ಕ್ರಿಪ್ಟೋಗೆ ಭವಿಷ್ಯವಿದೆ, ಅಮೆಝಾನ್‌ ಕೂಡ ಭವಿಷ್ಯದಲ್ಲಿ NFT ಮಾರಬಹುದು: ಸಿಐಓ ಆಂಡಿ ಜಾಸ್ಸಿ

Published : Apr 15, 2022, 01:37 PM ISTUpdated : Apr 15, 2022, 02:03 PM IST
ಕ್ರಿಪ್ಟೋಗೆ ಭವಿಷ್ಯವಿದೆ,  ಅಮೆಝಾನ್‌ ಕೂಡ ಭವಿಷ್ಯದಲ್ಲಿ NFT ಮಾರಬಹುದು:  ಸಿಐಓ ಆಂಡಿ ಜಾಸ್ಸಿ

ಸಾರಾಂಶ

ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ತಾವು ಯಾವುದೇ ಬಿಟ್‌ಕಾಯಿನ್ ಅಥವಾ ಎನ್‌ಎಫ್‌ಟಿಗಳನ್ನು ಹೊಂದಿಲ್ಲ ಆದರೆ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಆಶಾವಾದಿಯಾಗಿದ್ದಾರೆ ಎಂದು ಹೇಳಿದ್ದಾರೆ

ಗ್ಲೋಬಲ್‌ ಮಾರುಕಟ್ಟೆಯಲ್ಲಿ ಈಗ ಕ್ರಿಪ್ಟೋಕರೆನ್ಸಿ ಹವಾ ಜೋರಾಗಿದೆ. ಪ್ರಭಾವಿ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಕ್ರಿಪ್ಟೋನತ್ತ ಮುಖ ಮಾಡಿದ್ದು  ಎನ್‌ಎಫ್‌ಟಿಗಳು ಈಗಾಗಲೇ ಜನಪ್ರಿಯತೆಯನ್ನು ಗಳಿಸಿವೆ. ಎನ್‌ಎಫ್‌ಟಿಗಳಲ್ಲಿನ ವ್ಯಾಪಾರವು ಕಳೆದ ವರ್ಷ $17.6 ಶತಕೋಟಿಯನ್ನು ಮುಟ್ಟಿತು, ಇದು 2020 ರಿಂದ 21,000 ರಷ್ಟು ಏರಿಕೆಯಾಗಿದೆ ಎಂದು nonfungible.com ವರದಿ ತಿಳಿಸಿದೆ. ಈ ನಡುವೆ ಇ-ಕಾಮರ್ಸ್‌ ದೈತ್ಯ ಅಮೆಝಾನ್‌ ಸಿಇಓ ಆಂಡಿ ಜಾಸ್ಸಿ (Andy Jassy) ಕ್ರಿಪ್ಟೋಕರೆನ್ಸಿ ಮತ್ತು ನಾನ್‌ ಫಂಜಿಬಲ್ ಟೋಕನ್‌ಗಳ (NFT) ಸಾಮರ್ಥ್ಯದ ಬಗ್ಗೆ ಮಾತಾನಾಡಿದ್ದಾರೆ. 

ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ, ಜಾಸ್ಸಿ ತಾವು ಯಾವುದೇ ಬಿಟ್‌ಕಾಯಿನ್ ಅಥವಾ ಎನ್‌ಎಫ್‌ಟಿಗಳನ್ನು ಹೊಂದಿಲ್ಲ ಆದರೆ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಆಶಾವಾದಿಯಾಗಿದ್ದಾರೆ ಎಂದು ಹೇಳಿದ್ದಾರೆ. 

"ಕಾಲಕ್ರಮೇಣ ನೀವು ಕ್ರಿಪ್ಟೋ ದೊಡ್ಡದಾಗುವುದನ್ನು ನೋಡುತ್ತೀರಿ ಎಂದು ನಾನು ನಂಬುತ್ತೇನೆ. ಎನ್‌ಎಫ್‌ಟಿಗಳು ಬಹಳ ಗಮನಾರ್ಹವಾಗಿ ಬೆಳೆಯುತ್ತವೆ ಎಂದು ನಾನು ನಿರೀಕ್ಷಿಸುತ್ತೇನೆ " ಎಂದು ಜಾಸ್ಸಿ ಉಲ್ಲೇಖಸಿ ಸಿಎನ್‌ಬಿಸಿ ವರದಿ ಮಾಡಿದೆ.  

ಇದನ್ನೂ ಓದಿ: NFT ಪ್ರವೇಶಿಸಿ ಮಹೀಂದ್ರಾ ಥಾರ್‌: ಒಂದು ವಾರದಲ್ಲಿ 11 ಲಕ್ಷ ರೂ. ಬಿಡ್ಡಿಂಗ್!

