿಯರ್‌ಗಳನ್ನು ಟೆಸ್ಲಾ ಹುಡುಕುತ್ತಿದೆ ಎಂದು ಎಲಾನ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ ಕೆಲಸದ ಅರ್ಜಿ ಬಹಳ ಸರಳವಾಗಿತ್ತು. ಆಸಕ್ತ ಅಭ್ಯರ್ಥಿಗಳು ಹೆಸರು, ಇಮೇಲ್, ಸಾಫ್ಟ್‌ವೇರ್, ಹಾರ್ಡ್‌ವೇರ್ ಅಥವಾ AI ನಲ್ಲಿ ಮಾಡಿದ ಅಸಾಧಾರಣ ಕೆಲಸಗಳ ಬಗ್ಗೆ ಮಾಹಿತ ಭರ್ತಿ ಮಾಡಿ ಮತ್ತು ನಂತರ ಅವರ ರೆಸ್ಯೂಮ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಅಪಲೋಡ್‌ ಮಾಡಬೇಕಾಗಿತ್ತು.

click me!