
ತನ್ನನ್ನು ಕೆಣಕಿದ್ರೆ ಅದಕ್ಕೆ ಪ್ರತ್ಯುತ್ತರ ನೀಡದೆ ಬಿಡೋ ಜಾಯಮಾನದವರಲ್ಲಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಕೆಣಕಿದವರಿಗೆ ಬುದ್ಧಿ ಕಲಿಸಲು ಕೈಲಾದಷ್ಟು ಪ್ರಯತ್ನ ಮಾಡ್ತಾರೆ ಡೊನಾಲ್ಡ್ ಟ್ರಂಪ್. ಅದಕ್ಕೆ ಈಗ ಮೊಬೈಲ್ ಸಾಕ್ಷ್ಯವಾಗಿದೆ. ವಿಶ್ವದಾದ್ಯಂತ ಮೊಬೈಲ್ ಪ್ರೇಮಿಗಳನ್ನು ಸೆಳೆದಿರುವ ಆಪಲ್ ಗೆ ಟಕ್ಕರ್ ನೀಡಲು ಡೊನಾಲ್ಡ್ ಟ್ರಂಪ್ ಸಿದ್ಧತೆ ನಡೆಸಿದ್ದಾರೆ.
ಭಾರತದ ಬದಲು ಅಮೆರಿಕದಲ್ಲಿ ಆಪಲ್ ತನ್ನ ಐಫೋನ್ಗಳನ್ನು ತಯಾರಿಸಬೇಕು ಅಂತ ಟ್ರಂಪ್ ಸೂಚನೆ ನೀಡಿದ್ರೂ ಅದನ್ನು ಕಂಪನಿ ನಿರ್ಲಕ್ಷಿಸಿದೆ. ಇದೇ ಕಾರಣಕ್ಕೆ ಟ್ರಂಪ್ ದೈತ್ಯ ಮೊಬೈಲ್ ತಯಾರಕ ಆಪಲ್ ಇಂಕ್ ಮೇಲೆ ಕೋಪಗೊಂಡಿದ್ದಾರೆ. ಈಗ ಟ್ರಂಪ್ ಆಪಲ್ಗೆ ಸವಾಲು ಹಾಕಲು ತಮ್ಮದೇ ಮೊಬೈಲ್ ಫೋನ್ ಮಾರ್ಕೆಟ್ ಗೆ ತರುವ ಎಲ್ಲ ಸಿದ್ದತೆ ನಡೆಸಿದ್ದಾರೆ.
ಟ್ರಂಪ್ ಮಾರ್ಕೆಟ್ ಗೆ ತರಲಿರುವ ಫೋನ್ ಚಿನ್ನದಿಂದ ಮಾಡಿದ ಚಿನ್ನದ ಸ್ಮಾರ್ಟ್ಫೋನ್ ಆಗಲಿದೆ. ಇದಕ್ಕಾಗಿಯೇ ಡೊನಾಲ್ಡ್ ಟ್ರಂಪ್, ಟ್ರಂಪ್ ಮೊಬೈಲ್ ಕಂಪನಿ ಪ್ರಾರಂಭಿಸ್ತಿದ್ದಾರೆ. ಸ್ಮಾರ್ಟ್ಫೋನ್ T1 ಟ್ರಂಪ್ ಕುಟುಂಬದಿಂದ ಮೊದಲ ಬಾರಿ ಬಿಡುಗಡೆಯಾಗಲಿರುವ ಮೊದಲ ಫೋನ್ ಆಗಲಿದೆ. ಆಗಸ್ಟ್ ತಿಂಗಳೊಳಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಟ್ರಂಪ್ ಮಗ ಎರಿಕ್ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್ ನ್ಯೂಯಾರ್ಕ್ನ ಟ್ರಂಪ್ ಟವರ್ನಲ್ಲಿ ಈ ಫೋನ್ ಬಿಡುಗಡೆ ಮಾಡಿದ್ದಾರೆ. ವಿಶ್ವದ ಪ್ರಮುಖ ಮೊಬೈಲ್ ಕಂಪನಿಗಳಿಗೆ ಟಕ್ಕರ್ ನೀಡಲು ಟ್ರಂಪ್ ಮೊಬೈಲ್ ಬರ್ತಿದೆ. ಇದು ಸಂಪೂರ್ಣವಾಗಿ ಅಮೆರಿಕದಲ್ಲಿ ತಯಾರಾಗಲಿದೆ. ವಿನ್ಯಾಸದಿಂದ ಉತ್ಪಾದನೆಯವರೆಗೆ ಎಲ್ಲ ಕೆಲಸ ಅಮೆರಿಕದಲ್ಲಿ ನಡೆಯಲಿದೆ. ಅಮೆರಿಕಾದಲ್ಲಿ ತಯಾರಾದ ವಸ್ತುಗಳ ಮೇಲೆ ಪ್ರೀತಿ ಹೊಂದಿರುವ ದೇಶಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಟ್ರಂಪ್ ಈ ಮೊಬೈಲ್ ಬಿಡುಗಡೆ ಮಾಡ್ತಿದ್ದಾರೆ.
