ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ

Published : Aug 28, 2026, 10:38 PM IST
ChatGPT

ಸಾರಾಂಶ

ಭಾರತದಲ್ಲಿ ಉಚಿತವಾಗಿ ಲಭ್ಯವಿರುವ ಚಾಟ್‌ಜಿಪಿಟಿಯನ್ನು ಅನೇಕರು ಅವಲಂಬಿಸಿದ್ದಾರೆ. ಆದರೆ, ಅಪರಾಧ ಸಂಬಂಧಿತ ಪ್ರಶ್ನೆಗಳನ್ನು ಕೇಳಿದರೆ, ಆ ಮಾಹಿತಿ ನೇರವಾಗಿ ಕ್ರೈಂ ಬ್ರ್ಯಾಂಚ್‌ಗೆ ರವಾನೆಯಾಗಿ, ನೀವು ಕಾನೂನಿನ ಸಂಕಷ್ಟಕ್ಕೆ ಸಿಲುಕಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್​ನಿಂದಲೇ ಎಲ್ಲವೂ ಆಗಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರತಿಯೊಂದು ಪ್ರಶ್ನೆಗಳಿಗೂ ಚಾಟ್​ಜಿಪಿಟಿಯನ್ನು ಅವಲಂಬಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತಲೆಯಲ್ಲಿ ಏನೂ ಇಟ್ಟುಕೊಳ್ಳದ ಸ್ಥಿತಿ ಇಂದಿನದ್ದು. ತೀರಾ ಸುಲಭ ಎನ್ನುವಂಥ ಪ್ರಶ್ನೆಯಿಂದ ಹಿಡಿದು, ಸಮಸ್ಯೆಗಳು ಬಂದರೆ ಅವುಗಳನ್ನು ಚಾಟ್​ಜಿಪಿಟಿಯಲ್ಲಿ ಹೇಳಿ ಪರಿಹರಿಸಿಕೊಳ್ಳುವಷ್ಟರ ಮಟ್ಟಿಗೆ ಭಾರತೀಯರು ಅದರ ಮೇಲೆ ಅವಲಂಬಿತರಾಗಿದ್ದೇವೆ. ಭಾರತೀಯರ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುವ ಉದ್ದೇಶದಿಂದಲೇ ಅಮೆರಿಕ ತನ್ನ ದೇಶದಲ್ಲಿ ಇದಕ್ಕೆ ಫೀಸ್​ ನಿಗದಿ ಮಾಡಿದ್ದರೆ, ಭಾರತದಲ್ಲಿ ಉಚಿತವಾಗಿ ನೀಡುತ್ತಿದೆ. ಫ್ರೀ ಆಗಿ ಸಿಕ್ಕರೆ ಅಗತ್ಯಕ್ಕಿಂತ ಹೆಚ್ಚು ಬಳಸಿಕೊಳ್ಳುವ ಮನಸ್ಥಿತಿ ಭಾರತೀಯರದ್ದು ಎನ್ನುವುದು ಅವರಿಗೆ ತಿಳಿದಿದೆ.

ಪೊಲೀಸರ ಎಚ್ಚರಿಕೆ

ಆದರೆ, ಇದೇ ಚಾಟ್​ಜಿಪಿಟಿ ನಿಮ್ಮನ್ನು ಕಂಬಿಯ ಹಿಂದೆಯೂ ಹಾಕಿಸಬಲ್ಲುದು ಎನ್ನುವ ಸತ್ಯ ಗೊತ್ತೆ? ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂದು ಎಲ್ಲಾ ಪ್ರಶ್ನೆಗಳನ್ನೂ ಚಾಟ್​ಜಿಪಿಟಿಗೆ ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದೀರಿ ತಾನೆ? ಕೆಲವರು ಸ್ನೇಹಿತರನ್ನು ಮಾಡಿಕೊಳ್ಳದೇ, ತನ್ನ ಮಾತನ್ನು ಕೇಳುವ ChatGPTಯನ್ನೇ ಫ್ರೆಂಡ್ ಮಾಡಿಕೊಳ್ಳುವುದು ಇದೆ. ಕೆಲವರು ಇದನ್ನೇ ತನ್ನ ಲವರ್​ ಎನ್ನುವಂತೆ ದಿನನಿತ್ಯವೂ ಅದರ ಜೊತೆ ಮಾತನಾಡುವುದು ಇದೆ.