ಸದ್ಯಕ್ಕಿಲ್ಲ ಕ್ರಿಪ್ಟೋ:  ಅಮೆಜಝಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪನ್ನಗಳ ಪಾವತಿಗೆ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುತ್ತದೆಯೇ ಎಂದು ಕೇಳಿದಾಗ "ನಮ್ಮ ಚಿಲ್ಲರೆ ವ್ಯಾಪಾರದಲ್ಲಿ ಪಾವತಿ ಕಾರ್ಯವಿಧಾನವಾಗಿ ಕ್ರಿಪ್ಟೋವನ್ನು ಬಹುಶಃ ಸದ್ಯಕ್ಕೆ ಸೇರಿಸುವುದಿಲ್ಲ" ಎಂದು ಜಾಸ್ಸಿ ಹೇಳಿದ್ದಾರೆ. ಆದರೆ ಅಮೆಝಾನ್ ಒಂದು ದಿನ ಎನ್‌ಎಫ್‌ಟಿಗಳನ್ನು ಮಾರಾಟ ಮಾಡಬಹುದೇ ಎಂದು ಕೇಳಿದಾಗ "ಭವಿಷ್ಯದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಇದು ಸಾಧ್ಯ ಎಂದು ನಾನು ಭಾವಿಸುತ್ತೇನೆ " ಎಂದು ಹೇಳಿದ್ದಾರೆ

ಇ-ಕಾಮರ್ಸ್ ದೈತ್ಯ ಕಂಪನಿಯ ಹಲವಾರು ವಿಭಾಗಗಳಿಗೆ ತಜ್ಞರಾಗಿರುವ ಕ್ರಿಪ್ಟೋ ಡೆವಲಪರ್‌ಗಳನ್ನು ನೇಮಿಸಿಕೊಳ್ಳುತ್ತಿದೆ. ನವೆಂಬರ್ 2021 ರಲ್ಲಿ, ಅಮೆಝಾನ್ ವೆಬ್ ಸೇವೆಗಳು (AWS) "ಜಾಗತಿಕ ಡಿಜಿಟಲ್ ಆಸ್ತಿ ಸಮುದಾಯದಾದ್ಯಂತ ಅಳವಡಿಕೆಗೆ ಸಹಾಯ ಮಾಡುವ" Principal digital asset specialist ಉದ್ಯೋಗಾವಕಾಶವನ್ನ ಪೋಸ್ಟ್ ಮಾಡಿದೆ. 

ಅಮೆಝಾನ್ ವೆಬ್ ಸೇವೆಗಳ (AWS) ಬ್ಲಾಕ್‌ಚೈನ್ ತಂಡಕ್ಕೆ ಹಿರಿಯ ಉತ್ಪನ್ನ ವ್ಯವಸ್ಥಾಪಕರಂತಹ ಬ್ಲಾಕ್‌ಚೈನ್-ಕೇಂದ್ರಿತ ಪಾತ್ರಗಳಿಗಾಗಿ ಕಂಪನಿಯು ಇನ್ನೂ ತೆರೆದ ಸ್ಥಾನಗಳನ್ನು ಹೊಂದಿದೆ. ಜೂನ್ 2021 ರಲ್ಲಿ, ಅಮೆಜಾನ್ ಡಿಜಿಟಲ್ ಕರೆನ್ಸಿ ಮತ್ತು ಬ್ಲಾಕ್‌ಚೈನ್ ಉತ್ಪನ್ನ ಲೀಡ್‌ಗಾಗಿ ವೆಬ್ 3-ಕೇಂದ್ರಿತ ತಂತ್ರ ಮತ್ತು ಉತ್ಪನ್ನ ಮಾರ್ಗಸೂಚಿಯನ್ನು ನಿರ್ಮಿಸಲು ಸಹಾಯ ಮಾಡಲು ಉದ್ಯೋಗಾವಾಕಾಶವನ್ನು ಪೋಸ್ಟ್‌ ಮಾಡಿತ್ತು. ಹೀಗಾಗಿ ಈ ಎಲ್ಲ ಬೆಳವಣಿಗೆ ಗಮನಿಸಿದಾಗ ಅಮೆಝಾನ್‌ ಕ್ರಿಪ್ಟೋ ಮಾರುಕಟ್ಟೆಗೆ ಎಂಟ್ರಿ ಕೊಡಬಹುದು ಎಂಬುದು ಟೆಕ್‌ ವಿಶ್ಲೇಷಕರ ಅಭಿಪ್ರಾಯ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ಒಪ್ಪೊ ಫೈಂಡ್ X9 ಸೀರಿಸ್, ಪ್ರೋ ಲೆವಲ್ ಕ್ಯಾಮೆರಾ,AI ಟೂಲ್ಸ್ ಜೊತೆ ಸುದೀರ್ಘ ಸಮಯದ ಬ್ಯಾಟರಿ ಸ್ಮಾರ್ಟ್‌ಫೋನ್