ಅಲುಗಾಡುತ್ತಿದೆ ಚಂದ್ರ: ಭಯಭೀತರಿಗೆ ನಾಸಾ ಸಮಾಧಾನ!

Published : Oct 13, 2018, 04:39 PM IST
ಅಲುಗಾಡುತ್ತಿದೆ ಚಂದ್ರ: ಭಯಭೀತರಿಗೆ ನಾಸಾ ಸಮಾಧಾನ!

ಸಾರಾಂಶ

ಏನಾಯ್ತು ಚಂದ್ರನಿಗೆ?, ನಿಂತಲ್ಲೇ ನಿಂತಿದೆ ಸುಮ್ಮನೆ! ಕೆಟ್ಟು ನಿಂತ ನಾಸಾದ ಚಂದ್ರ ಎಕ್ಸರೇ ಟೆಲಿಸ್ಕೋಪ್! ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಚಂದ್ರ ಟೆಲಿಸ್ಕೋಪ್! 1999ರಲ್ಲಿ ವಿಶ್ವದ ಅಧ್ಯಯನಕ್ಕೆ ಹಾರಿ ಬಿಡಲಾಗಿದ್ದ ಚಂದ್ರ ಎಕ್ಸರೇ! ತಾಂತ್ರಿಕ ದೋಷ ಶೀಘ್ರ ನಿವಾರಣೆಗೆ ನಾಸಾದ ಭರವಸೆ!

ವಾಷಿಂಗ್ಟನ್(ಅ.13): ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಚಂದ್ರ ಎಕ್ಸರೇ ಟೆಲಿಸ್ಕೋಪ್ ಕಳೆದ ಕೆಲವು ದಿನಗಳ ಹಿಂದೆ ತಾಂತ್ರಿಕ ದೋಷಕ್ಕೆ ಗುರಿಯಾಗಿದೆ. ಆದರೆ ಈ ದೋಷವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ನಾಸಾ ಭರವಸೆ ನೀಡಿದೆ. 

1999 ರಲ್ಲಿ ವಿಶ್ವ ಅಧ್ಯಯನಕ್ಕಾಗಿ ಕಳುಹಿಸಲಾಗಿದ್ದ ಚಂದ್ರ ಎಕ್ಸರೇ ಟೆಲಿಸ್ಕೋಪ್, ಕಳೆದ ಕೆಲವು ದಿನಗಳಿಂದ ತಾಂತ್ರಿ ತೊಂದರೆಗಳಿಂದ ಬಳಲುತ್ತಿದೆ. ವಿಶ್ವವನ್ನು ಹೈ ಎನರ್ಜಿ ಲೈಟ್ ತಂತ್ರಜ್ಞಾನದ ಸಹಾಯದಿಂದ ವೀಕ್ಷಣೆ ಮಾಡುತ್ತಿರುವ ಚಂದ್ರ ಟೆಲಿಸ್ಕೋಪ್, ಬ್ರಹ್ಮಾಂಡದ ಕುರಿತು ಹಲವು ಕುತೂಲಕಾರಿ ಮಾಹಿತಿಗಳನ್ನು ಈಗಾಗಲೇ ರವಾನಿಸಿದೆ.

ಸದ್ಯ ಚಂದ್ರ ಎಕ್ಸರೇ ಸೇಫ್ ಮೋಡ್ ಗೆ ಹೋಗಿದ್ದು, ತಾಂತ್ರಿಕ ದೋಷವನ್ನು ಪತ್ತೆ ಹಚ್ಚುವ ಕಾರ್ಯ  ಭರದಿಂದ ಸಾಗಿದೆ ಎಂದು ನಾಸಾ ತಿಳಿಸಿದೆ. ಚಂದ್ರ ಎಕ್ಸರೇ ಜೀವಿತಾವಧಿ 2005 ರಲ್ಲೇ ಕೊನೆಗೊಳ್ಳಬೇಕಾಗಿತ್ತಾದರೂ, ನಾಸಾ ಇದರ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಿಸಿ ಮತ್ತೆ ಅಧ್ಯಯನ ಕೈಗೊಂಡಿತ್ತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