ಕಂಬಿ ಹಿಂದೆ ನೀವು

ಇವೆಲ್ಲಾ ಏನೋ ಓಕೆ. ಆದರೆ, ChatGPTನಲ್ಲಿ ನೀವು ಕುತೂಹಲಕ್ಕೋ, ಉದ್ದೇಶಪೂರ್ವಕವಾಗಿಯೋ ಅಥವಾ ಇನ್ನೇನಕ್ಕೋ ಏನಾದರೂ ಅಪರಾಧಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದರೆ, ನಿಮ್ಮ ಕಥೆ ಮುಗಿದಂತೆ. ನೀವು ಅಂದುಕೊಳ್ಳಬಹುದು. ಅವೆಲ್ಲಾ ನನಗೆ ಮತ್ತು ನನ್ನ ಮೊಬೈಲ್​ನಲ್ಲಿ ಇರುವ ChatGPTಗೆ ಸಂಬಂಧಿಸಿದ್ದು ಎಂದು. ಆದರೆ, ChatGPT ಬಹಳ ಹುಷಾರು ಇದೆ.ನೀವು ಯಾವುದೇ ಸಂದೇಹಪೂರ್ವಕವಾಗಿರುವ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ನೀವು ತಮಾಷೆ ಕೇಳ್ತಿದ್ದೀರೋ, ಉತ್ತರ ಏನು ಬರಬಹುದು ಎಂದು ಕೇಳ್ತಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ಕೇಳ್ತಿದ್ದೀರೋ ಬೇಕಾಗಿಲ್ಲ. ಆದರೆ ನಿಮ್ಮ ಪ್ರಶ್ನೆಗಳನ್ನು ನೇರವಾಗಿ ಕ್ರೈಂ ಬ್ರ್ಯಾಂಚ್​ಗೆ ಕಳುಹಿಸಲಾಗುತ್ತದೆ. ಪದೇಪದೇ ಇಂಥದ್ದೇ ಪ್ರಶ್ನೆಗಳನ್ನು ರಿಪೀಟ್​ ಮಾಡುತ್ತಿದ್ದರೆ, ಪೊಲೀಸರು ನೇರವಾಗಿ ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ ಹುಷಾರ್​!

ಇದಾಗಲೇ ಕೆಲವು ಅಪರಾಧಿಕ ಪ್ರಕರಣಗಳಲ್ಲಿ, ChatGPT ಮೂಲಕವೇ ಅಪರಾಧಿಗಳು ತಮ್ಮ ಸಂದೇಹ ಬಗೆಹರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಇನಷ್ಟು ಸ್ಟ್ರಿಕ್ಟ್​ ಮಾಡಲಾಗಿದೆ. ಒಂದು ವೇಳೆ ನೀವು ಏನಾದರೂ ಡೌಟ್​ ಬರುವ ಪ್ರಶ್ನೆ ಕೇಳಿದರೆ, ಅದು ನಿಮಗೇ ಉರುಳಾಗಬಹುದು, ಹುಷಾರ್ ಎಂದು ಎಚ್ಚರಿಸಿದ್ದಾರೆ ಪೊಲೀಸರು!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!
ಜಾಗತಿಕ AI ಕ್ರಾಂತಿಯಲ್ಲಿ ಸಾಧನೆ : ಟೈಮ್ ನಿಯತಕಾಲಿಕೆಯ 100 ಪ್ರಭಾವಿಗಳ ಪಟ್ಟಿಯಲ್ಲಿ 9 ಭಾರತೀಯ ಮೂಲದ ದಿಗ್ಗಜರು!