ಟ್ರಂಪ್ ಮೊಬೈಲ್ ಬೆಲೆ ಎಷ್ಟು? : ಟ್ರಂಪ್ ಮೊಬೈಲ್ T1 ಫೋನನ್ನು ಟ್ರಂಪ್ ಕಂಪನಿ ತಯಾರಿಸ್ತಿಲ್ಲ. ಬೇರೆ ಮೊಬೈಲ್ ತಯಾರಿಕಾ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಆ ಕಂಪನಿ ತಯಾರಿಸಿದ ಮೊಬೈಲನ್ನು ಟ್ರಂಪ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಟ್ರಂಪ್ ಕಂಪನಿ ಬಿಡುಗಡೆ ಮಾಡಲಿರುವ ಮೊದಲ ಮೊಬೈಲ್ ಬೆಲೆ 499 ಡಾಲರ್ ಅಂದ್ರೆ ಸುಮಾರು 42,800 ರೂಪಾಯಿ ಇರಲಿದೆ. ಇದನ್ನು ವಿಶೇಷ ಸರ್ವಿಸ್ ಪ್ಲಾನ್ 47 ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ಕಂಪನಿ ಹೇಳಿದೆ.
ಈ ಪ್ಲಾನ್ ನಲ್ಲಿ ಪ್ರತಿ ತಿಂಗಳು 47.75 ಡಾಲರ್ ಅಂದ್ರೆ ಸುಮಾರು 4080 ರೂಪಾಯಿ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರಿಗೆ ಉಚಿತ ಟೆಲಿಹೆಲ್ತ್ ಸೇವೆ, ಡಿವೈಸ್ ರಕ್ಷಣೆ ಜೊತೆಗೆ ಅನಿಯಮಿತ ಕರೆ, ಡೇಟಾ ಮತ್ತು ಮೆಸ್ಸೇಜ್ ಸೌಲಭ್ಯ ನೀಡಲಾಗುತ್ತದೆ. ಇದಕ್ಕಾಗಿ, ಯುಎಸ್ನಲ್ಲಿ 250 ಸೀಟ್ ಗಳ ಗ್ರಾಹಕ ಬೆಂಬಲ ಕೇಂದ್ರವನ್ನು ನಿರ್ವಹಿಸುವುದಾಗಿ ಕಂಪನಿ ಹೇಳಿದೆ. ಇದರಲ್ಲಿ ಮನುಷ್ಯರೇ T1 ಫೋನ್ ಬಳಕೆದಾರರ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಪರಿಹಾರಗಳನ್ನು ಒದಗಿಸುತ್ತಾರೆ.
ಆಗಸ್ಟ್ 2025 ರಿಂದ ಟ್ರಂಪ್ ಫೋನ್ ಮಾರಾಟ ಶುರು ಮಾಡಲಿದೆ ಎನ್ನಲಾಗಿದೆ. ಆದ್ರೆ ಟ್ರಂಪ್ ಮೊಬೈಲ್ನ ಅಧಿಕೃತ ವೆಬ್ಸೈಟ್ನಲ್ಲಿ ಸೆಪ್ಟೆಂಬರ್ 2025 ರಿಂದ ಎಂಬ ಮಾಹಿತಿ ಇದೆ. ಜೂನ್ 16 ರಿಂದಲೇ ಇದರ ಪ್ರೀ ಬುಕಿಂಗ್ ಶುರುವಾಗಿದೆ. ಇದಕ್ಕಾಗಿ 100 ಡಾಲರ್ ಶುಲ್ಕ ಪಾವತಿ ಮಾಡ್ಬೇಕು. ಸ್ಮಾರ್ಟ್ ಫೋನ್ ಜೊತೆ ಸರ್ವಿಸ್ ನೆಟ್ವರ್ಕ್ ಸಹ ಪ್ರಾರಂಭಿಸುತ್ತಿದೆ. ಇದರ ಮೂಲಕ, ಕಂಪನಿಯು ತನ್ನದೇ ಆದ ನೆಟ್ವರ್ಕ್ ಮೂಲಕ 100 ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಕರೆ ಸೌಲಭ್ಯವನ್ನು ಒದಗಿಸಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.