ಹಿಂಗಿದೆ ಮಂಗಳ: ಇಸ್ರೋ ನೌಕೆಯ 980 ಫೋಟೋಗಳು!

By Web Desk  |  First Published Sep 28, 2018, 12:54 PM IST

ಇಸ್ರೋದ ಮಂಗಳಯಾನ ನೌಕೆ ಕಳುಹಿಸಿದ ಮಂಗಳ ಗ್ರಹದ ಫೋಟೋ! ಮೈನವಿರೇಳಿಸುವ ಮಂಗಳ ಗ್ರಹದ ಫೋಟೋ ನೀವೂ ನೋಡಿ! ನಾಲ್ಕು ವರ್ಷಗಳಿಂದ ಮಂಗಳ ಕಕ್ಷೆ ಸುತ್ತುತ್ತಿರುವ ಮಂಗಳಯಾನ! ಮಂಗಳ ಗ್ರಹದ ಕುರಿತು ಹೆಚ್ಚಿನ ಅಧ್ಯಯನಕ್ಕೆ ಸಹಾಯಕಾರಿ! ಗ್ರಹದ ಒಟ್ಟು 980 ಫೋಟೋಗಳನ್ನು ಕ್ಲಿಕ್ಕಿಸಿದ ಮಂಗಳಯಾನ ನೌಕೆ
 


ಬೆಂಗಳೂರು(ಸೆ.28): ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ.

ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.

ಈ ಫೋಟೋಗಳನ್ನು ಇಸ್ರೋ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಶೇರ್ ಮಾಡಿದ್ದು, ಮಂಗಳ ಗ್ರಹದ ಕುರಿತು ಹೆಚ್ಚಿನ ಅಧ್ಯಯನಕ್ಕೆ ಮತ್ತಷ್ಟು ಸಹಾಯಕಾರಿಯಾಗಿದೆ.

Latest Videos

undefined

 



It's been four years since successfully got inserted into Martian orbit on September 24, 2014 in its first attempt. 's mission life was expected to be six months! So far, the Mars Colour Camera has acquired 980+ images. Mars Atlas is also ready. pic.twitter.com/z4GGkGvl0C

— ISRO (@isro)

 

More power to you https://t.co/IBP0P63CUD

— ISRO (@isro)

ಮಂಗಳಯಾನದಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಗ್ರಹದ ಒಟ್ಟು 980 ಫೋಟೋಗಳನ್ನು ಕ್ಲಿಕ್ಕಿಸಿದ್ದು, ಬೇರೆ ಬೇರೆ ಪ್ರದೇಶಗಳ ಕುರಿತು ವಿಸ್ತೃತ ಮಾಹಿತಿ ದೊರೆತಿದೆ.

ಮಂಗಳ ಗ್ರಹದ ಸಂಪೂರ್ಣ ಪರಿಭ್ರಮಣೆಯನ್ನು ಸೆರೆ ಹಿಡಿದ ಏಕೈಕ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೂ ಇಸ್ರೋದ ಮಂಗಳಯಾನ ನೌಕೆ ಪಾತ್ರವಾಗಿದೆ.
 

click me!